Author: admin
ಅಯೋಧ್ಯೆಯ ಟ್ರಸ್ಟ್‌ಗೆ ಭಕ್ತರು ನೀಡಿದ ದೇಣಿಗೆ ಹಣದಲ್ಲಿ ಕೋಟ್ಯಂತರ ರೂಪಾಯಿ ದುರುಪಯೋಗ ಅಥವಾ ಕಳ್ಳತನವಾಗಿದೆ ಎಂಬ ಗಂಭೀರ ಆರೋಪಗಳು ಇತ್ತೀಚೆಗೆ ಎದ್ದಿವೆ. ಮುಖ್ಯವಾಗಿ 7 ಕೋಟಿ ರೂಪಾಯಿಗೂ ಅಧಿಕ ಮೊತ್ತದ ಹಣ ನಾಪತ್ತೆಯಾಗಿದೆ ಎಂದು ಹೇಳಲಾಗುತ್ತಿದೆ. ಈ ಬಗ್ಗೆ ವಿಶ್ವಹಿಂದೂ ಪರಿಷದ್‌ನ ಅಂತರರಾಷ್ಟ್ರೀಯ ಅಧ್ಯಕ್ಷ ಅಲೋಕ್ ಕುಮಾರ್ ಎಕ್ಸ್ ಪೋಸ್ಟ್ ಮಾಡಿದ್ದು, ಪಾರದರ್ಶಕ ತನಿಖೆಗೆ ಆಗ್ರಹಿಸಿದ್ದಾರೆ. https://x.com/VHPDigital/status/2069774332524625946 ಅಯೋಧ್ಯೆ ರಾಮಮಂದಿರ ಪ್ರಕರಣದಲ್ಲಿ ಎಫ್‌ಐಆರ್ ದಾಖಲಿಸಬೇಕು, ತನಿಖೆಯನ್ನು ತ್ವರಿತಗೊಳಿಸಬೇಕು, ತ್ವರಿತ ನ್ಯಾಯಾಲಯವು ಪ್ರಕರಣವನ್ನು ದಿನನಿತ್ಯದ ಆಧಾರದ ಮೇಲೆ ಕೈಗೆತ್ತಿಕೊಳ್ಳಬೇಕು ಮತ್ತು ತಪ್ಪಿತಸ್ಥರು ಶಿಕ್ಷೆ ಅನುಭವಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ. ರಾಮ ಮಂದಿರ ದೇಣಿಗೆ ಅವ್ಯವಹಾರ ಪ್ರಕರಣದ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ(ಎಸ್‌ಐಟಿ) ಈಗಾಗಲೇ ಉತ್ತರ ಪ್ರದೇಶ ಸರ್ಕಾರಕ್ಕೆ ಮಧ್ಯಂತರ ವರದಿ ಸಲ್ಲಿಸಿದೆ. ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಸಂಜಯ್ ಪ್ರಸಾದ್ ಅವರಿಗೆ 3 ಸದಸ್ಯರ ತನಿಖಾ ತಂಡವು 150 ಪುಟಗಳ ವರದಿಯನ್ನು ಸಲ್ಲಿಸಿದ್ದು, ಅಂತಿಮ ವರದಿಯನ್ನು ಇನ್ನೊಂದು ವಾರದಲ್ಲಿ ನೀಡಲಿದೆ ಎನ್ನಲಾಗಿದೆ. ರಾಮ…
ರಮೇಶ್ ಎಂಬ ಮಧ್ಯಮ ವರ್ಗದ ಉದ್ಯೋಗಿ. ಒಂದು ದಿನ ಬೆಳಿಗ್ಗೆ ಅವನ ಮೊಬೈಲ್‌ಗೆ ಬ್ಯಾಂಕಿನ ಹೆಸರಿನಲ್ಲಿ ಒಂದು ಸಂದೇಶ ಬಂತು. “ನಿಮ್ಮ ಬ್ಯಾಂಕ್ ಖಾತೆ ಸ್ಥಗಿತಗೊಳ್ಳಲಿದೆ. ತಕ್ಷಣವೇ ಈ ಲಿಂಕ್ ಕ್ಲಿಕ್ ಮಾಡಿ ವಿವರಗಳನ್ನು ನವೀಕರಿಸಿ.” ರಮೇಶ್ ಆತಂಕಗೊಂಡ. ಕೆಲಸದ ಒತ್ತಡದಲ್ಲಿದ್ದ ಅವನು ಯೋಚಿಸದೇ ಲಿಂಕ್ ಕ್ಲಿಕ್ ಮಾಡಿದ. ತೆರೆಯಲಾದ ಪುಟದಲ್ಲಿ ತನ್ನ ಖಾತೆ ಸಂಖ್ಯೆ, ಪಾಸ್‌ವರ್ಡ್ ಮತ್ತು OTP ನಮೂದಿಸಿದ. ಕೆಲವೇ ನಿಮಿಷಗಳಲ್ಲಿ ಅವನ ಬ್ಯಾಂಕ್ ಖಾತೆಯಿಂದ ಸಾವಿರಾರು ರೂಪಾಯಿಗಳು ಮಾಯವಾದವು. ಬ್ಯಾಂಕ್‌ಗೆ ಕರೆ ಮಾಡಿದಾಗ ಸತ್ಯ ತಿಳಿಯಿತು. ಅದು ಬ್ಯಾಂಕ್ ಕಳುಹಿಸಿದ ಸಂದೇಶವೇ ಅಲ್ಲ. ಸೈಬರ್ ಕಳ್ಳರು ಹಾಕಿದ ಬಲೆ! ಇಂತಹ ಘಟನೆಗಳು ಇಂದು ಸಾವಿರಾರು ಜನರ ಜೀವನದಲ್ಲಿ ನಡೆಯುತ್ತಿವೆ. ಒಂದು ಕಾಲದಲ್ಲಿ ಕಳ್ಳರು ಮನೆಯ ಬಾಗಿಲು ಒಡೆದು ಒಳಬರುತ್ತಿದ್ದರು. ಈಗ ಅವರು ನಮ್ಮ ಮೊಬೈಲ್ ಮತ್ತು ಕಂಪ್ಯೂಟರ್‌ಗಳ ಮೂಲಕ ನಮ್ಮ ವೈಯಕ್ತಿಕ ಮಾಹಿತಿಯನ್ನೂ ಹಣವನ್ನೂ ಕದಿಯುತ್ತಿದ್ದಾರೆ. ಇದೇ ಕಾರಣಕ್ಕಾಗಿ “ಸೈಬರ್ ಸುರಕ್ಷತೆ” ಎಂಬ ಪದ ಇಂದು ಅತ್ಯಂತ…
ಸಂಪಿಗೆಹಳ್ಳಿಯಲ್ಲಿ ನಡೆದಿದ್ದ ವೃದ್ಧ ದಂಪತಿಗಳ ನಿಗೂಢ ಸಾವು ಪ್ರಕರಣಕ್ಕೆ ದೊಡ್ಡ ತಿರುವು ಸಿಕ್ಕಿದೆ. ಆರಂಭದಲ್ಲಿ ಮಕ್ಕಳಿಗೆ ಹೊರೆಯಾಗಬಾರದೆಂದು ಪತ್ನಿಯನ್ನು ಕೊಂದು 85ರ ವೃದ್ಧ ಆತ್ಮಹತ್ಯೆ ಎಂದು ಸದ್ದು ಮಾಡಿದ್ದ ಸುದ್ದಿಯ ಅಸಲಿ ಸತ್ಯವು ಈಗ ಎಲ್ಲರನ್ನು ಭಾವುಕರನ್ನಾಗಿಸಿದೆ. ಪತ್ನಿ ಸುಮಿತ್ರಾ ಪ್ರಸಾದ್(77) ಅವರು ತೀವ್ರ ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದು ಆಕೆಯ ಸಾವನ್ನು ತಡೆಯಲಾರದೇ ನೊಂದ ಪತಿ ಶಿವಾನಂದಂ ಪ್ರಸಾದ್(83) ನೇಣು ಬಿಗಿದು ಆತ್ಮಹತ್ಯೆಗೆ ಶರಣಾಗಿದ್ದಾರೆ ಎನ್ನುವುದು ವೈದ್ಯಕೀಯ ಪರೀಕ್ಷೆಯಲ್ಲಿ ದೃಢಪಟ್ಟಿದೆ. ಸಂಪಿಗೆಹಳ್ಳಿಯ ನಿವಾಸದಲ್ಲಿ ಸುಮಿತ್ರಾ ಪ್ರಸಾದ್ ಹಾಗೂ ಶಿವಾನಂದಂ ಪ್ರಸಾದ್ ಅವರ ಶವಗಳು ಪತ್ತೆಯಾಗಿದ್ದವು. ನಿನ್ನೆ ಈ ದಂಪತಿಗಳ ಪುತ್ರ, ತಂದೆಯೇ ತಾಯಿಯನ್ನು ಕೊಲೆ ಮಾಡಿ ತದನಂತರ ತಾನೂ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರಿಗೆ ದೂರು ನೀಡಿದ್ದರು. ಶವಗಳ ಮರಣೋತ್ತರ ಪರೀಕ್ಷೆಯ ವರದಿಯಲ್ಲಿ ಸುಮಿತ್ರಾ ಪ್ರಸಾದ್ ಅವರ ದೇಹದ ಮೇಲೆ ಯಾವುದೇ ಹಲ್ಲೆಯ ಕುರುಹುಗಳಿರಲಿಲ್ಲ. ಅವರಿಗೆ ತೀವ್ರ ಹೃದಯಾಘಾತ ಆಗಿದ್ದರಿಂದಲೇ ಅವರು ಸಾವನ್ನಪ್ಪಿದ್ದಾರೆ ಎಂದು ವೈದ್ಯರು ಖಚಿತಪಡಿಸಿದ್ದಾರೆ. ಪತ್ನಿ ಇದ್ದಕ್ಕಿದ್ದಂತೆ ಹೃದಯಾಘಾತದಿಂದ ಸಾವನ್ನಪ್ಪಿದ್ದನ್ನು…
ಪುತ್ತೂರು ಸಮೀಪದ ಪೋಳ್ಯದಲ್ಲಿ ಕಾಲಿನ ಸ್ವಾಧೀನ ಕಳೆದುಕೊಂಡ ನಾಯಿ ಮೇಲೆ ಮನೆಯ ಯಜಮಾನ ತೋರಿದ ಮಮಕಾರ ಎಲ್ಲೆಡೆ ಸುದ್ದಿಯಾಗುತ್ತಿದೆ. ಇವರ ಮನೆಯ ‘ಚಿನ್ನು’ ಹೆಸರಿನ ನಾಯಿಯು ಮೂರು ವಾರಗಳ ಹಿಂದೆ ಕಾಣೆಯಾದಾಗ ಮನೆಯ ಯಜಮಾನ ಗಣೇಶ್ ಕೇರ ಅವರು ಕಂಗಾಲಾಗಿದ್ದರು. ತಕ್ಷಣವೇ ಸಾಮಾಜಿಕ ಜಾಲತಾಣಗಳು ಮತ್ತು ಪತ್ರಿಕೆಗಳಲ್ಲಿ ಜಾಹೀರಾತು ನೀಡಿ, ನಾಯಿಯ ಸುಳಿವು ನೀಡಿದವರಿಗೆ ಅಥವಾ ಹುಡುಕಿಕೊಟ್ಟವರಿಗೆ 50,000 ರೂಪಾಯಿ ಬಹುಮಾನ ನೀಡುವುದಾಗಿ ಘೋಷಿಸಿದ್ದರು. ಫಿಟ್ಸ್ ಸಮಸ್ಯೆಯಿಂದಾಗಿ ಈ ನಾಯಿಯು ಕಾಲಿನ ಸ್ವಾಧೀನವು ಕಳೆದುಕೊಂಡಿತ್ತು. ಸ್ಥಳೀಯ ನಿವಾಸಿ ಪುರಂದರ ಎಂಬವರು ನಾಪತ್ತೆಯಾಗಿದ್ದ ಚಿನ್ನು ನಾಯಿಯನ್ನು ಹುಡುಕಿಕೊಟ್ಟಿದ್ದಾರೆ. ಇದೀಗ ಕೊಟ್ಟ ಮಾತಿನಂತೆ ಗಣೇಶ್ ಕೇರ ಅವರು ಪುರಂದರ ಅವರನ್ನು ಮನೆಗೆ ಕರೆಸಿ, 50,000 ರೂಪಾಯಿಗಳ ಚೆಕ್ ಅನ್ನು ವಿತರಿಸಿ ತಮ್ಮ ಸಂತಸವನ್ನು ಹಂಚಿಕೊಂಡಿದ್ದಾರೆ. ಬಹುಮಾನದ ಮೊತ್ತವನ್ನು ಪಾರದರ್ಶಕವಾಗಿ ನೀಡಿ, ಕೊಟ್ಟ ಮಾತಿನಂತೆ ನಡೆದ ಶ್ವಾನ ಪ್ರಿಯ ಗಣೇಶ್ ಅವರ ನಿಜವಾದ ಪ್ರಾಣಿ ಪ್ರೀತಿಗೆಗೆ ವ್ಯಾಪಕ ಪ್ರಶಂಸೆ ಸಾಮಾಜಿಕ ಜಾಲತಾಣದಲ್ಲಿ ವ್ಯಕ್ತವಾಗುತ್ತಿದೆ. ಅಂದ ಹಾಗೆ…
ಪುತ್ತೂರಿನ Growth Up ಪಬ್ಲಿಕ್ ರಿಲೇಶನ್ ಸಂಸ್ಥೆ ಹಾಗೂ ಭಾರತವಾಣಿ ಮೀಡಿಯಾದ ನೂತನ ವಿಸ್ತೃತ ಕಛೇರಿಯ ಉದ್ಘಾಟನೆ
Growth Up PR ಸಂಸ್ಥೆ ಹಾಗೂ ಭಾರತವಾಣಿ ಮೀಡಿಯಾ 1 ವರ್ಷದಿಂದ ಪ್ರಣವ ಭಟ್ ನೇತೃತ್ವದಲ್ಲಿ ಹಲವು ಬ್ರಾಂಡ್ ಗಳಿಗೆ ಮತ್ತು ಉದ್ಯಮಿಗಳಿಗೆ, ಸ್ಟಾರ್ಟಪ್ ಗಳಿಗೆ ತಮ್ಮದೇ ಆದ ರೀತಿಯಲ್ಲಿ ಸಾಮಾಜಿಕ ಜಾಲತಾಣ ನಿರ್ವಹಣೆ ಸೇವೆಯನ್ನು ನೀಡುತ್ತಿದೆ ಅಂತಾರಾಷ್ಟ್ರೀಯ ಕಾಂಬೋಡಿಯಾ ದೇಶದ ಬ್ರಾಂಡ್ ಗಳಿಗೂ ತಮ್ಮ ಸೇವೆ ನೀಡುರುವುದಲ್ಲದೇ ಕರ್ನಾಟಕದ ಹಲವು ಬ್ರಾಂಡ್ ಗಳಿಗೆ ಮಾರುಕಟ್ಟೆ ಸಿಗುವಲ್ಲಿ ಪ್ರಮುಖ ಪಾತ್ರ ವಹಿಸಿರುವುದು ಶ್ಲಾಘನೀಯ ಹಾಗೂ ಭಾರತವಾಣಿ ಮೀಡಿಯಾ ಯುಟ್ಯೂಬ್ ಚಾನೆಲ್ ನ ಪೋಡ್ಕಸ್ಟ್ ಮೂಲಕ ಜನಮನ್ನಣೆ ಗಳಿಸಿದೆ ಪುತ್ತೂರಿನ ಬೈಪಾಸ್ ರಸ್ತೆಯ ತಮನ್ವಿ ಸಿಲ್ಕ್ ಬಳಿಯ ಸಮೃದ್ಧಿ ಕಾಂಪ್ಲೆಕ್ಸ್ ನ 2 ನೇ ಮಹಡಿಯಲ್ಲಿ Growth Up PR ಹಾಗೂ ಭಾರತವಾಣಿ ಮೀಡಿಯಾದ ನೂತನವಾದ ಪೋಡ್ಕಸ್ಟ್ ಸ್ಟುಡಿಯೋ ಒಳಗೊಂಡಿರುವ ಕಛೇರಿಯನ್ನು ವೈದ್ಯಕೀಯ ಲೋಕದಲ್ಲಿ ಗುರುತಿಸಿಕೊಂಡ ಡಾ. ಅನನ್ಯ ಲಕ್ಷ್ಮೀ ಹಾಗೂ ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಸಿಕೊಂಡಿರುವ ಆಕಾಂಕ್ಷ ಚಾರಿಟೇಬಲ್ ಟ್ರಸ್ಟ್ ಸಂಸ್ಥಾಪಕರಾದ ಡಾ. ಶ್ರೀಶ ಭಟ್ ಅವರು ಉದ್ಘಾಟನೆ ನೆರವೇರಿಸಿದರು ಶ್ರೀಯುತ ವೇದವ್ಯಾಸ ರಾಮಕುಂಜ, ಶ್ರೀಯುತ ವರದರಾಜ್ ಚಂದ್ರಗಿರಿ,…
‘ಟಗರು’ನಲ್ಲಿ ಸರೋಜಾ ಪಾತ್ರದ ಮೂಲಕ ಪ್ರೇಕ್ಷಕರ ಮನಗೆದ್ದ ನಟಿ ತ್ರಿವೇಣಿ ರಾವ್ ಇದೀಗ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ ಎಂದು ವರದಿಯಾಗಿದೆ. ಚಿತ್ರರಂಗದಲ್ಲಿ ಸಕ್ರಿಯವಾಗಿರುವ ತ್ರಿವೇಣಿ ರಾವ್, ತ್ರಿಪುರದ ಮಾಜಿ ಮುಖ್ಯಮಂತ್ರಿ ಹಾಗೂ ಹಾಲಿ ಬಿಜೆಪಿ ಸಂಸದ ಬಿಪ್ಲಬ್ ಕುಮಾರ್ ದೇವ್ ಅವರೊಂದಿಗೆ ವಿವಾಹವಾಗಿದ್ದಾರೆ ಎನ್ನಲಾಗಿದೆ. ದೆಹಲಿ ನಗರದಲ್ಲಿ ಕುಟುಂಬ ಸದಸ್ಯರು ಮತ್ತು ಆಪ್ತರ ಸಮ್ಮುಖದಲ್ಲಿ ನಡೆದ ಖಾಸಗಿ ಸಮಾರಂಭದಲ್ಲಿ ಈ ಜೋಡಿ ಸಪ್ತಪದಿ ತುಳಿದಿದೆ. ಜೂನ್ 24 ರಂದು ಅಗರ್ತಲಾದ ಪಂಚತಾರಾ ಹೋಟೆಲ್‌ನಲ್ಲಿ ಅದ್ಧೂರಿ ಆರತಕ್ಷತೆ ಕಾರ್ಯಕ್ರಮ ನಡೆಯಲಿದ್ದು, ಬಿಜೆಪಿಯ ಹಿರಿಯ ನಾಯಕರು, ಸಚಿವರು ಮತ್ತು ಬಾಲಿವುಡ್‌ನ ಹಲವು ತಾರೆಯರು ಬಂದು ನವ ಜೋಡಿಗೆ ಶುಭ ಕೋರಲಿದ್ದಾರೆ. ತ್ರಿವೇಣಿ ರಾವ್, ಸೂರಿ ನಿರ್ದೇಶನದ, ಶಿವರಾಜ್‌ಕುಮಾರ್, ಡಾಲಿ ಧನಂಜಯ್ ಅಭಿನಯದ ಟಗರು ಸಿನಿಮಾದ ಮೂಲಕ ಖ್ಯಾತಿ ಗಳಿಸಿದ್ದರು. ಕಾನ್ಸ್‌ಟೇಬಲ್ ಸರೋಜಾ ಎಂಬ ಕ್ಯಾರೆಕ್ಟರ್ ಮಾಡಿದ್ದ ತ್ರಿವೇಣಿ ರಾವ್ ಜನಮನ ಗೆದ್ದಿದ್ದರು. ತಾಯಿಗೆ ತಕ್ಕ ಮಗ, ರಾಜ ಮಾರ್ತಾಂಡ, ಸಲಗ, ಯುವರತ್ನ ಸೇರಿದಂತೆ ಕನ್ನಡದ…
ಪಶ್ಚಿಮ ಬಂಗಾಳದ ತೃಣಮೂಲ ಕಾಂಗ್ರೆಸ್ (TMC) ಪಕ್ಷದಲ್ಲಿ ಬಂಡಾಯ ತೀವ್ರಗೊಂಡಿದ್ದು, ಉಲುಬೇರಿಯಾ ಪುರ್ಬಾ ಶಾಸಕ ರಿತಬ್ರತ ಬ್ಯಾನರ್ಜಿ ಅವರು ತಮ್ಮದೇ “ನಿಜವಾದ ತೃಣಮೂಲ ಕಾಂಗ್ರೆಸ್” ಎಂದು ಹೇಳಿದ್ದು, ಪಕ್ಷದ ಸಂಸ್ಥಾಪಕಿ ಮಮತಾ ಬ್ಯಾನರ್ಜಿಯನ್ನೇ ಅಧ್ಯಕ್ಷ ಸ್ಥಾನದಿಂದಲೇ ವಜಾಗೊಳಿಸಿದ್ದಾರೆ. ಅಭಿಷೇಕ್ ಬ್ಯಾನರ್ಜಿ ಅವರನ್ನು ಪಕ್ಷದಿಂದ ಅಮಾನತುಗೊಳಿಸುವ ಮೂಲಕ ಶಿಸ್ತು ಕ್ರಮ ಕೈಗೊಳ್ಳಲಾಗಿದೆ. ರಿತಬ್ರತ ಬ್ಯಾನರ್ಜಿ ನೇತೃತ್ವದ ಅತೃಪ್ತ ಬಣವು ಹಿರಿಯ ಶಾಸಕ ಅರೂಪ್ ರಾಯ್ ಅವರನ್ನು ಟಿಎಂಸಿಯ ನೂತನ ರಾಷ್ಟ್ರೀಯ ಅಧ್ಯಕ್ಷರನ್ನಾಗಿ ಸೋಮವಾರ ಘೋಷಿಸಿದೆ. ಕೋಲ್ಕತ್ತಾದಲ್ಲಿ ನಡೆದ ವಿಶೇಷ ಅಧಿವೇಶನದಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದ್ದು, ಫಿರ್ಹಾದ್ ಹಕೀಮ್ ಸೇರಿದಂತೆ ಹಲವು ನಾಯಕರನ್ನೊಳಗೊಂಡ ಹೊಸ ರಾಷ್ಟ್ರೀಯ ಕಾರ್ಯಕಾರಿ ಸಮಿತಿಯನ್ನೂ ಪ್ರಕಟಿಸಲಾಗಿದೆ. ಈ ಸಭೆಯಲ್ಲಿ ಟಿಎಂಸಿಯ 60 ಶಾಸಕರು ಹಾಗೂ ಕೋಲ್ಕತ್ತಾ ಮಹಾನಗರ ಪಾಲಿಕೆಯ (KMC) 70 ಕೌನ್ಸಿಲರ್‌ಗಳು ಭಾಗವಹಿಸಿದ್ದರು. ಪಕ್ಷದ ಸಂವಿಧಾನದ ಪ್ರಕಾರ ಪ್ರತಿ ಮೂರು ವರ್ಷಕ್ಕೊಮ್ಮೆ ರಾಷ್ಟ್ರೀಯ ಕಾರ್ಯಕಾರಿಣಿ ಸಮಿತಿಯನ್ನು ಪುನರ್ ರಚಿಸಬೇಕು. ಆದರೆ, 2022ರ ಫೆಬ್ರವರಿ ಬಳಿಕ ಯಾವುದೇ ಹೊಸ ಸಮಿತಿ…
ಗುರುದತ್ತ ಗಾಣಿಗ ನಿರ್ದೇಶನದ ಚಿತ್ರದಲ್ಲಿ ಪ್ರಜ್ವಲ್ ದೇವರಾಜ್ ಮತ್ತು ರಾಜ್ ಬಿ ಶೆಟ್ಟಿ ನಟಿಸಿದ್ದಾರೆ. ಕರಾವಳಿ ಚಿತ್ರ ಜುಲೈ 24 ರಂದು ರಾಜ್ಯದಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. ಕಳೆದ ವರ್ಷ, ಜುಲೈ 25ರಂದು ರಾಜ್ ಬಿ ಶೆಟ್ಟಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದ ‘ಸು ಫ್ರಮ್ ಸೋ’ ಚಿತ್ರ ಸ್ಯಾಂಡಲ್‌ವುಡ್‌ಗೆ ಹೊಸ ಚೈತನ್ಯ ತುಂಬಿತ್ತು. 6 ಕೋಟಿ ಬಜೆಟ್‌ನ ಈ ಚಿತ್ರ 100 ಕೋಟಿ ಕಲೆಕ್ಷನ್ ಮಾಡಿತ್ತು. ಒಂದು ವರ್ಷದ ನಂತರ ಕರಾವಳಿ ಪ್ರದೇಶದ ಕಥಾಹಂದರ ಹೊಂದಿರುವ ಮತ್ತೊಂದು ಕನ್ನಡ ಚಿತ್ರ ಬಿಡುಗಡೆಯಾಗಲಿದ್ದು, ವ್ಯಾಪಕ ನಿರೀಕ್ಷೆಗಳನ್ನು ಮೂಡಿಸಿದೆ. ಸು ಫ್ರಮ್ ಸೋ ಚಿತ್ರ ಕಳೆದ ವರ್ಷ ಜುಲೈ-25,2025 ರಂದು ತೆರೆ ಕಂಡಿತ್ತು, ಈ ವರ್ಷ ಜುಲೈ-25 ‘ಕರಾವಳಿ’ ಚಿತ್ರ ಬಿಡುಗಡೆಯಾಗುತ್ತಿದೆ. ಈಗಾಗಲೇ ಈ ಚಿತ್ರದ ಪೋಸ್ಟರ್ ಮತ್ತು ಟೀಸರ್‌ನಿಂದ ಹೆಚ್ಚು ಗಮನ ಸೆಳೆದಿದೆ. ಚಿತ್ರದಲ್ಲಿ ಸಂಪದ ನಾಯಕಿಯಾಗಿ ನಟಿಸಿದರೆ, ಮಿತ್ರ, ರಮೇಶ್ ಇಂದಿರಾ ಮತ್ತು ಶ್ರೀಧರ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ವಿಕೆ ಫಿಲ್ಮ್ ಅಸೋಸಿಯೇಷನ್‌ನ…
ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ವಿರುದ್ಧ “ಸುಳ್ಳು ಮತ್ತು ಅವಹೇಳನಕಾರಿ” ಮಾಹಿತಿಯನ್ನು ಹಂಚಿಕೊಂಡಿದ್ದಕ್ಕಾಗಿ ಸಾಮಾಜಿಕ ಮಾಧ್ಯಮ ಖಾತೆಗಳ ನಿರ್ವಾಹಕರ ವಿರುದ್ಧ ಬೆಂಗಳೂರು ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ವಕೀಲ ದೀಪು ಸಿಆರ್ ಅವರ ದೂರಿನ ಆಧಾರದ ಮೇಲೆ ಜೂನ್ 20 ರಂದು ಸದಾಶಿವನಗರ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ. ಎಫ್‌ಐಆರ್ ಪ್ರಕಾರ, ಜೂನ್ 17 ರಂದು ‘ಕುಮಾರಸ್ವಾಮಿ ಫಾರ್ ಸಿಎಂ’ ಮತ್ತು ‘ಜನತಾ ದಳ ಸೆಕ್ಯುಲರ್’ ಫೇಸ್‌ಬುಕ್ ಹ್ಯಾಂಡಲ್‌ಗಳು “ಹಳೆಯ ಅಭ್ಯಾಸ ಮತ್ತೆ ಪ್ರಾರಂಭವಾಗುತ್ತದೆ; ಸುಟ್ಟುಹೋದರೂ ಸಹಜ ಸ್ವಭಾವ ಹೋಗುವುದಿಲ್ಲ” ಎಂಬ ಶೀರ್ಷಿಕೆಯಡಿಯಲ್ಲಿ “ಅವಹೇಳನಕಾರಿ” ಮಾಹಿತಿಯನ್ನು ಹಂಚಿಕೊಂಡಿದ್ದಾರೆ. ಬಿಎನ್ಎಸ್ ಸೆಕ್ಷನ್ 192 ಅಡಿಯಲ್ಲಿ ಪೊಲೀಸರು ಎಫ್ಐಆರ್ ದಾಖಲಿಸಿದ್ದು, ತನಿಖೆ ಆರಂಭಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಪೋಸ್ಟ್‌ಗಳ ಮೂಲ, ಅವುಗಳನ್ನು ಪ್ರಕಟಿಸಿದ ವ್ಯಕ್ತಿಗಳು ಹಾಗೂ ಅದರ ಹಿಂದಿರುವ ಉದ್ದೇಶದ ಕುರಿತು ತನಿಖೆ ಆರಂಭಿಸಿದ್ದಾರೆ.
ಡಿಎಂಕೆ – ಬಿಜೆಪಿ ಮೈತ್ರಿ? ಮುಂಗಾರು ಅಧಿವೇಶನಕ್ಕೂ ಮುನ್ನ ರಾಷ್ಟ್ರ ರಾಜಕಾರಣದಲ್ಲಿ ಮಹತ್ತರ ಬದಲಾವಣೆಯ ಸುಳಿವು?
ರಾಜಕೀಯದಲ್ಲಿ ಯಾರು ಶತ್ರುಗಳಲ್ಲ, ಯಾರು ಮಿತ್ರರಲ್ಲ ಎಂಬುದು ಮತ್ತೊಮ್ಮೆ ಸಾಬೀತಾಗಿದೆ. ತಮಿಳುನಾಡು ರಾಜಕೀಯದಲ್ಲಿ ಕಾಂಗ್ರೆಸ್ ನೇತೃತ್ವದ ‘ಇಂಡಿ’ ಒಕ್ಕೂಟದಿಂದ ಡಿಎಂಕೆ ಹೊರಬಂದ ಬೆನ್ನಲ್ಲೇ, ಬಿಜೆಪಿ ನೇತೃತ್ವದ ಎನ್‌ಡಿಎ ಒಕ್ಕೂಟದೊಂದಿಗೆ ಡಿಎಂಕೆ ಮೈತ್ರಿ ಮಾಡಿಕೊಳ್ಳುವ ಸಾಧ್ಯತೆಗಳ ಕುರಿತಾದ ಚರ್ಚೆಗಳು ನಡೆಯುತ್ತಿವೆ. ಟಿವಿಕೆ ಪಕ್ಷ ಬಹುಮತಕ್ಕೆ ಸಮೀಪ ಬರುತ್ತಿದ್ದಂತೆ ಬಣ ಬದಲಾಯಿಸಿದ ಕಾಂಗ್ರೆಸ್ ಪಕ್ಷ ಹಲವು ದಶಕಗಳ ಜೊತೆಗಿದ್ದ ಡಿಎಂಕೆ ಸಖ್ಯ ಬಿಟ್ಟು ಜೋಸೆಫ್ ವಿಜಯ್ ಸರ್ಕಾರದ ಜೊತೆ ಕೈ ಜೋಡಿಸಿತ್ತು. ಬಳಿಕ ಇಂಡಿ ಒಕ್ಕೂಟದ ಮೈತ್ರಿ ಮುರಿದುಕೊಂಡ ಡಿಎಂಕೆ, ಇದೀಗ ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿಕೂಟದತ್ತ ಡಿಎಂಕೆ ಹೆಜ್ಜೆ ಇಡುತ್ತಿದೆ ಎಂಬ ಸುದ್ದಿ ಹರಿದಾಡುತ್ತಿದೆ. ದೂರವಾದ ಡಿಎಂಕೆ ಮಿತ್ರರು; ಮುಸ್ಲಿಂ ಲೀಗ್ ಕೂಡ ಎಕ್ಸಿಟ್! ತಮಿಳುನಾಡು ವಿಧಾನಸಭೆ ಚುನಾವಣೆಯ ನಂತರ ಡಿಎಂಕೆಯ ಮಿತ್ರಪಕ್ಷವಾದ ಕಾಂಗ್ರೆಸ್, ಸಿಪಿಐ, ವಿಸಿಕೆ ಮತ್ತು ಐಯುಎಂಎಲ್ ಸೇರಿದಂತೆ ಡಿಎಂಕೆಯ ಹಳೇ ಮಿತ್ರಪಕ್ಷಗಳೆಲ್ಲವೂ ಡಿಎಂಕೆ ಮೈತ್ರಿಕೂಟದಿಂದ ಹೊರಬಂದು ಆಡಳಿತಾರೂಢ ಟಿವಿಕೆ ಸರ್ಕಾರಕ್ಕೆ ಬೆಂಬಲ ಘೋಷಿಸಿವೆ. ಇದೀಗ ಚೆನ್ನೈನಲ್ಲಿ ನಡೆದ ತನ್ನ…
