Close Menu
    Latest News

    ಜೆರಾಕ್ಸ್ ಅಂಗಡಿ ಗಲಾಟೆ ಪ್ರಕರಣ; ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಅಂಗಡಿ ಮಾಲೀಕರನ್ನು ತಡರಾತ್ರಿ ಭೇಟಿ ಮಾಡಿದ ಅರುಣ್ ಕುಮಾರ್ ಪುತ್ತಿಲ

    August 22, 2026

    ನಿತಿನ್‌ ನಬಿನ್‌ ಹೊಸ ತಂಡದಲ್ಲಿ ಕರ್ನಾಟಕದ ಎಂ. ನಾಗರಾಜ್‌; ಬಿ.ಎಲ್‌ ಸಂತೋಷ್‌ ಜೀ ಗೆ ಮತ್ತೆ ಪಟ್ಟ!

    August 17, 2026

    ಪುತ್ತೂರಿನ ತ್ಯಾಜ್ಯ ವಿಲೇವಾರಿ ಸಮಸ್ಯೆಗೆ ಧ್ವನಿಯಾದ ಪುತ್ತಿಲ; ಕೆದಂಬಾಡಿ ತ್ಯಾಜ್ಯ ನಿರ್ವಹಣಾ ಘಟಕಕ್ಕೆ ಭೇಟಿ

    August 14, 2026
    Facebook X (Twitter) Instagram
    Abheda MediaAbheda Media
    • ಮುಖಪುಟ
    • ಪ್ರಮುಖ ಸುದ್ದಿ
    • ಸ್ಥಳೀಯ ಸುದ್ದಿ
    • ಎಂಟರ್ಟೈನ್ಮೆಂಟ್
    • ಫೈನಾನ್ಸ್
    • ಆಧ್ಯಾತ್ಮ
    Facebook X (Twitter) Instagram
    Abheda MediaAbheda Media
    Home»ಸ್ಥಳೀಯ ಸುದ್ದಿ»ಅರುಣ್ ಪುತ್ತಿಲರ ವಿರುದ್ಧ ಮಾನಹಾನಿ ಕಮೆಂಟ್; ಇಬ್ಬರ ವಿರುದ್ಧ ಪ್ರಕರಣ ದಾಖಲು
    ಸ್ಥಳೀಯ ಸುದ್ದಿ

    ಅರುಣ್ ಪುತ್ತಿಲರ ವಿರುದ್ಧ ಮಾನಹಾನಿ ಕಮೆಂಟ್; ಇಬ್ಬರ ವಿರುದ್ಧ ಪ್ರಕರಣ ದಾಖಲು

    adminBy adminJune 27, 2026
    Share Facebook Twitter Email WhatsApp Copy Link

    ಪುತ್ತಿಲ ಪರಿವಾರ ಸೇವಾ ಟ್ರಸ್ಟ್‌ನ ಅಧಿಕೃತ ಲೋಗೋ ಬಳಸಿ, ಟ್ರಸ್ಟಿನ ಸಂಚಾಲಕರಾದ ಅರುಣ್ ಕುಮಾರ್ ಪುತ್ತಿಲರ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಸುಳ್ಳು ಮಾಹಿತಿಯನ್ನು ಹಂಚಿದ ಇಬ್ಬರು ವ್ಯಕ್ತಿಗಳ ವಿರುದ್ಧ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ‌.

    ದೂರಿನಲ್ಲಿ ಏನಿದೆ?

    ಅರುಣ್ ಕುಮಾರ್ ಪುತ್ತಿಲರು ಕಳೆದ ಬಾರಿ ವಿಧಾನ ಸಭಾ ಚುನಾವಣೆಯಲ್ಲಿ ಸುಮಾರು 62.458 ಮತ ಪಡೆದು 2 ನೇ ಸ್ಥಾನ ಪಡೆದಿರುವ ಇವರ ಬಗ್ಗೆ ಫೇಸ್ ಬುಕ್ ನಲ್ಲಿ ಶರತ್ ಗೌಡ ಎಂಬ ವ್ಯಕ್ತಿ ಹೆಸರಿನಲ್ಲಿ ಆರುಣ್ ಕುಮಾರ್ ಪುತ್ತಿಲ ಅವರ ಫೋಟೋ ಹಾಕಿ ಮತ್ತು ಪುತ್ತಿಲ ಪರಿವಾರ ಟ್ರಸ್ಟ್ ನ ಲೋಗೋ ಹಾಕಿ ದಿನಾಂಕ: 18-06-2026 ರಂದು ಕಣ ಕಣದಲ್ಲೂ ಕೇಸರಿ.. ಅಣ್ಣನಿಗೆ ಜೈ.. ಎಂದು ಹಾಗೂ ಫೋಟೋದಲ್ಲಿ ನಮ್ಮ ಮೊದಲ ಆದ್ಯತೆ ದುಡ್ಡು ನಮ್ಮ ಕೊನೆಯ ಆದ್ಯತೆಯೂ ದುಡ್ಡು ಮಾಡುವುದು… ಎಂದು ಹಾಗೂ ಫೋಟೋದ ಹಿಂಭಾಗದಲ್ಲಿ ದೇವಸ್ಥಾನದ ಫೋಟೋ ಹಾಗೂ ತ್ರಿಶೂಲ ಶಂಖ ವನ್ನು ಚಿತ್ರಿಸಿ ಪೋಸ್ಟ್ ಮಾಡಿರುತ್ತಾರೆ. ಈ ಪೋಸ್ಟ್ ಸಾರ್ವಜನಿಕರಲ್ಲಿ ತಪ್ಪು ಅಭಿಪ್ರಾಯ ಉಂಟು ಮಾಡುವ ಉದ್ದೇಶದಿಂದ ಪ್ರಕಟಿಸಲ್ಪಟ್ಟಿದ್ದು ಟ್ರಸ್ಟ್ ನ ಹಾಗೂ ವ್ಯಕ್ತಿಯ ಘನತೆ ಮತ್ತು ಪ್ರತಿಷ್ಠೆಗೆ ಧಕ್ಕೆ ಉಂಟುಮಾಡಿದೆ. ಹಾಗೂ ಅರುಣ್ ಕುಮಾರ್ ಪುತ್ತಿಲ ಅವರ ಹಾಗೂ ಟ್ರಸ್ಟ್ ನ ಮಾನ ಹಾನಿ ಸುಳ್ಳು ಮಾಹಿತಿ ಪ್ರಸಾರ ಹಾಗೂ ಸಮಾಜದಲ್ಲಿ ದ್ವೇಶ ಹಾಗೂ ಗೊಂದಲ ಉದ್ದೇಶ ಹೊಂದಿರುವುದಾಗಿ ಕಂಡು ಬರುತ್ತದೆ. ಆದ್ದರಿಂದ ಮೇಲ್ಕಂಡ ಪೋಸ್ಟ್ ಪ್ರಕಟಿಸಿದ ವ್ಯಕ್ತಿಯ ವಿರುದ್ಧ ಸೂಕ್ತ ತನಿಖೆ ನಡೆಸಿ ಭಾರತೀಯ ನ್ಯಾಯ ಸಂಹಿತೆ 2023 ಹಾಗೂ ಮಾಹಿತಿ ತಂತ್ರಜ್ಞಾನ ಕಾಯಿದೆ 2000 ರಂತೆ ಕಾನೂನು ಕ್ರಮ ಕೈಗೊಳ್ಳುವಂತೆ ಕೋರಲಾಗಿದೆ.

    ಮತ್ತೊಂದು ಪ್ರಕರಣದಲ್ಲಿ ಪ್ರವೀಣ್ ಆಚಾರ್ಯ ಎಂಬ ವ್ಯಕ್ತಿ ಹಿಮಾಲಯಕ್ಕೆ ಹೋಗಿ ತಪಸ್ಸು ಮಾಡಿದರೂ ಗೋಮುಖ ವ್ಯಾಘ್ರನಿಗೆ ಸಿಗಲ್ಲ ಅವ ದುಡ್ಡು ಮಾಡೋಕೆ ನಿಲ್ಲೋದು ಎಂದು ಮಾನ ಹಾನಿಕರ ಕಮೆಂಟ್ ಮಾಡಿದ್ದು ಈ ಕಮೆಂಟ್ ಸಾರ್ವಜನಿಕರಲ್ಲಿ ತಪ್ಪು ಅಭಿಪ್ರಾಯ ಉಂಟು ಮಾಡುವ ಉದ್ದೇಶದಿಂದ ಹಾಕಿದ್ದು ಇದರಿಂದ ಆರುಣ್ ಕುಮಾರ್ ಪುತ್ತಿಲ ಅವರ ಘನತೆ ಮತ್ತು ಪ್ರತಿಷ್ಠೆಗೆ ಧಕ್ಕೆ ಉಂಟುಮಾಡಿದೆ. ಹಾಗೂ ಆರುಣ್ ಕುಮಾರ್ ಪುತ್ತಿಲ ಅವರ ಮಾನ ಹಾನಿ ಸುಳ್ಳು ಮಾಹಿತಿ ಪ್ರಸಾರ ಹಾಗೂ ಸಮಾಜದಲ್ಲಿ ದ್ವೇಶ ಹಾಗೂ ಗೊಂದಲ ಉದ್ದೇಶ ಹೊಂದಿರುವುದಾಗಿ ಕಂಡು ಬರುತ್ತದೆ. ಆದ್ದರಿಂದ ಅರುಣ್ ಕುಮಾರ್ ಪುತ್ತಿಲ ಫ್ಯಾನ್ಸ್ ಕ್ಲಬ್ ಎಂಬ ಖಾತೆಯಿಂದ ಮಾಡಿದ ಪೋಸ್ಟ್ ಗೆ ಮಾನ ಹಾನಿ ಕಮೆಂಟ್ ಮಾಡಿದ ವ್ಯಕ್ತಿಯ ವಿರುದ್ಧ ಸೂಕ್ತ ತನಿಖೆ ನಡೆಸಿ ಭಾರತೀಯ ನ್ಯಾಯ ಸಂಹಿತೆ 2023 ಹಾಗೂ ಮಾಹಿತಿ ತಂತ್ರಜ್ಞಾನ ಕಾಯಿದೆ 2000 ರಂತೆ ಕಾನೂನು ಕ್ರಮ ಕೈಗೊಳ್ಳುವಂತೆ ವಿನಂತಿಸಲಾಗಿದೆ.

    ಈ ಸಂದರ್ಭದಲ್ಲಿ ಟ್ರಸ್ಟ್‌ನ ಅಧ್ಯಕ್ಷರಾದ ಶ್ರೀರಾಮ ಭಟ್, ಸಂಘಟನಾ ಕಾರ್ಯದರ್ಶಿ ಅನಿಲ್ ತೆಂಕಿಲ, ಕೋಶಾಧಿಕಾರಿ ರೂಪೇಶ್ ನಾಯ್ಕ್, ಮಾಜಿ ಅಧ್ಯಕ್ಷರಾದ ಮಹೇಂದ್ರ ವರ್ಮ ಉಪಸ್ಥಿತರಿದ್ದರು.

    Share. Facebook Twitter Email WhatsApp Copy Link
    Previous Articleರಾಮ ಮಂದಿರ ದೇಣಿಗೆ ಹಗರಣ​: ಟ್ರಸ್ಟ್ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್ ರಾಜೀನಾಮೆ
    Next Article ಧರ್ಮಸ್ಥಳ ಕ್ಷೇತ್ರ, ವೀರೇಂದ್ರ ಹೆಗ್ಗಡೆ ಅವಹೇಳನ: ಸೌಜನ್ಯ ಮಾವ ವಿಠ್ಠಲ್ ಗೌಡಗೆ ಅರೆಸ್ಟ್​​​​​​ ವಾರಂಟ್

    Related Posts

    ಜೆರಾಕ್ಸ್ ಅಂಗಡಿ ಗಲಾಟೆ ಪ್ರಕರಣ; ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಅಂಗಡಿ ಮಾಲೀಕರನ್ನು ತಡರಾತ್ರಿ ಭೇಟಿ ಮಾಡಿದ ಅರುಣ್ ಕುಮಾರ್ ಪುತ್ತಿಲ

    August 22, 2026

    ಅಕ್ರಮ–ಸಕ್ರಮ, 94C ಅರ್ಜಿಗಳ ತುರ್ತು ವಿಲೇವಾರಿ ಹಾಗೂ ಪೌತಿ ಖಾತೆ ಸಮಸ್ಯೆ ಪರಿಹಾರಕ್ಕೆ ತಹಶೀಲ್ದಾರ್‌ ಭೇಟಿ ಮಾಡಿದ ಪುತ್ತಿಲ ಪರಿವಾರ ನಿಯೋಗ

    August 12, 2026

    ಪಶ್ಚಿಮ ಘಟ್ಟ ಪರಿಸರ ಸೂಕ್ಷ್ಮ ಪ್ರದೇಶ ಕರಡು ಅಧಿಸೂಚನೆಗೆ ಸಾರ್ವಜನಿಕರು ಆಕ್ಷೇಪಣೆ ಸಲ್ಲಿಸಿ ಶಾಸಕ ಹರೀಶ್ ಪೂಂಜ

    August 6, 2026

    ಕಾಡಾನೆ ದಾಳಿಯಲ್ಲಿ ಮೃತಪಟ್ಟ ಬಾಲಕೃಷ್ಣ ಗೌಡರ ಕುಟುಂಬಕ್ಕೆ ಶಾಸಕ ಹರೀಶ್ ಪೂಂಜ ಸಾಂತ್ವನ – ರೂ.20 ಲಕ್ಷ ಪರಿಹಾರಕ್ಕೆ ಕ್ರಮ

    August 2, 2026

    ಅಪಾಯಕಾರಿ ಗುಂಡಿ ರಸ್ತೆಯಿಂದ ಸಾರ್ವಜನಿಕರಿಗೆ ಸಂಕಷ್ಟ; ತಕ್ಷಣ ದುರಸ್ತಿಗೆ ಪುತ್ತಿಲ ಪರಿವಾರ ಮನವಿ..!

    August 1, 2026

    ಕುನಾಲ್ ಕಾಮ್ರಾ ಕಾಮಿಡಿ ಶೋ ರದ್ದುಪಡಿಸುವಂತೆ ಆಗ್ರಹಿಸಿ ವೈಟ್‌ಫೀಲ್ಡ್ ಪೊಲೀಸ್ ಠಾಣೆಗೆ ಹಿಂದೂ ರಾಷ್ಟ್ರ ಸಮನ್ವಯ ಸಮಿತಿಯಿಂದ ಮನವಿ

    August 1, 2026
    Latest Post

    ಜೆರಾಕ್ಸ್ ಅಂಗಡಿ ಗಲಾಟೆ ಪ್ರಕರಣ; ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಅಂಗಡಿ ಮಾಲೀಕರನ್ನು ತಡರಾತ್ರಿ ಭೇಟಿ ಮಾಡಿದ ಅರುಣ್ ಕುಮಾರ್ ಪುತ್ತಿಲ

    August 22, 2026

    ನಿತಿನ್‌ ನಬಿನ್‌ ಹೊಸ ತಂಡದಲ್ಲಿ ಕರ್ನಾಟಕದ ಎಂ. ನಾಗರಾಜ್‌; ಬಿ.ಎಲ್‌ ಸಂತೋಷ್‌ ಜೀ ಗೆ ಮತ್ತೆ ಪಟ್ಟ!

    August 17, 2026

    ಪುತ್ತೂರಿನ ತ್ಯಾಜ್ಯ ವಿಲೇವಾರಿ ಸಮಸ್ಯೆಗೆ ಧ್ವನಿಯಾದ ಪುತ್ತಿಲ; ಕೆದಂಬಾಡಿ ತ್ಯಾಜ್ಯ ನಿರ್ವಹಣಾ ಘಟಕಕ್ಕೆ ಭೇಟಿ

    August 14, 2026

    ಸೌಜನ್ಯ ರೇಪ್ & ಮರ್ಡರ್ ಕೇಸ್ – ಸುಪ್ರೀಂ ಕೋರ್ಟ್‌ನಲ್ಲಿ ಸಂತೋಷ್ ರಾವ್‌ಗೆ ಹಿನ್ನಡೆ

    August 13, 2026
    Abheda Media
    Facebook X (Twitter) Instagram YouTube
    • ಮುಖಪುಟ
    • ಪ್ರಮುಖ ಸುದ್ದಿ
    • ಸ್ಥಳೀಯ ಸುದ್ದಿ
    • ಎಂಟರ್ಟೈನ್ಮೆಂಟ್
    • ಫೈನಾನ್ಸ್
    • ಆಧ್ಯಾತ್ಮ

    Call : +91 86602 34508

    Email : abhedamedia@gmail.com

    © 2026 Abheda Media. Designed by Blueline Computers.

    Type above and press Enter to search. Press Esc to cancel.