Author: admin

ಅಂತರರಾಷ್ಟ್ರೀಯ ಯೋಗ ದಿನದ ಅಂಗವಾಗಿ ಕೋಲ್ಕತ್ತಾದ ಐತಿಹಾಸಿಕ ರೆಡ್ ರೋಡ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು, ‘ಆರೋಗ್ಯಕರ ವೃದ್ಧಾಪ್ಯಕ್ಕಾಗಿ ಯೋಗ’ ಎಂಬ ಈ ವರ್ಷದ ವಿಷಯವನ್ನು ಉಲ್ಲೇಖಿಸಿದ ಅವರು, ವಯಸ್ಸು ಹೆಚ್ಚಾಗುವುದು ಸಹಜ ಪ್ರಕ್ರಿಯೆಯಾಗಿದ್ದರೂ, ಆರೋಗ್ಯ ಮತ್ತು ಸಾಮರ್ಥ್ಯ ಕುಗ್ಗುವುದು ಅನಿವಾರ್ಯವಲ್ಲ. ಯೋಗವು ಕೇವಲ ದೇಹವನ್ನು ಸದೃಢಗೊಳಿಸುವ ಸಾಧನವಲ್ಲ, ಆರೋಗ್ಯಕರ ಮತ್ತು ಚೈತನ್ಯಭರಿತ ವೃದ್ಧಾಪ್ಯಕ್ಕೆ ದಾರಿಯಾಗಿದೆ. 70ರ ವಯಸ್ಸಿನಲ್ಲಿ 50ರ ವಯಸ್ಸಿಗಿಂತ ಹೆಚ್ಚು ಆರೋಗ್ಯವಂತರಾಗಿರಬೇಕು ಎಂದು ಹೇಳಿದರು. ಆರೋಗ್ಯಕರ ಜೀವನಶೈಲಿಯನ್ನು ಅಳವಡಿಸಿಕೊಳ್ಳುವ ಮಹತ್ವವನ್ನು ಒತ್ತಿ ಹೇಳಿದ ಪ್ರಧಾನಿ ಮೋದಿ, ಇಂದು ಇಡೀ ದೇಶವು ಯೋಗದ ಶಕ್ತಿಯಿಂದ ತುಂಬಿ ತುಳುಕುತ್ತಿರುವಂತೆ ಕಾಣುತ್ತಿದೆ. ಹಿಮಾಲಯದಿಂದ ಹಿಂದೂ ಮಹಾಸಾಗರದವರೆಗೆ, ಈಶಾನ್ಯ ಮತ್ತು ಬಂಗಾಳದಿಂದ ಪಶ್ಚಿಮದ ಸೌರಾಷ್ಟ್ರದವರೆಗೆ, ಇಡೀ ದೇಶವು ಯೋಗದ ಶಕ್ತಿಯಿಂದ ತುಂಬಿ ತುಳುಕುತ್ತಿರುವಂತೆ ಕಾಣುತ್ತಿದೆ ಎಂದು ಹೇಳಿದರು. ಯೋಗ ಇಂದು ಭಾರತದ ಸಾಂಸ್ಕೃತಿಕ ಪರಂಪರೆ ಮಾತ್ರವಲ್ಲದೆ ಜಾಗತಿಕ ಸಾಮೂಹಿಕ ಚಳುವಳಿಯಾಗಿಯೂ ಮಾರ್ಪಟ್ಟಿದೆ ಎಂದು ಹೇಳಿದ ಪ್ರಧಾನಿ, ಜನರು ಯೋಗವನ್ನು…

Read More

ಬೆಂಗಳೂರು(reporterkarnataka.com): ಡಿ.ಕೆ. ಶಿವಕುಮಾರ್ ಸರ್ಕಾರದಲ್ಲಿ ಮೊದಲ ವಿಕೆಟ್ ಪತನಗೊಂಡಿದೆ. ಸಚಿವ ರಾಮಲಿಂಗಾ ರೆಡ್ಡಿ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಇದೇ ವೇಳೆ ತಮ್ಮ ರಾಜೀನಾಮೆಗೆ ಖಾತೆ ಕಾರಣ ವಲ್ಲ, ನೋವು ಎಂದಿದ್ದಾರೆ. ನಿನ್ನೆಯಷ್ಟೇ 13 ಸಚಿವರಿಗೆ ಖಾತೆ ಹಂಚಿಕೆ ಮಾಡಲಾಗಿದೆ. ಮಂತ್ರಿಗಳು ತಮ್ಮ ತಮ್ಮ ಇಲಾಖೆ ಅಧಿಕಾರಿಗಳ ಜೊತೆ ಮೀಟಿಂಗ್ ಆರಂಭಿಸಿದ್ರೆ, ಇತ್ತ ಜಲಸಂಪನ್ಮೂಲ ಸಚಿವ ರಾಮಲಿಂಗಾ ರೆಡ್ಡಿ ರಾಜೀನಾಮೆ ನೀಡಿ ಡಿಕೆ ಶಿವಕುಮಾರ್ ಹಾಗೂ ಹೊಸ ಸರ್ಕಾರಕ್ಕೆ ಬಿಗ್ ಶಾಕ್ ನೀಡಿದ್ದಾರೆ.

Read More

ಮಂಗಳೂರು(reporterkarnataka.com): ಬಹುನಿರೀಕ್ಷಿತ “ಫುಲ್ ಮೀಲ್ಸ್” ಸಿನಿಮಾ ನ.21ರಂದು ರಾಜ್ಯಾದ್ಯಂತ ಬಿಡುಗಡೆಯಾಗಲಿದೆ ಎಂದು ನಾಯಕ ನಟ ಲಿಖಿತ್ ಶೆಟ್ಟಿ ಹೇಳಿದರು. ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಅವರು ಈ ಕುರಿತು ಮಾಹಿತಿ ನೀಡಿದರು.

Read More

ಮಂಗಳೂರು(reporterkarnataka.com): ವಿಶನ್ ಕೊಂಕಣಿ ನಿರ್ಮಾಣದ ದಾಯ್ಜಿವರ್ಲ್ಡ್ ಫಿಲ್ಮ್ಸ್ ಬ್ಯಾನರಿನಡಿ ತಯಾರಾದ ಬಹುನಿರೀಕ್ಷಿತ ಕೊಂಕಣಿ ಚಿತ್ರ ’ಬಾಪಾಚೆ ಪುತಾಚೆ ನಾಂವಿಂ’ ನವೆಂಬರ್ 28ರಂದು ಮಂಗಳೂರಿನ ಭಾರತ್ ಸಿನೆಮಾಸ್ ನಲ್ಲಿ ತೆರೆಕಾಣಲಿದೆ. ಚಿತ್ರವು ಈಗಾಗಲೇ ಹಲವು ಪ್ರೀಮಿಯರ್ ಪ್ರದರ್ಶನಗಳನ್ನು ಯಶಸ್ವಿಯಾಗಿ ಮುಗಿಸಿದ್ದು ಪ್ರೇಕ್ಷಕರಿಂದ ಹಾಗೂ ಸಿನೆಮಾ ವಿಶ್ಲೇಷಕರಿಂದ ಚಪ್ಪಾಳೆ ಗಿಟ್ಟಿಸಿಕೊಂಡಿದೆ. ಯುವ ಸಾಹಿತಿ, ಪತ್ರಕರ್ತ ಸ್ಟ್ಯಾನಿ ಬೇಳ ಬಾಪಾಚೆ ಪುತಾಚೆ ನಾಂವಿಂ ಚಿತ್ರಕ್ಕೆ ಕಥೆ , ಸಂಭಾಷಣೆ ಬರೆದು, ಚಿತ್ರವನ್ನು ನಿರ್ದೇಶಿಸಿದ್ದಾರೆ. ಸಂಜಯ್ ರಾಡ್ರಿಗಸ್ ಹಿನ್ನಲೆ ಸಂಗೀತವಿದೆ. ಯುವ ಛಾಯಾಗ್ರಾಹಕ ಜೋಯಲ್ ಶಮನ್ ಕ್ಯಾಮೆರಾ ಚಲಾಯಿಸಿದ್ದಾರೆ. ಉಡುಪಿ, ಪುತ್ತೂರು ಹಾಗೂ ದೇರಳಕಟ್ಟೆಯಲ್ಲಿ ಡಿಸೆಂಬರ್ 5ರಂದು ಚಿತ್ರವು ತೆರೆಕಾಣಲಿದೆ ಎಂದು ನಿರ್ಮಾಣ ಸಂಸ್ಥೆ ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿದೆ

Read More

ಪ್ರಜ್ವಲ್ ಫಿಲಂಸ್ ಲಾಂಛನದಲ್ಲಿ ತಯಾರಾದ ಪ್ರಜ್ವಲ್ ಶೆಟ್ಟಿ ನಿರ್ಮಾಣ ಹಾಗೂ ಕೀರ್ತನ್ ಭಂಡಾರಿ ನಿರ್ದೇಶನದ ‘ಗಜಾನನ ಕ್ರಿಕೆಟರ್ಸ್’ (ಜಂತೊಟ್ಟು ಸಿನ್ಸ್ 1983) ತುಳು ಚಲನಚಿತ್ರವು ಕರಾವಳಿ ಜಿಲ್ಲೆಯಾದ್ಯಂತ ತೆರೆಕಂಡಿದೆ. ಭಾರತ್ ಸಿನಿಮಾಸ್ ನಲ್ಲಿ ಸಿನಿಮಾದ ಬಿಡುಗಡೆ ಸಮಾರಂಭ ಜರಗಿತು. ಅತಿಥಿಗಳು ಸಮಾರಂಭವನ್ನು ದೀಪ ಬೆಳಗಿಸಿ ಉದ್ಘಾಟಿಸಿದರು. ವಿಧಾನಸಭಾ ಅಧ್ಯಕ್ಷ ಯು.ಟಿ ಖಾದರ್ ಸಮಾರಂಭಕ್ಕೆ ಆಗಮಿಸಿ ಶುಭ ಹಾರೈಸಿದರು. ಹಿರಿಯ ನಿರ್ದೇಶಕ ವಿಜಯಕುಮಾರ್ ಕೊಡಿಯಲ್ ಬೈಲ್ ಮಾತನಾಡಿ, ತುಳು ಸಿನಿಮಾ ರಂಗದಲ್ಲಿ ಹಿರಿಯರು ಹಾಕಿಕೊಟ್ಟ ದಾರಿಯಲ್ಲಿ ಕಿರಿಯರು, ಹೊಸಬರು ಸಿನಿಮಾ ರಂಗದಲ್ಲಿ ಮಿಂಚುತ್ತಿದ್ದಾರೆ. ಯುವ ಪ್ರತಿಭಾವಂತರು ಸಿನಿಮಾರಂಗದಲ್ಲಿ ಬೌಂಡರಿ, ಸಿಕ್ಸರ್ ಬಾರಿಸುವ ಮೂಲಕ ಚೆನ್ನಾಗಿ ಆಡಲಿ ಎಂದರು. ನಿರ್ಮಾಪಕ ಪ್ರಕಾಶ್ ಪಾಂಡೇಶ್ವರ್ ಮಾತನಾಡಿ, ಗಜಾನನ ಕ್ರಿಕೆಟರ್ಸ್ ಸಿನಿಮಾದ ಪ್ರೀಮಿಯರ್ ಶೋಗಳನ್ನು ಪ್ರೇಕ್ಷಕರು ನೋಡಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ನಿರ್ಮಾಪಕ ಪ್ರಜ್ವಲ್ ಶೆಟ್ಟಿ, ರೋಹನ್ ಪಿರೇರ, ಸಂತೋಷ್ ಲಾಡ್ ಕಷ್ಟಪಟ್ಟು ಸಿನಿಮಾ ಮಾಡಿದ್ದಾರೆ. ಸಿನಿಮಾವನ್ನು ಎಲ್ಲರೂ ನೋಡಿ ಪ್ರೋತ್ಸಾಹಿಸಿ ಎಂದರು. ಉದ್ಯಮಿ ಮೈಕಲ್ ಡಿ ಸೋಜ…

Read More

ಮಂಗಳೂರು(reporterkarnataka.com): ಆರ್ ಎಸ್ ಸಿನಿಮಾಸ್, ಶೂಲಿನ್ ಫಿಲಂಸ್, ಮುಗ್ರೋಡಿ ಪ್ರೊಡಕ್ಷನ್ ಲಾಂಛನದಲ್ಲಿ ತಯಾರಾದ ರೂಪೇಶ್ ಶೆಟ್ಟಿ ನಿರ್ದೇಶನದ ಜೈ ಸಿನಿಮಾ ಭಾರತ್ ಸಿನಿಮಾಸ್ ನಲ್ಲಿ ಶುಕ್ರವಾರ ಬಿಡುಗಡೆಗೊಂಡಿತು. ಅತಿಥಿಗಳು ದೀಪ ಬೆಳಗಿಸುವ ಮೂಲಕ ಸಿನಿಮಾ ಪ್ರದರ್ಶನಕ್ಕೆ ಚಾಲನೆ ನೀಡಿದರು. ಬಳಿಕ ಮಾತಾಡಿದ ಹಿರಿಯ ರಂಗಕರ್ಮಿ ಡಾ.ದೇವದಾಸ್ ಕಾಪಿಕಾಡ್ ಅವರು, “ರೂಪೇಶ್ ಶೆಟ್ಟಿ ನಿರ್ದೇಶನದಲ್ಲಿ ಜೈ ಸಿನಿಮಾ ಬಹಳ ಚೆನ್ನಾಗಿ ಮೂಡಿಬಂದಿದೆ. ಪ್ರತಿಯೊಂದು ತುಳು ಸಿನಿಮಾಕ್ಕೂ ಬೆಂಬಲ ನೀಡಬೇಕಾದ್ದು ನಮ್ಮೆಲ್ಲರ ಕರ್ತವ್ಯ. ತುಳುವರು ಸಿನಿಮಾ ನೋಡುವ ಮೂಲಕ ಚಿತ್ರತಂಡವನ್ನು ಪ್ರೋತ್ಸಾಹಿಸಬೇಕು” ಎಂದರು.

Read More

ಮಂಗಳೂರು(reporterkarnataka.com): “ಜಯಕಿರಣ ಫಿಲಂಸ್ ಲಾಂಛನದಲ್ಲಿ , ಪ್ರಕಾಶ್ ಪಾಂಡೇಶ್ವರ್ ನಿರ್ಮಾಣದಲ್ಲಿ ಹಾಗೂ ಕೆ. ಸೂರಜ್ ಶೆಟ್ಟಿ ನಿರ್ದೇಶನದಲ್ಲಿ ಅದ್ಭುತವಾಗಿ ಸಿದ್ಧಗೊಂಡಿರುವ ನಾನ್‌ ವೆಜ್ ತುಳು ಸಿನಿಮಾ ಫೆಬ್ರವರಿ 6ರಂದು ಕರಾವಳಿ ಜಿಲ್ಲೆಯಾದ್ಯಂತ ತೆರೆಕಾಣಲಿದೆ, ಈ ಸಿನಿಮಾವನ್ನು ಎಲ್ಲ ಮಲ್ಟಿಪ್ಲೆಕ್ಸ್‌ನಲ್ಲೂ ಕೇವಲ 99 ರೂ.ಗೆ ನೋಡಬಹುದಾಗಿದೆ. ದುಬಾರಿ ಟಿಕೆಟ್‌ ಕೊಟ್ಟು ಸಿನಿಮಾ ನೋಡಲು ಸಾಧ್ಯವಾಗದವರು ಇಂಥದ್ದೊಂದು ಸುಂದರ ಹಾಗೂ ಅತ್ಯುತ್ತಮ ಸಿನಿಮಾವನ್ನು ನೋಡದೆ ಇರಬಾರದು ಎಂಬ ಉದ್ದೇಶದಿಂದ ಕೇವಲ 99 ರೂ. ಟಿಕೆಟ್‌ ನಿಗದಿಪಡಿಸಿದ್ದು, ಇದು ತುಳುಚಿತ್ರರಂಗದಲ್ಲಿ ಒಂದು ಹೊಸ ಸಂಚಲನ ಉಂಟು ಮಾಡಿದೆ. ಸಿಂಗಲ್‌ ಥಿಯೇಟರ್‌ಗಿಂತಲೂ ಕಡಿಮೆ ದರದಲ್ಲಿ ಈ ಸಿನಿಮಾವನ್ನು ತುಳು ಪ್ರೇಮಿಗಳು ಮಲ್ಟಿಫ್ಲೆಕ್ಸ್ ಗಳಲ್ಲಿ ನೋಡುವಂತಹ ಅವಕಾಶ ಇದಾಗಿದೆ“ ಎಂದು ಚಿತ್ರದ ನಿರ್ಮಾಪಕ ಪ್ರಕಾಶ್ ಪಾಂಡೇಶ್ವರ್ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.

Read More

ಬೆಂಗಳೂರಿನಲ್ಲಿ ಡ್ರೈವರ್ ಕೆಲಸ ಮಾಡಿ ಜೀವನ ಸಾಗಿಸುತ್ತಿದ್ದ ಹೊಸಕಾಡು ನಿವಾಸಿ ಅಶೋಕ್ ರವರು ಕಳೆದ 3 ತಿಂಗಳಿನಿಂದ ಹೃದಯ ಸಂಬಂಧಿ ರೋಗದಿಂದ ಬಳಲುತ್ತಿದ್ದು, ಶುಶ್ರೂಷೆ ನಡೆಯುತ್ತಿದೆ. ಹೃದಯದಲ್ಲಿ ಸ್ಟಂಟ್ ಅಳವಡಿಸಿದ ಕಾರಣ ದುಡಿಯಲು ಸಾಧ್ಯವಾಗದೆ ಹಾಸಿಗೆ ಹಿಡಿದಿದ್ದು, ಆರ್ಥಿಕ ಸಮಸ್ಯೆ ತಲೆದೋರಿದ ಕಾರಣ ಅಶೋಕ್ ರವರ ಶ್ರೀಮತಿಯವರ ಮನವಿಯ ಮೇರೆಗೆ ಶಿವಾಯ ಫೌಂಡೇಶನ್ ವತಿಯಿಂದ 25,000 ರೂಪಾಯಿಗಳ ಧನಸಹಾಯ ಮಾಡಲಾಯಿತು. ಈ ಸಂಧರ್ಭ ಶಿವಾಯ ಫೌಂಡೇಶನ್ ನ ಗೌರವಾಧ್ಯಕ್ಷ ನವೀನ್ ಚಂದ್ರ ಜೆ ಶೆಟ್ಟಿ, ಅಧ್ಯಕ್ಷ ಪ್ರಶಾಂತ್ ಶೆಟ್ಟಿ ಪಲಿಮಾರು ಮತ್ತಿತರರು ಉಪಸ್ಥಿತರಿದ್ದರು.

Read More

ಮುಲ್ಕಿ ಸುಂದರ್ ರಾಮ ಶೆಟ್ಟಿ ಕನ್ವೆನ್ಷನ್ ಸೆಂಟರ್ ನಲ್ಲಿ ಸ್ಯಾಂಡಿಸ್ ಕಂಪನಿಯ ಆಶ್ರಯದಲ್ಲಿ ನಡೆದ ಕೋಸ್ಟಲ್ ಫಿಲಂ ಅವಾಡ್ಸ್೯ ನಲ್ಲಿ ರಾಕ್ ಸ್ಟಾರ್ ರೂಪೇಶ್ ಶೆಟ್ಟಿ ನಿರ್ದೇಶನ ‘ಜೈ’ ತುಳು ಸಿನಿಮಾದಲ್ಲಿ ಅಕ್ಷರ್ ಜೆ ಶೆಟ್ಟಿಯ ಅಭಿನಯಕ್ಕಾಗಿ ಬಾಲನಟ ಪ್ರಶಸ್ತಿ ಲಭಿಸಿದೆ. ಕ್ರೀಡೆಯಲ್ಲೂ ಸಾಧನೆ ಮಾಡುತ್ತಿರುವ ಅಕ್ಷರ್ ಜೆ ಶೆಟ್ಟಿ ಹಿರಿಯ ಪತ್ರಕರ್ತ ಹಾಗೂ ಸುರತ್ಕಲ್ ಬಂಟರ ಸಂಘದ ಅಧ್ಯಕ್ಷರಾದ ಜಗನ್ನಾಥ ಶೆಟ್ಟಿ ಬಾಳ ಅವರ ಸುಪುತ್ರ.

Read More

ಬಂಟರ ಯಾನೆ ನಾಡವರ ಮಾತೃ ಸಂಘದ ಪುತ್ತೂರು ತಾಲೂಕು ಸಮಿತಿಯ ನಿಕಟಪೂರ್ವ ಸಂಚಾಲಕರಾದ ನ್ಯಾಯವಾದಿ, ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಸದಸ್ಯ ಕುಂಬ್ರ ದುರ್ಗಾಪ್ರಸಾದ್ ರೈ ಅವರಿಗೆ ಬಂಟರ ಯಾನೆ ನಾಡವರ ಮಾತೃ ಸಂಘದ ಪುತ್ತೂರು ತಾಲೂಕು ಸಮಿತಿ ಹಾಗೂ ಪುತ್ತೂರು ತಾಲೂಕು ಬಂಟರ ಸಂಘದ ವತಿಯಿಂದ ಎಂ. ಸುಂದರರಾಮ್ ಶೆಟ್ಟಿ ಸ್ಮಾರಕ ಬಂಟರ ಭವನದಲ್ಲಿ ಚಾವಡಿ ಸಮ್ಮಾನವನ್ನು ಮಾಡಿ ಗೌರವಿಸಲಾಯಿತು. ಬಂಟರ ಯಾನೆ ನಾಡವರ ಮಾತೃ ಸಂಘದ ಉಪಾಧ್ಯಕ್ಷರಾಗಿರುವ ಪುತ್ತೂರು ತಾಲೂಕು ಬಂಟರ ಸಂಘದ ಅಧ್ಯಕ್ಷ ಕಾವು ಹೇಮನಾಥ ಶೆಟ್ಟಿ ಅವರು ಕುಂಬ್ರ ದುರ್ಗಾಪ್ರಸಾದ್ ರೈ ಅವರನ್ನು ಸನ್ಮಾನಿಸಿ ಮಾತನಾಡಿ, ದುರ್ಗಾಪ್ರಸಾದ್ ರೈಯವರು ಬಹುಮುಖ ಪ್ರತಿಭೆ ಉಳ್ಳವರು, ಸಂಘಟನಾ ಚತುರತೆಯನ್ನು ಹೊಂದಿದವರು, ನ್ಯಾಯವಾದಿಯಾಗಿ ತುಳು ಅಕಾಡೆಮಿ ಸದಸ್ಯರಾಗಿ ಹೆಸರನ್ನು ಪಡೆದಿದ್ದಾರೆ. ಇವರು ಬಂಟರ ಯಾನೆ ನಾಡವರ ಮಾತೃ ಸಂಘದ ಪುತ್ತೂರು ತಾಲೂಕು ಸಮಿತಿ ಸಂಚಾಲಕರಾಗಿ ಉತ್ತಮ ಸೇವೆಯನ್ನು ನೀಡಿದ್ದಾರೆ. ಇವರ ಸಂಘಟನಾ ಶಕ್ತಿ ನಮಗೆ ಇನ್ನೂ ಬೇಕು. ಇವರು ಮುಂದೆಯೂ…

Read More