Author: admin

ದೇಶದ ಭದ್ರತೆಗೆ ಧಕ್ಕೆ ತರುತ್ತಿರುವ ಉಗ್ರಗಾಮಿ ಸಂಘಟನೆಗಳ ವಿರುದ್ಧ ಕೇಂದ್ರ ಗೃಹ ಸಚಿವಾಲಯ ಶನಿವಾರ ಮತ್ತೊಂದು ಸುತ್ತಿನ ಪ್ರಹಾರ ನಡೆಸಿದೆ. ಜೈಶ್-ಎ-ಮೊಹಮ್ಮದ್ (JeM), ಲಷ್ಕರ್-ಎ-ತೊಯ್ಬಾ (LeT), ಜಮಾತ್-ಉದ್-ದಾವಾ ಮತ್ತು ದಿ ರೆಸಿಸ್ಟೆನ್ಸ್ ಫ್ರಂಟ್ (TRF) ಸಂಘಟನೆಗಳ ಜತೆ ಸಂಪರ್ಕ ಹೊಂದಿರುವ ಬರೋಬ್ಬರಿ 23 ಜನರನ್ನು ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯ್ದೆ (UAPA) ಸೆಕ್ಷನ್ 35ರ ಅಡಿಯಲ್ಲಿ ‘ಘೋಷಿತ ಭಯೋತ್ಪಾದಕರು’ ಎಂದು ಅಧಿಕೃತವಾಗಿ ಪ್ರಕಟಿಸಿದೆ. ಭಾರತದ ವಿವಿಧ ಭಾಗಗಳಲ್ಲಿ ನಡೆದ ಭೀಕರ ಉಗ್ರರ ದಾಳಿ ಹಾಗೂ ದೇಶವಿರೋಧಿ ಕೃತ್ಯಗಳಲ್ಲಿ ಈ 23 ಮಂದಿ ಪ್ರಮುಖ ಪಾತ್ರ ವಹಿಸಿದ್ದರು ಎಂಬುದು ಸಾಬೀತಾದ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ. 1967ರ ಯುಎಪಿಎ ಕಾಯ್ದೆಗೆ 2019 ರಲ್ಲಿ ತಿದ್ದುಪಡಿ ತಂದ ನಂತರ, ಕೇವಲ ಉಗ್ರಗಾಮಿ ಸಂಘಟನೆಗಳನ್ನಷ್ಟೇ ಅಲ್ಲದೆ ವೈಯಕ್ತಿಕವಾಗಿಯೂ ‘ಭಯೋತ್ಪಾದಕರು’ ಎಂದು ಘೋಷಿಸಲು ಮಾಡಲು ಕೇಂದ್ರ ಸರ್ಕಾರಕ್ಕೆ ಅಧಿಕಾರ ಸಿಕ್ಕಿದೆ. ಈಗ ಈ 23 ಜನರ ಹೆಸರುಗಳನ್ನು ಪಟ್ಟಿಗೆ ಸೇರಿಸಿರುವುದರಿಂದ, ರಾಷ್ಟ್ರೀಯ ತನಿಖಾ ಸಂಸ್ಥೆ (NIA) ತಕ್ಷಣವೇ…

Read More

ಪುತ್ತೂರು: ಸಮಾಜ ಸೇವೆಗೆ ಮೀಸಲಾಗಿರುವ ಕಾವು ಪುತ್ತಿಲ ಪರಿವಾರ ಸೇವಾ ಟ್ರಸ್ಟ್, ಪುತ್ತೂರು ಇದರ ಕಾವು ಘಟಕವು ಮಾನವೀಯ ಕಾರ್ಯವನ್ನು ಮುಂದುವರಿಸಿದೆ ಮಾಡ್ನೂರು ಗ್ರಾಮದ ಕುಡುಪುನಡ್ಕದಲ್ಲಿ ವಾಸಿಸುವ ಬಡ ಕುಟುಂಬದ ರಾಜೇಶ್ ಅವರಿಗೆ ಮನೆ ನಿರ್ಮಾಣಕ್ಕೆ ಅಗತ್ಯವಿರುವ ಸಿಮೆಂಟ್ ಸೀಟ್‌ಗಳನ್ನು ಟ್ರಸ್ಟ್ ವತಿಯಿಂದ ಹಸ್ತಾಂತರ ಮಾಡಲಾಯಿತು..ಈ ಸಂದರ್ಭದಲ್ಲಿ ಪುತ್ತಿಲ ಪರಿವಾರ ಸೇವಾ ಟ್ರಸ್ಟ್‌ನ ಪದಾಧಿಕಾರಿಗಳಾದ, ಉಮೇಶ್ ಕೋಡಿ ಬೈಲ್, ಪ್ರಜ್ವಲ್ ಘಾಟೆ,ಸುನಿಲ್ ಬೋರ್ಕರ್, ಪದ್ಮನಾಭ ಅರಿಯಡ್ಕ, ಕಾವು ಘಟಕದ ಹರೀಶ್ ಕುಂಜತ್ತಾಯ, ಯೋಗೀಶ್ ಕಾವು, ರವಿಪ್ರಸಾದ್ ರೈ, ಅಮೃತ ಲಿಂಗಂ, ರವಿಕಿರಣ್, ನಿರಂಜನ, ಯೋಗೀಶ್ ಸರೋಳ್ತಡಿ, ರವಿಚಂದ್ರ ಮಾಣಿಯಡ್ಕ, ಸುದೀಂದ್ರ, ಅಖಿಲೇಶ್, ಕಮಲಾಕ್ಷ ಮಾಣಿಯಡ್ಕ, ಜಯಂತ ಕೆರೆಮಾರ್, ಗಣೇಶ್ ಪೂವಂದೂರು, ಗಣೇಶ್ ಅಮ್ಚಿನಡ್ಕ, ಧನಂಜಯ ಅಮ್ಚಿನಡ್ಕ, ಚಿದಾನಂದ ಆಚಾರ್ಯ ಮತ್ತಿತರರು ಉಪಸ್ಥಿತರಿದ್ದರು.

Read More

“😰 ಅಪ್ಪಾ… ನನ್ನ ಇನ್‌ಸ್ಟಾಗ್ರಾಂ ಖಾತೆ ತೆಗೆಯುತ್ತಿಲ್ಲ!” ಆದಿತ್ಯ ಗಾಬರಿಯಿಂದ ತನ್ನ ತಂದೆಯ ಬಳಿ ಓಡಿ ಬಂದ. ಕೆಲವೇ ಕ್ಷಣಗಳಲ್ಲಿ ಅವನ ಇ-ಮೇಲ್ ಕೂಡ ತೆರೆಯಲಿಲ್ಲ. ಸ್ವಲ್ಪ ಸಮಯದ ನಂತರ ಸ್ನೇಹಿತರಿಂದ ಕರೆಗಳು ಬರಲಾರಂಭಿಸಿದವು. 📞 “ನಿನ್ನ ಖಾತೆಯಿಂದ ಹಣ ಕೇಳುವ ಸಂದೇಶ ಬಂದಿದೆ. ನಿಜವಾಗಿಯೂ ನೀನೇ ಕಳಿಸಿದ್ದೀಯಾ?” ಆದಿತ್ಯಗೆ ಆಘಾತವಾಯಿತು. ವಿಚಾರಿಸಿದಾಗ ಗೊತ್ತಾದದ್ದು—ಅವನು ತನ್ನ ಇ-ಮೇಲ್, ಸಾಮಾಜಿಕ ಜಾಲತಾಣ, ಆನ್‌ಲೈನ್ ಶಾಪಿಂಗ್ ಸೇರಿದಂತೆ ಎಲ್ಲ ಖಾತೆಗಳಿಗೂ ಒಂದೇ ಪಾಸ್‌ವರ್ಡ್ ಬಳಸಿದ್ದ. ಅದು ಕೂಡ Aditya123! ಒಂದು ಖಾತೆಯ ಪಾಸ್‌ವರ್ಡ್ ಸಿಕ್ಕ ತಕ್ಷಣ, ಸೈಬರ್ ಅಪರಾಧಿಗಳು ಅದೇ ಪಾಸ್‌ವರ್ಡ್ ಬಳಸಿ ಉಳಿದ ಎಲ್ಲಾ ಖಾತೆಗಳಿಗೂ ಪ್ರವೇಶಿಸಿದ್ದರು. ತಂದೆ ನಗುತ್ತಾ ಒಂದು ಪ್ರಶ್ನೆ ಕೇಳಿದರು. 🏠 “ಮನೆಯ ಎಲ್ಲಾ ಬಾಗಿಲುಗಳಿಗೂ ಒಂದೇ ಬೀಗ ಮತ್ತು ಒಂದೇ ಕೀಲಿ ಇಟ್ಟರೆ, ಆ ಕೀಲಿ ಕಳ್ಳನ ಕೈಗೆ ಸಿಕ್ಕರೆ ಏನಾಗುತ್ತದೆ?” ಆದಿತ್ಯನಿಗೆ ಉತ್ತರ ಸಿಕ್ಕಿತ್ತು. — ಇದು ಆದಿತ್ಯನ ಕಥೆ ಮಾತ್ರವಲ್ಲ. ಇಂದು ಲಕ್ಷಾಂತರ ಜನರು…

Read More

ರಾಜ್ಯದಲ್ಲಿ ಗೋಹತ್ಯೆಗೆ ಸಂಪೂರ್ಣ ನಿಷೇಧವನ್ನು ವಿಧಿಸುವ ಮದ್ರಾಸ್ ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ ತಮಿಳುನಾಡು ಸರಕಾರವು ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿದೆ. ತಮಿಳುನಾಡು ಪ್ರಾಣಿ ಸಂರಕ್ಷಣಾ ಕಾಯಿದೆ- 1958ರ ಸೆಕ್ಷನ್ 4ರ ಅಡಿಯಲ್ಲಿ 10 ವರ್ಷಕ್ಕಿಂತ ಮೇಲ್ಪಟ್ಟಿದ್ದರೆ ಹಸುವನ್ನು ವಧೆ ಮಾಡಲು ಅವಕಾಶ ನೀಡುತ್ತದೆ. ಆದರೆ ಹೈಕೋರ್ಟ್ ಆದೇಶವು ತಮಿಳುನಾಡು ಪ್ರಾಣಿ ಸಂರಕ್ಷಣಾ ಕಾಯಿದೆ 1958ರ ನಿಯಮಗಳಿಗೆ ವಿರುದ್ಧವಾಗಿದೆ ಎಂದು ರಾಜ್ಯವು ವಾದಿಸಿದೆ. ಸಾರ್ವಜನಿಕ ಸ್ಥಳಗಳಲ್ಲಿ ಅಕ್ರಮವಾಗಿ ಗೋಹತ್ಯೆ ನಡೆಯುತ್ತಿದೆ ಎಂದು ಆರೋಪಿಸಿದ್ದ ಮಕ್ಕಳ್ ಕಚ್ಚಿ ರಾಜ್ಯ ಪ್ರಧಾನ ಕಾರ್ಯದರ್ಶಿ ಸೂರ್ಯ ಅವರು ಅದನ್ನು ತಡೆಯುವಂತೆ ಹೈಕೋರ್ಟ್​​ಗೆ ಅರ್ಜಿ ಸಲ್ಲಿಸಿದ್ದರು. ಈ ಸಂಬಂಧ ವಿಚಾರಣೆ ವೇಳೆ ಭಾರತ ಸಂವಿಧಾನದ ವಿಧಿ 48ನ್ನು ಉಲ್ಲೇಖಿಸಿದ್ದ ಹೈಕೋರ್ಟ್, ಹಸು, ಕರು ಹಾಗೂ ಹಾಲು ಮತ್ತು ಕೃಷಿಗೆ ಉಪಯುಕ್ತ ಜಾನುವಾರುಗಳ ಹತ್ಯೆಯನ್ನು ತಡೆಯಲು ರಾಜ್ಯ ಕ್ರಮ ಕೈಗೊಳ್ಳಬೇಕು ಎಂದು ಹೇಳಿತ್ತು. ಬಕ್ರೀದ್ ಸಂದರ್ಭದಲ್ಲಿ ಗೋಹತ್ಯೆ ಮಾಡುವುದು ಇಸ್ಲಾಂ ಧರ್ಮದ ಕಡ್ಡಾಯ ಧಾರ್ಮಿಕ ಆಚರಣೆಯಲ್ಲ ಎಂದು ಸುಪ್ರೀಂ ಕೋರ್ಟ್ ಈ…

Read More

ಇಂದಿನ ಡಿಜಿಟಲ್ ಯುಗದಲ್ಲಿ ವಾಟ್ಸಾಪ್ ನಮ್ಮ ಬದುಕಿನ ಅವಿಭಾಜ್ಯ ಅಂಗವಾಗಿದೆ. ಆದರೆ, ಇಲ್ಲಿಯವರೆಗೆ ಯಾರನ್ನಾದರೂ ಸಂಪರ್ಕಿಸಲು ಅವರ ಫೋನ್ ನಂಬರ್ ಅತ್ಯಗತ್ಯವಾಗಿತ್ತು. ಆದರೆ, ಶೀಘ್ರದಲ್ಲೇ ವಾಟ್ಸಾಪ್ ತನ್ನ ಬಳಕೆದಾರರಿಗೆ ಒಂದು ದೊಡ್ಡ ಉಡುಗೊರೆಯನ್ನು ನೀಡಲು ಸಜ್ಜಾಗಿದೆ!🎁 ​🛡️ ಗೌಪ್ಯತೆಯೇ ಈಗ ಮೊದಲ ಆದ್ಯತೆ ​ಇನ್ನು ಮುಂದೆ, ನೀವು ಅಪರಿಚಿತರಿಗೆ ಅಥವಾ ಕೆಲಸದ ನಿಮಿತ್ತ ಭೇಟಿಯಾದವರಿಗೆ ನಿಮ್ಮ ವೈಯಕ್ತಿಕ ಫೋನ್ ನಂಬರ್ ನೀಡುವ ಅಗತ್ಯವಿರುವುದಿಲ್ಲ. ವಾಟ್ಸಾಪ್ ಪರಿಚಯಿಸುತ್ತಿರುವ ‘ಯೂಸರ್ ನೇಮ್’ (Username) ವೈಶಿಷ್ಟ್ಯವು ನಿಮ್ಮ ನಂಬರ್ ಅನ್ನು ಗೌಪ್ಯವಾಗಿಡಲು ಸಹಾಯ ಮಾಡುತ್ತದೆ. ಡಿಜಿಟಲ್ ಜಗತ್ತಿನಲ್ಲಿ ನಮ್ಮ ಸಂವಹನ ಮಾಧ್ಯಮವಾಗಿ ವಾಟ್ಸಾಪ್ ಅತ್ಯಂತ ಪ್ರಮುಖ ಪಾತ್ರ ವಹಿಸುತ್ತಿದೆ. ಇಲ್ಲಿಯವರೆಗೆ, ನಾವು ಯಾರನ್ನಾದರೂ ಸಂಪರ್ಕಿಸಲು ಅವರ ಫೋನ್ ನಂಬರ್ ಅತ್ಯಗತ್ಯವಾಗಿತ್ತು. ಆದರೆ, ವಾಟ್ಸಾಪ್ ತನ್ನ ಬಳಕೆದಾರರ ಗೌಪ್ಯತೆ ಮತ್ತು ಭದ್ರತೆಯನ್ನು ಮತ್ತಷ್ಟು ಬಲಪಡಿಸಲು ‘ಯೂಸರ್ ನೇಮ್’ (Username) ವೈಶಿಷ್ಟ್ಯವನ್ನು ಪರಿಚಯಿಸುತ್ತಿದೆ. ವಾಟ್ಸಾಪ್ ಯೂಸರ್ ನೇಮ್ ಎಂದರೇನು? ​ಸರಳವಾಗಿ ಹೇಳುವುದಾದರೆ, ಇನ್‌ಸ್ಟಾಗ್ರಾಂ ಅಥವಾ ಟೆಲಿಗ್ರಾಮ್‌ನಲ್ಲಿ ಇರುವಂತೆಯೇ, ನಿಮ್ಮ…

Read More

ವಾಣಿಜ್ಯ ಬಳಕೆಯ ಎಲ್‌ಪಿಜಿ ಪೂರೈಕೆ ಮೇಲಿನ ನಿರ್ಬಂಧ ತೆರವುಗೊಳಿಸಿದ ಬೆನ್ನಲ್ಲೇ ಕೇಂದ್ರ ಮತ್ತೊಂದು ಗುಡ್‌ನ್ಯೂಸ್‌ ನೀಡಿದೆ. ಇಂದಿನಿಂದ ಜಾರಿಗೆ ಬರುವಂತೆ ವಾಣಿಜ್ಯ ಬಳಕೆಯ ಎಲ್‌ಪಿಜಿ ದರ 183.50 ರೂ. ಇಳಿಕೆ ಮಾಡಿದೆ. ಇಂದಿನಿಂದ (ಜುಲೈ 1) ಜಾರಿಗೆ ಬರುವಂತೆ 19 ಕೆ.ಜಿಯ ವಾಣಿಜ್ಯ ಬಳಕೆಯ ಸಿಲಿಂಡರ್ ಬೆಲೆಯನ್ನು 183.50 ರೂ. ಇಳಿಕೆ ಮಾಡಲಾಗಿದೆ. ಈ ಮೂಲಕ 3,113.50 ರೂ. ಇದ್ದ ಸಿಲಿಂಡರ್ ಬೆಲೆ ಈಗ 2,930 ರೂ.ಗೆ ಇಳಿದಿದೆ. ಆದರೆ ತೈಲ ಕಂಪನಿಗಳು 14.2 ಕೆ.ಜಿ. ಗೃಹ ಬಳಕೆಯ LPG ಸಿಲಿಂಡರ್ ಬೆಲೆ ರೂ.942ರಲ್ಲೇ ಮುಂದುವರಿದಿದ್ದು, ಅದರಲ್ಲಿ ಯಾವುದೇ ಬದಲಾವಣೆ ಮಾಡಲಾಗಿಲ್ಲ. ಇರಾನ್ ತನ್ನ ನಿಯಂತ್ರಣದಲ್ಲಿರುವ ಹಾರ್ಮುಜ್ ಜಲಸಂಧಿ (Strait of Hormuz) ಮೂಲಕ ಸಾಗುತ್ತಿದ್ದ ಕಚ್ಚಾ ತೈಲ ಮತ್ತು ಅನಿಲ ಸಾಗಣೆ ಹಡಗುಗಳ ಸಂಚಾರವನ್ನು ನಿರ್ಬಂಧಿಸಿತ್ತು. ಪರಿಣಾಮವಾಗಿ ವಿಶ್ವದಾದ್ಯಂತ ಕಚ್ಚಾ ತೈಲ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿ ಪ್ರಪಂಚದಾದ್ಯಂತ ಪೆಟ್ರೋಲ್, ಡೀಸೆಲ್ ಮತ್ತು ಗ್ಯಾಸ್ ಬೆಲೆಗಳು ಭಾರಿ ಪ್ರಮಾಣದಲ್ಲಿ ಏರಿಕೆಯಾಗಿದ್ದವು. ದೇಶದಲ್ಲಿ…

Read More

ಗ್ಯಾರಂಟಿ ಯೋಜನೆ ಫಲಾನುಭವಿಗಳ ದೃಢೀಕರಣಕ್ಕಾಗಿ ಗೃಹ ಜ್ಯೋತಿ (Gruha Jyothi Scheme) ಯೋಜನೆಯನ್ನು ಮರುಪರಿಶೀಲನೆಗೆ ರಾಜ್ಯ ಸರ್ಕಾರ ಮುಂದಾಗಿದೆ. ಇಂಧನ ಇಲಾಖೆಯ ಸಿಬ್ಬಂದಿ ಪ್ರತಿಯೊಂದು ಮನೆಗೆ ಭೇಟಿ ನೀಡಿ ಹೊಸ ಅರ್ಜಿಗಳನ್ನು ವಿತರಿಸಲಿದ್ದಾರೆ. ಅರ್ಜಿಯಲ್ಲಿ ನಮೂದಿಸಿದ ವಿವರಗಳು, ಫೋಟೋ ಹಾಗೂ ಫಲಾನುಭವಿಯ ಮಾಹಿತಿಯನ್ನು ಸ್ಥಳದಲ್ಲೇ ಪರಿಶೀಲಿಸಿ ದೃಢೀಕರಿಸಲಾಗುತ್ತದೆ. ಜುಲೈ 1 ರಿಂದ ಪ್ರಕ್ರಿಯೆ ಶುರು ಫಲಾನುಭವಿಗಳ ಮನೆ – ಮನೆ ಪರಿಶೀಲನೆ ಕಾರ್ಯವನ್ನು ಎಲ್ಲಾ ಎಸ್ಕಾಂಗಳ ಸಿಬ್ಬಂದಿ ಜುಲೈ 1 ರಿಂದ ಕೈಗೊಳ್ಳಲಿದ್ದಾರೆ. ಮೊಬೈಲ್ ಆ್ಯಪ್ ಹಾಗೂ ಘೋಷಣಾ ಪತ್ರ ಮೂಲಕ ಅರ್ಜಿ ಭರ್ತಿ ಪ್ರಕ್ರಿಯೆನ್ನು ಪೂರ್ಣಗೊಳಿಸಲಿದ್ದು, ಎಸ್ಕಾಂ ಸಿಬ್ಬಂದಿ ಮನೆ-ಮನೆ ಭೇಟಿ ಸಂದರ್ಭದಲ್ಲಿ ಆಧಾ‌ರ್ ಕಾರ್ಡ್, ಫಲಾನುಭವಿಯ ಪಾಸ್ ಪೋರ್ಟ್ ಅಳತೆಯ ಭಾವಚಿತ್ರ, ಮತದಾರರ ಗುರುತಿನ ಚೀಟಿ (ವೋಟರ್ ಐಡಿ), ಪ್ಯಾನ್ ಕಾರ್ಡ್, ಬಾಡಿಗೆ ಒಪ್ಪಂದದ ಪತ್ರಗಳು (ಅನ್ವಯಿಸುವಲ್ಲಿ ಮಾತ್ರ), ರೇಷನ್ ಕಾರ್ಡ್  ತೋರಿಸುವಂತೆ ಬೆಸ್ಕಾಂ ಮನವಿ ಮಾಡಿದೆ. ಮೀಟರ್ ರೀಡರ್ ಗಳಿಗೆ ಸಂಪೂರ್ಣ ಸಹಕಾರ ನೀಡಿ, ಪರಿಶೀಲನೆ ಪ್ರಕ್ರಿಯೆಯನ್ನು…

Read More

ಚಿಕ್ಕಬಳ್ಳಾಪುರದ ನಂದಿಬೆಟ್ಟದ ಹೋಮ್‌ಸ್ಟೇ ಒಂದರಲ್ಲಿ ಯುವತಿಯೋರ್ವಳ ಶವ ಪತ್ತೆಯಾಗಿದೆ. ಪ್ರೇಯಸಿ ಸುರಭಿಯನ್ನು ಕೊಲೆ ಮಾಡಿದ ಬಳಿಕ ಪ್ರಿಯಕರ ಸಂಜಿತ್ ಅಲಿ ಆತ್ಮಹತ್ಯೆಗೆ ಯತ್ನಿಸಿದ್ದಾನೆ ಎಂಬ ಶಂಕೆ ವ್ಯಕ್ತವಾಗಿದೆ. ಚಿಕ್ಕಬಳ್ಳಾಪುರ ಜಿಲ್ಲೆಯ ನಂದಿ ಗ್ರಾಮದ ಸುಲ್ತಾನ ಪೇಟೆಯ ನಿವಾಸಿಯಾಗಿದ್ದ ಸುರಭಿ, ಮುದ್ದೇನಹಳ್ಳಿ ಆಸ್ಪತ್ರೆಯಲ್ಲಿ ಫಿಜಿಯೋಥೆರಪಿ ವೈದ್ಯೆಯಾಗಿದ್ದರು. ಕೆಲವು ತಿಂಗಳ ಹಿಂದೆ ಬೆಂಗಳೂರಿಗೆ ಟ್ರೇನಿಂಗ್‌ಗೆ ಬಂದಿದ್ದಾಗ, ಕೇರಳ ಮೂಲದ ಕ್ಯಾಬ್ ಡ್ರೈವರ್ ಸಂಜೀತ್ ಆಲಿ ಎಂಬಾತನ ಪರಿಚಯವಾಗಿತ್ತು. ಪ್ರತಿದಿನ ಪಿಕಪ್ ಮತ್ತು ಡ್ರಾಪ್ ಮಾಡುವಾಗ ಶುರುವಾದ ಸಲುಗೆ, ಕೊನೆಗೆ ಪ್ರೀತಿಗೆ ತಿರುಗಿತ್ತು. ಪ್ರೇಮದ ಅಮಲಿನಲ್ಲಿ ಇಬ್ಬರೂ ಮನೆ ಬಿಟ್ಟು ಓಡಿಹೋಗಿದ್ದರು. ಈ ಸಂಬಂಧ ಪೋಷಕರು ಮಿಸ್ಸಿಂಗ್ ಕೇಸ್ ಕೂಡ ದಾಖಲಿಸಿದ್ದರು. ನಂತರದ ದಿನಗಳಲ್ಲಿ ಇಬ್ಬರ ನಡುವೆ ಭಿನ್ನಾಭಿಪ್ರಾಯಗಳು ಶುರುವಾಗಿ, ಸುರಭಿ ಬನಶಂಕರಿ ಪೊಲೀಸ್ ಠಾಣೆಯಲ್ಲಿ ಆಲಿ ವಿರುದ್ಧ ದೂರು ನೀಡಿದ್ದರು. ತದನಂತರ ಕಳೆದ 6 ತಿಂಗಳಿನಿಂದ ಇಬ್ಬರೂ ದೂರವಾಗಿದ್ದರು. ಆದರೆ, ಇತ್ತೀಚೆಗೆ ಆಲಿ ಮತ್ತೆ ಸುರಭಿಯನ್ನು ಪುಸಲಾಯಿಸಿ ಮಾತನಾಡಿಸಲು ಶುರು ಮಾಡಿದ್ದ ಎನ್ನಲಾಗಿದೆ. ನಂದಿ…

Read More

ಅಡ್ಡ ಮತದಾನ ಹಾಗೂ ನಾಡಪ್ರಭು ಕೆಂಪೇಗೌಡ ಜಯಂತಿ ಕಾರ್ಯಕ್ರಮದ ಹಿನ್ನೆಲೆಯಲ್ಲಿ, ಶಾಸಕ ಎಸ್. ಆರ್. ವಿಶ್ವನಾಥ್ ಅವರು ಸದಾನಂದ ಗೌಡರ ವಿರುದ್ಧ “ಅವರದ್ದು ವಕ್ರ ಬುದ್ಧಿ” ಎಂದು ತೀವ್ರ ವಾಗ್ದಾಳಿ ನಡೆಸಿದ್ದಾರೆ. ಅವರು ಕೇಂದ್ರ ಸಚಿವರಾಗಿ, ಮುಖ್ಯಮಂತ್ರಿಗಳಾಗಿದ್ದಾಗ ನಾವು ಅವರಿಗಾಗಿ ಗಂಟೆಗಟ್ಟಲೆ ಬಾಗಿಲು ಕಾಯ್ದು ನಿಲ್ಲುತ್ತಿದ್ದೆವು. ಆದರೆ, ಇಂದು ಅವರ ವರ್ತನೆ ಪಕ್ಷಕ್ಕೆ ಶೋಭೆ ತರುವಂತದ್ದಲ್ಲ ಎಂದು ಆಕ್ರೋಶ ಹೊರಹಾಕಿದ್ದಾರೆ. ನೀವು ಒಬ್ಬ ಹಿರಿಯ ಬಿಜೆಪಿ ನಾಯಕರಾಗಿದ್ದುಕೊಂಡು ಕಾಂಗ್ರೆಸ್‌ನವರು ಆಯೋಜಿಸಿದ್ದ ಸಭೆ ಅಥವಾ ಕಾರ್ಯಕ್ರಮಕ್ಕೆ ಹೇಗೆ ಹೋಗುತ್ತೀರಿ? ನಾವು ಹೋಗಬೇಡಿ ಎಂದು ಮನವಿ ಮಾಡಿದರೂ ಕೇಳಲಿಲ್ಲ. ಇವತ್ತು ಅವರಿಗೆ ದಿಢೀರನೆ ಜಾತಿ ಅಭಿಮಾನ ಬಂದುಬಿಟ್ಟಿದೆ. ಸದಾನಂದ ಗೌಡರು ಮಂಗಳೂರು ಕಡೆಯವರಾಗಿದ್ದು, ಸಾಮಾನ್ಯವಾಗಿ ಹಳೇ ಮೈಸೂರು ಭಾಗದವರನ್ನು ಮಾತ್ರ ಒಕ್ಕಲಿಗರು ಎನ್ನಲಾಗುತ್ತದೆ, ಅವರೇನೂ ದೊಡ್ಡ ಗೌಡರಲ್ಲ ಎಂದು ಲೇವಡಿ ಮಾಡಿದ್ದಾರೆ. ಕೆಂಪೇಗೌಡ ಜಯಂತಿಗೆ ಸಂಬಂಧಿಸಿದಂತೆ ತಾವು ಆಹ್ವಾನ ನೀಡಿದ ತಕ್ಷಣ ಮುಖ್ಯಮಂತ್ರಿಗಳು ಬಂದು ಸನ್ಮಾನ ಸ್ವೀಕರಿಸಿದರು. ಆದರೆ, ಸದಾನಂದ ಗೌಡರು ಮಾತ್ರ ಬೇರೆಯದೇ…

Read More

ವಿಜಯೇಂದ್ರರನ್ನು ರಾಜ್ಯಾಧ್ಯಕ್ಷ ಸ್ಥಾನದಿಂದ ಕೆಳಗಿಳಿಸಲೆಂದೇ ವಿಧಾನಪರಿಷತ್​​ ಚುನಾವಣೆಯಲ್ಲಿ ಕೆಲ ಬಿಜೆಪಿ ಶಾಸಕರು ಅಡ್ಡಮತದಾನ ಮಾಡಿ ವಿಜಯೇಂದ್ರ ವಿರುದ್ಧ ಷಡ್ಯಂತ್ರ ಮಾಡಿದ್ದಾರೆ ಎನ್ನುವ ಆರೋಪಗಳು ಕೇಳಿಬರುತ್ತಿವೆ. ಇದರ ಮಧ್ಯೆ ಇದೀಗ ಮಾಜಿ ಸಿಎಂ ಡಿವಿ ಸದಾನಂದಗೌಡ ಅವರದ್ದು ಎನ್ನಲಾದ ಆಡಿಯೋ ವೈರಲ್ ಆಗಿದ್ದು, ಬಿಜೆಪಿಯಲ್ಲಿ ಅಲ್ಲೊಲ ಕಲ್ಲೋಲ ಸೃಷ್ಟಿಸಿದೆ. ಆಡಿಯೋದಲ್ಲಿ ಏನೇನಿದೆ? “ನಾನು ಹೇಳುತ್ತಿರುವುದು ಸರಿಯೋ ತಪ್ಪೋ ನೀವೇ ಹೇಳಿ. ವಿಜಯೇಂದ್ರ ಅವರು 3 ವರ್ಷಗಳ ಅಧ್ಯಕ್ಷ ಅವಧಿಯನ್ನು ಮುಗಿಸುತ್ತಿದ್ದಾರೆ.” “ನವೆಂಬರ್‌ನಲ್ಲಿ ಅವರ ಅಧ್ಯಕ್ಷ ಅವಧಿ ಮುಗಿಯುತ್ತದೆ. ಇನ್ನು 2-3 ತಿಂಗಳಿಗೆ ಏಕೆ ಗೊಂದಲ ಸೃಷ್ಟಿಸಬೇಕು?”…“ಈ ಸಮಯದಲ್ಲಿ ವಿಜಯೇಂದ್ರ ಅವರ ಟೀಮ್‌ನಲ್ಲಿ ಗೊಂದಲ ಸೃಷ್ಟಿಸಬೇಕು. 2 ತಿಂಗಳು ಸ್ಮೂತ್ ಆಗಿ ಮುಂದುವರಿಸಿ, ಬಳಿಕ ಹೊರಗೆ ಕಳಿಸಿ.” “ಅವಧಿ ಮುಗಿದ ನಂತರ ಅವರನ್ನು ಕೆಳಗಿಳಿಸಿದರೆ ಯಾರೂ ದೂಷಿಸುವುದಿಲ್ಲ. ಪಕ್ಷದೊಳಗೆ ಗೊಂದಲವಾಗುವುದಿಲ್ಲ.” “ಜುಲೈ, ಆಗಸ್ಟ್, ಸೆಪ್ಟೆಂಬರ್ ವರೆಗೂ ಇರಲಿ. ಅಕ್ಟೋಬರ್‌ನಲ್ಲಿ ಅವರನ್ನು ‘ಕಿಕ್ ಔಟ್’ ಮಾಡಿ.” “ಈಗಲೇ ಹೊರಗೆ ಕಳಿಸಿದರೆ ಅವರ ಪರವಾದ ಟೀಮ್ ನಿಮ್ಮ…

Read More