Close Menu
    Latest News

    ಜೆರಾಕ್ಸ್ ಅಂಗಡಿ ಗಲಾಟೆ ಪ್ರಕರಣ; ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಅಂಗಡಿ ಮಾಲೀಕರನ್ನು ತಡರಾತ್ರಿ ಭೇಟಿ ಮಾಡಿದ ಅರುಣ್ ಕುಮಾರ್ ಪುತ್ತಿಲ

    August 22, 2026

    ನಿತಿನ್‌ ನಬಿನ್‌ ಹೊಸ ತಂಡದಲ್ಲಿ ಕರ್ನಾಟಕದ ಎಂ. ನಾಗರಾಜ್‌; ಬಿ.ಎಲ್‌ ಸಂತೋಷ್‌ ಜೀ ಗೆ ಮತ್ತೆ ಪಟ್ಟ!

    August 17, 2026

    ಪುತ್ತೂರಿನ ತ್ಯಾಜ್ಯ ವಿಲೇವಾರಿ ಸಮಸ್ಯೆಗೆ ಧ್ವನಿಯಾದ ಪುತ್ತಿಲ; ಕೆದಂಬಾಡಿ ತ್ಯಾಜ್ಯ ನಿರ್ವಹಣಾ ಘಟಕಕ್ಕೆ ಭೇಟಿ

    August 14, 2026
    Facebook X (Twitter) Instagram
    Abheda MediaAbheda Media
    • ಮುಖಪುಟ
    • ಪ್ರಮುಖ ಸುದ್ದಿ
    • ಸ್ಥಳೀಯ ಸುದ್ದಿ
    • ಎಂಟರ್ಟೈನ್ಮೆಂಟ್
    • ಫೈನಾನ್ಸ್
    • ಆಧ್ಯಾತ್ಮ
    Facebook X (Twitter) Instagram
    Abheda MediaAbheda Media
    Home»ಪ್ರಮುಖ ಸುದ್ದಿ»ವೈರಲ್‌ ಪೋಸ್ಟಿಗೆ ಪ್ರತ್ಯುತ್ತರ – ವೈಯುಕ್ತಿಕ ಲಾಭಕ್ಕಾಗಿ ಸಂಘಟನೆಗೆ ಬರಬೇಡಿ ಎಂದ ಸಂಘಟನೆಯ ಬಿಲ್ಲವ ನಾಯಕ
    ಪ್ರಮುಖ ಸುದ್ದಿ

    ವೈರಲ್‌ ಪೋಸ್ಟಿಗೆ ಪ್ರತ್ಯುತ್ತರ – ವೈಯುಕ್ತಿಕ ಲಾಭಕ್ಕಾಗಿ ಸಂಘಟನೆಗೆ ಬರಬೇಡಿ ಎಂದ ಸಂಘಟನೆಯ ಬಿಲ್ಲವ ನಾಯಕ

    adminBy adminJuly 11, 2026
    Share Facebook Twitter Email WhatsApp Copy Link

    ಶರತ್ ಮಡಿವಾಳ ಕೊಲೆ ಗಲಾಟೆ ಪ್ರಕರಣದಲ್ಲಿ ಜೈಲು ಪಾಲಾಗಿದ್ದ ಹಿಂದೂ ಸಂಘಟನೆ ಮುಖಂಡ ಸಂದೀಪ್ ಪೂಜಾರಿ ಸಂಘ ಪರಿವಾರ ಹಾಗೂ ಬಿಜೆಪಿ ವಿರುದ್ಧ ಅಸಮಾಧಾನ ಹೊರಹಾಕಿರೋದೀಗ ಭಾರಿ ಚರ್ಚೆಗೆ ಗ್ರಾಸವಾಗಿದೆ. ಇದರ ಬೆನ್ನಲ್ಲೆ ಸಂಘಟನೆಯ ಬೆಂಬಲಿಗರು ಆ ಪೋಸ್ಟ್‌ಗೆ ಪ್ರತ್ಯುತ್ತರ ನೀಡುತ್ತಿದ್ದು ವೈಯುಕ್ತಿಕ ಲಾಭಕ್ಕಾಗಿ ಸಂಘಟನೆಗೆ ಬರಬೇಡಿ ಎಂದಿದ್ದಾರೆ.

    ನಾನೊಬ್ಬ ಹಿಂದು ಕಾರ್ಯಕರ್ತನಾಗಿರುವುದಕ್ಕೆ ಹೆಮ್ಮೆ ಇದೆ ಎಂದ ಸಂಘಟನೆಯ ಮುಖಂಡ ಪ್ರದೀಪ್ ಸರಿಪಲ್ಲ.

    ನಾನೊಬ್ಬ ಹಿಂದುಳಿದ ವರ್ಗದ ಬಿಲ್ಲವ ಸಮುದಾಯಕ್ಕೆ ಸೇರಿದ ಹಿಂದೂ ಕಾರ್ಯಕರ್ತ ಆಗಿರುವುದಕ್ಕೆ ಹೆಮ್ಮೆಯಿದೆ. ನನ್ನ ಜಾತಿಯ ಬಗ್ಗೆ ಹೆಮ್ಮೆ ಇದೆ. ಯಾವತ್ತೂ ನಾನು ಜಾತಿಯ ಹೆಸರನ್ನು ಹೇಳಿಲ್ಲ ಆದರೆ ಇವತ್ತು ಅನಿವಾರ್ಯವಾಯಿತು. ಸಂಘಟನೆಯಲ್ಲಿ ಕಾರ್ಯ ನಿರ್ವಹಿಸಬೇಕು ಎಂದು ಬಂದವನಿಗೆ ಯಾವ ಫಲಾಪೇಕ್ಷೇಯು ಇರಬಾರದು. ಅದೇ ಸಿದ್ಧಾಂತದಡಿ ನಾವೆಲ್ಲರೂ ಧರ್ಮ ಕಾರ್ಯದಲ್ಲಿ ತೊಡಗಿಸಿಕೊಂಡವರು. ಸಂಘಟನೆಯಿಂದ ನನಗೇನು ಲಾಭ ಎಂದು ಬಂದವನಲ್ಲ, ನನ್ನಿಂದ ಸಂಘಟನೆಗೆ ಕಿಂಚಿತ್ತಾದರೂ ಲಾಭವಾಗಲಿ ಎಂದು ಬಂದವನು. ಸಂಘಟನೆಯಿಂದ ನನಗೆ ರಾಜಕೀಯ ಲಾಭವಾಗಲಿ ಎಂದು ಬಂದವನಲ್ಲ, ನಮ್ಮ ಸಂಘಟನೆಯಿಂದ ಒಂದು ರಾಜಕೀಯ ಪಕ್ಷಕ್ಕೆ ಶ್ರೇಯಸ್ಸು ಸಿಗುತ್ತದೆ ಎಂದರೆ ಅದಕ್ಕಿಂತ ಬೇರೆ ಖುಷಿ ಇಲ್ಲ ಎಂದು ಹಿಂದೂ ಸಂಘಟನೆಯ ಮುಖಂಡ ಪ್ರದೀಪ್ ಸರಿಪಲ್ಲ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.

    ಶ್ರೇಯಸ್ಸು ಸಿಕ್ಕವರು ನಮ್ಮನ್ನು ಬಳಸಿಕೊಂಡಿಲ್ಲ, ಬದಲಾಗಿ ನಮ್ಮನ್ನು ಬೆಳೆಸಿದ್ದಾರೆ, ಕಷ್ಟ ಬಂದಾಗ ಬೆನ್ನಿಗೆ ನಿಂತಿದ್ದಾರೆ. ಆರ್ಥಿಕವಾಗಿ ನನ್ನದೂ ಅತ್ಯಂತ ಕೆಟ್ಟ ಕಾಲವಿದು, ಆದರೆ ಸಂಘಟನೆಯಾಗಲಿ ಸಂಘದ ಹಿರಿಯರಾಗಲಿ ಕಿರಿಯರಾಗಲಿ ನನ್ನ ಕೈ ಬಿಟ್ಟಿಲ್ಲ. ನನಗೆ ಕಷ್ಟ ಇದೆ ಎಂಬ ಕಾರಣಕ್ಕೆ ನನ್ನನ್ನು ಸಮಾಜಕ್ಕೆ ಪರಿಚಯಿಸಿದ ಸಂಘಟನೆಗೆ ನಾನು ಯಾವತ್ತೂ ಅಪಮಾನ ಮಾಡೋದಿಲ್ಲ. ಸಂಘಟನೆಯಲ್ಲಿ ದುಡಿದವನಿಗೆ ಕೇಸ್ ಕೋರ್ಟ್ ಹೊಸತೇನಲ್ಲ, ಕೇಸ್ ನನ್ನ ಮೇಲೂ ಇದೆ, ಆದರೆ ಯಾವತ್ತೂ ಯಾರ ಎಂಜಲು ಕಾಸಿಗೆ ಕೈಯೊಡ್ಡಿ ನನ್ನ ಮಾತೃ ಸಮಾನವಾದ ಸಂಘಟನೆಗೆ ಅಪಕೀರ್ತಿ ತರುವವನಲ್ಲ.
    ಕರಾವಳಿ ಯಾವತ್ತಿಗೂ ಹಿಂದುತ್ವದ ಭದ್ರಕೋಟೆ, ರಾಜಕೀಯವಾಗಿಯೂ ಸಾಂಸ್ಕೃತಿಕವಾಗಿಯೂ ಮತ್ತು ಭೌಗೋಳಿಕವಾಗಿಯೂ, ಹಿಂದುತ್ವವೇ ಈ ಮಣ್ಣಿನ ಉಸಿರು ಎಂದಿದ್ದಾರೆ‌.

    ನಷ್ಟವನ್ನು ಅನುಭವಿಸಲು ಸಾಧ್ಯವಿದ್ದರೆ ಮಾತ್ರ ಸಂಘಟನೆಗೆ ಬರಬೇಕು – ಪುನೀತ್‌ ಅತ್ತಾವರ

    ಸಂಘಟನಾ ಕೆಲಸ ಅಂದರೆ ಹಾಗೇನೇ ಅದರಲ್ಲಿ ಲಾಭ ಇದೆಯಾ… ಇಲ್ಲಾ ನಷ್ಟನೇ.. ನಷ್ಟವನ್ನು ಅನುಭವಿಸಲು ಸಾಧ್ಯವಿದ್ದರೆ ಮಾತ್ರ ಸಂಘಟನೆಗೆ ಬರಬೇಕು.. ಇಲ್ಲದಿದ್ದರೆ ಮನೆಯಲ್ಲಿ ಕೂರುವುದು ಒಳ್ಳೆಯದು ಎಂದು ಸಂಘಟನೆಯ ಮುಖಂಡ ಪುನೀತ್‌ ಅತ್ತಾವರ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.

    ಕೇಸುಗಳು ನನ್ನ ಮೇಲೂ ಆಗಿದೆ. ಈಗಲೂ ಕೇಸುಗಳನ್ನು ಎದುರಿಸುತ್ತಲೇ ಇದ್ದೇನೆ ಎಂದ ಸುನಿಲ್ ಪಣಪಿಲ

    ಕೇಸುಗಳು ನನ್ನ ಮೇಲೂ ಆಗಿದೆ. ಈಗಲೂ ಕೇಸುಗಳನ್ನು ಎದುರಿಸುತ್ತಲೇ ಇದ್ದೇನೆ. ಕಾಂಗ್ರೆಸ್ ಸಚಿವರ ಎದುರೇ ಕಾಲರ್ ಹಿಡಿಯುವಷ್ಟರ ಮಟ್ಟಿಗೆ ಹೋರಾಡಿದ್ದೆವು. ನೋವನ್ನೂ ಅನುಭವಿಸಿ ಆಗಿದೆ. ದೇವರಾಣೆಗೂ ಹೇಳ್ತೇನೆ, ನಾನು ಯಾರನ್ನೂ ನಂಬಿಕೊಂಡು ಮುಂದೆ ಹೋದವನಲ್ಲ.‌ ಈಗಲೂ ನನ್ನ ಮೇಲೆ ಕೇಸಿದೆ. ಅವರಿವರು ನನ್ನನ್ನು ವಿಚಾರಿಸಿಲ್ಲ ಎಂಬ ಬೇಸರವೂ ಇಲ್ಲ. ಯಾಕೆಂದರೆ ನಾನು ಅವರನ್ನು ಕೇಳಿ ಕೆಲಸ ಮಾಡಿಲ್ಲ ಮತ್ತು ಅವರು ನನ್ನನ್ನು ಕೇಳಬೇಕೆಂದು ಅಪೇಕ್ಷೆ ಪಟ್ಟವನೂ ಅಲ್ಲ. ಅದರ ಹೊರತಾಗಿ ನನಗೆ ಬಹಳಷ್ಟು ನಾಯಕರು ಸಹಾಯ ಮಾಡಿದರು, ಬಹಳಷ್ಟು ನಾಯಕರು ವಿಚಾರಿಸಿದರು, ಬಹಳಷ್ಟು ಸ್ನೇಹಿತರು ನನ್ನೊಟ್ಟಿಗೆ ಹಗಲಿರುಳು ನಿಂತರು. ಅನೇಕ ವಕೀಲರು ನಯಾಪೈಸೆ ಸ್ವೀಕರಿಸದೆ ಕೋರ್ಟಲ್ಲಿ ವಾದ ಮಾಡಿದರು.

    ತಲೆ ಗಟ್ಟಿ ಇದ್ದರೆ ಮಾತ್ರ ಬಂಡೆಗೆ ಡಿಚ್ಚಿ ಹೊಡೆಯಿರಿ. ನಂತರ ತಲೆ ಒಡೆದಾಗ ಯಾರ್ಯಾರಿಗೋ ದೂರು ಹಾಕಬೇಡಿ. ಸಂಘ ಕಾರ್ಯ, ಸಂಘಟನೆಗೆ ಎಂದು ಬಂದಾಗ ಯಾರನ್ನಾದರೂ ನಂಬಿ ಬಂದರೆ, ನೀವು ಯಾರನ್ನು ನಂಬಿ ಬಂದಿದ್ದೀರೋ ಅವರನ್ನೇ ನೇರವಾಗಿ ಕೇಳಿ. ಅದು ಬಿಟ್ಟು ಸಂಘಟನೆ, ಪಕ್ಷಕ್ಕೆ ದೂರು ಹಾಕುವುದು ಪುರುಷಾರ್ಥ ಅಲ್ಲ ಎಂದು ಬಿಜೆಪಿ ಕಾರ್ಯಕರ್ತ ಸುನಿಲ್ ಪಣಪಿಲ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.

    ಒಬ್ಬರಲ್ಲ ಇಬ್ಬರಲ್ಲ, ಹತ್ತಾರು ಕೇಸು ಹಾಕಿಸಿಕೊಂಡು ನೂರಾರು ಸಾವಿರಾರು ಕಾರ್ಯಕರ್ತರು ಇದ್ದಾರೆ. ಇಂದಿಗೂ ಜೈಲಿನಲ್ಲಿ ದಿನ ದೂಡುವವರೂ ಇದ್ದಾರೆ. ಅವರ್ಯಾರೂ ಅಸಮಧಾನ ಹೊರಹಾಕಿಲ್ಲ. ಬೇಸರ, ಬೇನೆ ಖಂಡಿತಾ ಇರುತ್ತದೆ. ಆದರೆ ಹಿಂದುತ್ವದ ಕೆಲಸ ಮಾಡಿದ ಸಮಾಧಾನ ಅವರಲ್ಲಿ ಖಂಡಿತಾ ಇದೆ. ಶಾಸಕರು ಸಂಸದರು ಕೆಲಸ ಮಾಡಿಲ್ವಾ? ಖಂಡಿತಾ ಮಾಡಿದ್ದಾರೆ. ಯಾವ ಶಾಸಕರು ಯಾವ ಸಂಸದರು ಯಾವ ನಾಯಕರು ಎಷ್ಟು ಕೆಲಸ ಮಾಡಿದ್ದಾರೆ, ವಕೀಲರು ಸಹಿತ ಎಷ್ಟು ಕೆಲಸ ಮಾಡುತ್ತಿದ್ದಾರೆ ಎಂಬುದು ನನಗೆ ತಿಳಿದಿದೆ. ಸುಮ್ಮನೆ ದೂಷಿಸುವುದು ಸರಿಯಲ್ಲ. ಅದಾಗ್ಯೂ ಹಲವಾರು ಕಡೆಗಳಲ್ಲಿ ನಾಯಕರ ಕೆಲಸ ಸಾಕಾಗುತ್ತಿಲ್ಲ ಎಂಬ ದೂರುಗಳಿವೆ. ಅದು ಸಹಜ. ನಾಯಕರೂ ಕಾರ್ಯಕರ್ತರ ನೆರವಿಗೆ ಧಾವಿಸುವುದು ಅತೀ ಅವಶ್ಯಕ. ಯಾಕೆಂದರೆ ಕಾರ್ಯಕರ್ತರಿಂದಲೇ ನಾಯಕರು.

    ನನಗೆ ಕೆಲವು ನಾಯಕರು ಕೆಲಸ‌ ಮಾಡಿದ್ದಾರೆ, ಕೆಲವರು ಮಾಡಿಲ್ಲ. ಅಂದಮಾತ್ರಕ್ಕೆ ಅವರನ್ನು ನಾನು ವಿರೋಧಿಸಲ್ಲ. ನಾನು ಯಾವತ್ತಿಗೂ ಬಿಜೆಪಿ ವಿರುದ್ಧ ಕೆಲಸ ಮಾಡಲ್ಲ. ಜಾತಿಯ ಕಾರಣಕ್ಕಾಗಿ ಕಾಂಗ್ರೆಸ್ ಪರವಾಗಿ ಪ್ರಚಾರಕ್ಕೆ ಹೋಗಲ್ಲ. ಸ್ವತಃ ನನ್ನ ಸಮುದಾಯದ ಸ್ವಾಮೀಜಿಯವರು ಹೇಳಿದ್ದರೂ ನಾನು ಸಂಘದ ಸಿದ್ಧಾಂತದ ವಿರುದ್ಧ ಹೋದವನೇ ಅಲ್ಲ. ಹಾಗಂತ ನಾನು ಜಾತಿ ವಿರೋಧಿ ಅಲ್ಲ‌. ಜಾತಿ ಸಂಘಟನೆಯಲ್ಲೂ ಕೆಲಸ ಮಾಡಿದ್ದೇನೆ. ಹಳದಿ ಭಾವುಟ ಹಾರಿಸುವಾಗ ಅದಕ್ಕಿಂತಲೂ ಒಂದು ಫೀಟ್ ಎತ್ತರವಾಗಿ ಕೇಸರಿ ಬಾವುಟ ಹಾರಿಸಿದ್ದೇನೆ. ಹಳದಿ ಬಂಟಿಂಗ್ಸ್ ಹಾಕುವಾಗ ಅದರ ಜೊತೆಗೆ ಕೇಸರಿ ಬಂಟ್ಂಗ್ಸ್ ಕೂಡಾ ಹಾಕಿದ್ದೇನೆ. ಆರಂಭದಲ್ಲಿ ಸ್ವಲ್ಪ ಅಪಸ್ವರ ಬಂದಿದ್ದರೂ ಕೂಡಾ ಈಗ ಎಲ್ಲವೂ ಸರಿಯಾಗಿದೆ. ಆ ಮನಸ್ಥಿತಿ ಇರಬೇಕೇ ಹೊರತು ಜಾತಿಯನ್ನು ಹಿಂದೂ ಸಂಘಟನೆಯ ವಿರುದ್ಧ ಎತ್ತಿಕಟ್ಟುವುದಲ್ಲ.
    ಹಿಂದೂ ಸಂಘಟನೆಯಲ್ಲಿ ಲಾಭ ಇದೆ ಎಂದು ಬಂದವರಿಗೆ ಮಾತ್ರ ಕೊನೆಯಲ್ಲಿ ಅಸಮಧಾನ ಆಗುತ್ತದೆ. ಭರತ್ ಕುಮ್ಡೇಲು ರಂತಹ ನಿಸ್ವಾರ್ಥ ಜೀವಿಗಳು ಜೈಲಿನಲ್ಲಿದ್ದರೂ ಈಗಲೂ ಹಿಂದುತ್ವದ ಜಪ ಮಾಡುತ್ತಿದ್ದಾರೆ. ಕಾರಣ “ಸಮರ್ಪಣಾ ಮನೋಭಾವ”…ಎಂದಿದ್ದಾರೆ.

     

    Share. Facebook Twitter Email WhatsApp Copy Link
    Previous Articleಕಾಲೇಜು ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ: ಮಂಗಳೂರಿನ ಖಾಸಗಿ ಬಸ್ ಕಂಡಕ್ಟರ್ ಇರ್ಫಾನ್ ಬಂಧನ
    Next Article ಅಂತರ್ಜಾಲದ ಜಾಲದಲ್ಲಿ: ಭಾಗ 3 – ಫಿಶಿಂಗ್ (Phishing) ಮೋಸ: ಆಮಿಷದ ಬಲೆಗೆ ಬೀಳದಿರಿ!

    Related Posts

    ನಿತಿನ್‌ ನಬಿನ್‌ ಹೊಸ ತಂಡದಲ್ಲಿ ಕರ್ನಾಟಕದ ಎಂ. ನಾಗರಾಜ್‌; ಬಿ.ಎಲ್‌ ಸಂತೋಷ್‌ ಜೀ ಗೆ ಮತ್ತೆ ಪಟ್ಟ!

    August 17, 2026

    ಪುತ್ತೂರಿನ ತ್ಯಾಜ್ಯ ವಿಲೇವಾರಿ ಸಮಸ್ಯೆಗೆ ಧ್ವನಿಯಾದ ಪುತ್ತಿಲ; ಕೆದಂಬಾಡಿ ತ್ಯಾಜ್ಯ ನಿರ್ವಹಣಾ ಘಟಕಕ್ಕೆ ಭೇಟಿ

    August 14, 2026

    ಸೌಜನ್ಯ ರೇಪ್ & ಮರ್ಡರ್ ಕೇಸ್ – ಸುಪ್ರೀಂ ಕೋರ್ಟ್‌ನಲ್ಲಿ ಸಂತೋಷ್ ರಾವ್‌ಗೆ ಹಿನ್ನಡೆ

    August 13, 2026

    ಇಂದಿನಿಂದ ಪೆಟ್ರೋಲ್‌, ಡೀಸೆಲ್‌ ದರ 60 ಪೈಸೆ ಏರಿಕೆ

    August 12, 2026

    ದೇವಸ್ಥಾನಗಳಲ್ಲಿ ಮೊಬೈಲ್ ಬಳಕೆ ನಿಷೇಧ ಮಾಡಿದ ವಿಜಯ್ ಸರ್ಕಾರ

    August 10, 2026

    ಪುತ್ತೂರಿನ ತಿರಂಗಾ ಯಾತ್ರೆ ರಾಜಕೀಯ ಬಲಪ್ರದರ್ಶನವೇ?

    August 6, 2026
    Latest Post

    ಜೆರಾಕ್ಸ್ ಅಂಗಡಿ ಗಲಾಟೆ ಪ್ರಕರಣ; ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಅಂಗಡಿ ಮಾಲೀಕರನ್ನು ತಡರಾತ್ರಿ ಭೇಟಿ ಮಾಡಿದ ಅರುಣ್ ಕುಮಾರ್ ಪುತ್ತಿಲ

    August 22, 2026

    ನಿತಿನ್‌ ನಬಿನ್‌ ಹೊಸ ತಂಡದಲ್ಲಿ ಕರ್ನಾಟಕದ ಎಂ. ನಾಗರಾಜ್‌; ಬಿ.ಎಲ್‌ ಸಂತೋಷ್‌ ಜೀ ಗೆ ಮತ್ತೆ ಪಟ್ಟ!

    August 17, 2026

    ಪುತ್ತೂರಿನ ತ್ಯಾಜ್ಯ ವಿಲೇವಾರಿ ಸಮಸ್ಯೆಗೆ ಧ್ವನಿಯಾದ ಪುತ್ತಿಲ; ಕೆದಂಬಾಡಿ ತ್ಯಾಜ್ಯ ನಿರ್ವಹಣಾ ಘಟಕಕ್ಕೆ ಭೇಟಿ

    August 14, 2026

    ಸೌಜನ್ಯ ರೇಪ್ & ಮರ್ಡರ್ ಕೇಸ್ – ಸುಪ್ರೀಂ ಕೋರ್ಟ್‌ನಲ್ಲಿ ಸಂತೋಷ್ ರಾವ್‌ಗೆ ಹಿನ್ನಡೆ

    August 13, 2026
    Abheda Media
    Facebook X (Twitter) Instagram YouTube
    • ಮುಖಪುಟ
    • ಪ್ರಮುಖ ಸುದ್ದಿ
    • ಸ್ಥಳೀಯ ಸುದ್ದಿ
    • ಎಂಟರ್ಟೈನ್ಮೆಂಟ್
    • ಫೈನಾನ್ಸ್
    • ಆಧ್ಯಾತ್ಮ

    Call : +91 86602 34508

    Email : abhedamedia@gmail.com

    © 2026 Abheda Media. Designed by Blueline Computers.

    Type above and press Enter to search. Press Esc to cancel.