ಮೊಹರಂ ಮೆರವಣಿಗೆಯ ಸಂದರ್ಭದಲ್ಲಿ ರ್ಯಾಟ್ ಪಾಯಿಸನ್ (ಇಲಿ ಪಾಷಾಣ – Rodenticide) ತುಂಬಿದ ಕ್ಯಾಪ್ಸೂಲ್ ಗಳನ್ನು ವಿತರಿಸಲು ಮುಂದಾಗಿದ್ದ ವ್ಯಕ್ತಿಯೊಬ್ಬನನ್ನ ಪೊಲೀಸರು ಬಂಧಿಸಿದ್ದಾರೆ. ಆರೋಪಿಯನ್ನ ಪುಣೆ ನಿವಾಸಿ, ಬಣ್ಣದ ವ್ಯಾಪಾರಿ ಫಯಾಜ್ ಎಂದು ಗುರುತಿಸಲಾಗಿದೆ. ಆರೋಪಿಯಿಂದ ಸುಮಾರು 14,900 ವಿಷ ತುಂಬಿದ ಕ್ಯಾಪ್ಸೂಲ್ ಗಳನ್ನ ವಶಪಡಿಸಿಕೊಂಡಿದ್ದು, ಘಟನೆ ಹಿಂದೆ ದೊಡ್ಡ ಪಿತೂರಿಯೇ ಇದೆ ಎಂದು ಶಂಕಿಸಲಾಗಿದೆ.
15 ಸಾವಿರ ಜನರನ್ನು ಕೊಲ್ಲುವ ಉದ್ದೇಶದೊಂದಿಗೆ ಈ ವಿಷಕಾರಿ ಮಾತ್ರೆ ಹಂಚುತ್ತಿದ್ದೆ ಎಂಬ ಸತ್ಯವನ್ನು ಬಾಯ್ಬಿಟ್ಟಿದ್ದಾನೆ. ಫಯಾಜ್ ನೀಡಿದ್ದ ಮಾತ್ರೆ ಸೇವಿಸಿದ್ದ ಸುಮಾರು 11 ಜನರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಜನಸಂದಣಿಯ ಲಾಭ ಪಡೆದು, ಅವುಗಳನ್ನು ನೋವು ನಿವಾರಕಗಳು ಮತ್ತು ರೋಗನಿರೋಧಕ ಶಕ್ತಿ ಹೆಚ್ಚಿಸುವ ಔಷಧಿಗಳೆಂದು ಹೇಳಿ ಮಾರಾಟ ಮಾಡುತ್ತಿದ್ದ. ಪೊಲೀಸರು ಸಕಾಲದಲ್ಲಿ ಆತನನ್ನು ಬಂಧಿಸಿದ್ದರಿಂದ ಭಾರೀ ಅನಾಹುತ ತಪ್ಪಿದೆ” ಆರೋಪಿ ಫಯಾಜ್ 30,000 ಖಾಲಿ ಕ್ಯಾಪ್ಸುಲ್ಗಳು ಮತ್ತು 50 ಕೆಜಿ ಫಾಸ್ಫರಸ್ಗೆ ಆರ್ಡರ್ ಮಾಡಿದ್ದ ಎಂದು ಮುಂಬೈ ಪೊಲೀಸ್ ಡಿಸಿಪಿ (ಕೇಂದ್ರ ವಲಯ-I) ಜಯಂತ್ ಮೀನಾ ತಿಳಿಸಿದ್ದಾರೆ. ಓರ್ವ ಮಹಿಳಾ ಸ್ವಯಂಸೇವಕಿ ಆರೋಪಿಯು ಅನುಚಿತ ಮತ್ತು ಅನುಮಾನಾಸ್ಪದ ರೀತಿಯಲ್ಲಿ ಮಾತ್ರೆಗಳನ್ನು ವಿತರಿಸುತ್ತಿರುವುದನ್ನು ಗಮನಿಸಿದರು. ಸ್ವಯಂಸೇವಕರು ತಕ್ಷಣ ಅವನನ್ನು ತಡೆದು ಪೊಲೀಸರಿಗೆ ಮಾಹಿತಿ ನೀಡಿದರು. ಮಾತ್ರೆ ಸೇವಿಸದಂತೆ ಜನರನ್ನು ಕೇಳುತ್ತಾ ಧ್ವನಿವರ್ಧಕವನ್ನು ಬಳಸಿ ಘೋಷಣೆ ಮಾಡಲಾಯಿತು.

