Author: admin
ಇಂಟರ್ನೆಟ್ ಜಗತ್ತಿನಲ್ಲಿ ಅಪರಾಧಿಗಳು ನಿಮ್ಮನ್ನು ನೇರವಾಗಿ ಹ್ಯಾಕ್ ಮಾಡುವ ಬದಲು, ನಿಮ್ಮನ್ನೇ ನಂಬಿಸಿ ನಿಮ್ಮ ಖಾಸಗಿ ಮಾಹಿತಿಯನ್ನು ಕದಿಯುವ ತಂತ್ರವೇ ಫಿಶಿಂಗ್. ಮೀನಿನ ಬಲೆಗೆ ಆಹಾರ ಹಾಕಿ ಆಕರ್ಷಿಸುವಂತೆ, ಇವರು ನಿಮಗೆ ಆಮಿಷವೊಡ್ಡಿ ಅಥವಾ ಭಯ ಹುಟ್ಟಿಸಿ ಮೋಸ ಮಾಡುತ್ತಾರೆ. ⚠️ ರಾಘವನ ಒಂದು ಸಣ್ಣ ತಪ್ಪು 📖 ನಮ್ಮ ಶಾಲೆಯ ಶಿಕ್ಷಕರಲ್ಲಿ ಒಬ್ಬರಾದ ರಾಘವ ಅವರು ಇಂಟರ್ನೆಟ್ನಲ್ಲಿ ತುಂಬಾ ಸಕ್ರಿಯರು. ಒಂದು ದಿನ ಅವರ ಮೊಬೈಲ್ಗೆ ಒಂದು ಆಕರ್ಷಕ ಸಂದೇಶ ಬಂತು: *”ಅಭಿನಂದನೆಗಳು! ನೀವು ನಮ್ಮ ಶಾಪಿಂಗ್ ಆ್ಯಪ್ನ ಅದೃಷ್ಟಶಾಲಿ ವಿಜೇತರು. ನಿಮಗೆ ₹10,000 ಉಡುಗೊರೆ ಲಭಿಸಿದೆ. ಅದನ್ನು ಪಡೆಯಲು ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ!”* 🎁✨ ಅದನ್ನು ನೋಡಿದ ರಾಘವ ಅವರು ತುಂಬಾ ಖುಷಿಯಾದರು. ಆ ಲಿಂಕ್ ಮೇಲೆ ಕ್ಲಿಕ್ ಮಾಡಿದಾಗ, ಅವರ ಬ್ಯಾಂಕ್ ವಿವರಗಳನ್ನು ಮತ್ತು OTP ಕೇಳುವ ಒಂದು ನಕಲಿ ಪೇಜ್ ತೆರೆದುಕೊಂಡಿತು. ಆಮಿಷಕ್ಕೆ ಬಲಿಯಾದ ರಾಘವ ಅವರು, ಸತ್ಯಾಸತ್ಯತೆಯನ್ನು ಪರಿಶೀಲಿಸದೆ ತಮ್ಮ…
ಶರತ್ ಮಡಿವಾಳ ಕೊಲೆ ಗಲಾಟೆ ಪ್ರಕರಣದಲ್ಲಿ ಜೈಲು ಪಾಲಾಗಿದ್ದ ಹಿಂದೂ ಸಂಘಟನೆ ಮುಖಂಡ ಸಂದೀಪ್ ಪೂಜಾರಿ ಸಂಘ ಪರಿವಾರ ಹಾಗೂ ಬಿಜೆಪಿ ವಿರುದ್ಧ ಅಸಮಾಧಾನ ಹೊರಹಾಕಿರೋದೀಗ ಭಾರಿ ಚರ್ಚೆಗೆ ಗ್ರಾಸವಾಗಿದೆ. ಇದರ ಬೆನ್ನಲ್ಲೆ ಸಂಘಟನೆಯ ಬೆಂಬಲಿಗರು ಆ ಪೋಸ್ಟ್ಗೆ ಪ್ರತ್ಯುತ್ತರ ನೀಡುತ್ತಿದ್ದು ವೈಯುಕ್ತಿಕ ಲಾಭಕ್ಕಾಗಿ ಸಂಘಟನೆಗೆ ಬರಬೇಡಿ ಎಂದಿದ್ದಾರೆ. ನಾನೊಬ್ಬ ಹಿಂದು ಕಾರ್ಯಕರ್ತನಾಗಿರುವುದಕ್ಕೆ ಹೆಮ್ಮೆ ಇದೆ ಎಂದ ಸಂಘಟನೆಯ ಮುಖಂಡ ಪ್ರದೀಪ್ ಸರಿಪಲ್ಲ. ನಾನೊಬ್ಬ ಹಿಂದುಳಿದ ವರ್ಗದ ಬಿಲ್ಲವ ಸಮುದಾಯಕ್ಕೆ ಸೇರಿದ ಹಿಂದೂ ಕಾರ್ಯಕರ್ತ ಆಗಿರುವುದಕ್ಕೆ ಹೆಮ್ಮೆಯಿದೆ. ನನ್ನ ಜಾತಿಯ ಬಗ್ಗೆ ಹೆಮ್ಮೆ ಇದೆ. ಯಾವತ್ತೂ ನಾನು ಜಾತಿಯ ಹೆಸರನ್ನು ಹೇಳಿಲ್ಲ ಆದರೆ ಇವತ್ತು ಅನಿವಾರ್ಯವಾಯಿತು. ಸಂಘಟನೆಯಲ್ಲಿ ಕಾರ್ಯ ನಿರ್ವಹಿಸಬೇಕು ಎಂದು ಬಂದವನಿಗೆ ಯಾವ ಫಲಾಪೇಕ್ಷೇಯು ಇರಬಾರದು. ಅದೇ ಸಿದ್ಧಾಂತದಡಿ ನಾವೆಲ್ಲರೂ ಧರ್ಮ ಕಾರ್ಯದಲ್ಲಿ ತೊಡಗಿಸಿಕೊಂಡವರು. ಸಂಘಟನೆಯಿಂದ ನನಗೇನು ಲಾಭ ಎಂದು ಬಂದವನಲ್ಲ, ನನ್ನಿಂದ ಸಂಘಟನೆಗೆ ಕಿಂಚಿತ್ತಾದರೂ ಲಾಭವಾಗಲಿ ಎಂದು ಬಂದವನು. ಸಂಘಟನೆಯಿಂದ ನನಗೆ ರಾಜಕೀಯ ಲಾಭವಾಗಲಿ ಎಂದು ಬಂದವನಲ್ಲ, ನಮ್ಮ…
ಮಂಗಳೂರು: ಕಾಲೇಜು ವಿದ್ಯಾರ್ಥಿನಿಯರಿಗೆ ಬಸ್ನಲ್ಲಿ ಲೈಂಗಿಕ ಕಿರುಕುಳ ನೀಡಿದ ಆರೋಪದಡಿ ಸೆಲೇನ ಖಾಸಗಿ ಬಸ್ನ ಕಂಡಕ್ಟರ್ನನ್ನು ಮಂಗಳೂರು ದಕ್ಷಿಣ ಪೊಲೀಸ್ ಠಾಣೆ ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿ ಇರ್ಫಾನ್ (32) ಮೂಲ ನಿವಾಸಿ ಕಲ್ಲೇರಿ ಮನೆ, ಉಪ್ಪಿನಂಗಡಿ, ಪ್ರಸ್ತುತ ಅಬುಬಕರ್ ಅವರ ಬಾಡಿಗೆ ಮನೆ, ಕರ್ವೇಲು ಎಂದು ಗುರುತಿಸಲಾಗಿದೆ. ಆರೋಪಿ ಮಂಗಳೂರು-ವಿಟ್ಲ ಮಾರ್ಗದ ಸೆಲೇನ ಖಾಸಗಿ ಬಸ್ನಲ್ಲಿ ಕಂಡಕ್ಟರ್ ಆಗಿ ಕೆಲಸ ಮಾಡುತ್ತಿದ್ದಾನೆ. ಪೊಲೀಸರ ಮಾಹಿತಿ ಪ್ರಕಾರ, ಜುಲೈ 9, 2026ರಂದು ಸಂಜೆ ಸುಮಾರು 5 ಗಂಟೆ ವೇಳೆಗೆ, ಬಸ್ನಲ್ಲಿ ಪ್ರಯಾಣಿಸುತ್ತಿದ್ದ ಕಾಲೇಜು ವಿದ್ಯಾರ್ಥಿನಿಯರನ್ನು ಗುರಿಯಾಗಿಸಿಕೊಂಡು ಆರೋಪಿ ತನ್ನ ಗುಪ್ತಾಂಗವನ್ನು ಪ್ರದರ್ಶಿಸಿ ಅಶ್ಲೀಲ ಸನ್ನೆ ಮಾಡಿದ್ದಲ್ಲದೆ, “ಹಿಂದಿನ ಸೀಟಿಗೆ ಬಾ” ಎಂದು ಕರೆದು ಲೈಂಗಿಕ ಕಿರುಕುಳ ನೀಡಿದ್ದಾನೆ ಎನ್ನಲಾಗಿದೆ. ಸಂತ್ರಸ್ತ ಕಾಲೇಜು ವಿದ್ಯಾರ್ಥಿನಿಯರ ದೂರಿನ ಮೇರೆಗೆ ಮಂಗಳೂರು ದಕ್ಷಿಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಜುಲೈ 10ರಂದು ಆರೋಪಿಯನ್ನು ಬಂಧಿಸಿ ಹೆಚ್ಚಿನ ತನಿಖೆ ಕೈಗೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಕೊಲೆ ಕೇಸ್ ನಲ್ಲಿ ಜೈಲಿಗೆ ಹೋದವರಿಗೆ ಸಂಘ ಪರಿವಾರದವರು ಸಹಾಯ ಮಾಡ್ತಿಲ್ಲ ಎಂಬ ಹಿಂದೂ ಸಂಘಟನೆಗಳ ಆರೋಪ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಗೃಹ ಸಚಿವ ಪ್ರಿಯಾಂಕ್ ಖರ್ಗೆ, ನಾನು ಮುಂಚೆ ಇಂದ ಇದೇ ಹೇಳ್ತಾ ಇದ್ದೀನಿ ಧರ್ಮ ರಕ್ಷಣೆ, ಗೋ ರಕ್ಷಣೆಗೆ ಬಿಡೋದು ಬಡವರ ಮಕ್ಕಳಿಗೆ. ಇವರ ಮಕ್ಕಳ ಏನ್ ಮಾಡ್ತಾ ಇದ್ದಾರೆ. ಒಬ್ಬ ಬಿಜೆಪಿ ಲೀಡರ್ ಮಗ RSS ನ ಪೂರ್ಣ ಪ್ರಚಾರಕರು ಇದ್ದರೆ ತೋರಿಸಿ ನೋಡೋಣ ಅಂತ ಕಿಡಿಕಾರಿದರು. ಫುಲ್ ಟೈಂ ಪ್ರಚಾರಕರನ್ನ ಒಬ್ಬ ಬಿಜೆಪಿ ನಾಯಕರ ಮಗನನ್ನ ತೋರಿಸಿ. ವಿಜಯ ದಶಮಿಗೆ ಒಂದು ದಿನ ಚಡ್ಡಿ ಪ್ಯಾಂಟ್ ಹಾಕೋದು. ಕೋಮು ಗಲಭೆಯಲ್ಲಿ ಯಾರು ಸಾಯ್ತಾ ಇದ್ದಾರೆ. ಇವರು ಮಕ್ಕಳ ಹೋಗ್ತಾರಾ? ಪರೇಶ್ ಮೆಸ್ತಾ ಹೆಸರಲ್ಲಿ ಚುನಾವಣೆ ಗೆದ್ರು. ಅವರ ಮನೆಗೆ ಇವರು ಹೋಗಿದ್ದಾರಾ? ಎಷ್ಟೋ ಜನ ತೀರಿ ಹೋದ್ರು. 22,26,28 ವರ್ಷದವರು ತೀರಿ ಹೋದ್ರು. ಈಗಲಾದ್ರು ಯುವಕರು ಜಾಗೃತಿರಾಗಿ ಉದ್ಯೋಗ ಹುಡುಕಿ ಕುಟುಂಬಕ್ಕೆ ನೆರವಾಗಿ ಅಂತ ಕರೆ…
ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟುಮಾಡಿದ ಪ್ರಕರಣಗಳಲ್ಲಿ ಕಾನೂನಿನ ಸಮಾನ ಅನ್ವಯಕ್ಕೆ ಆಗ್ರಹಿಸಿ ಡಿಜಿಪಿಗೆ ಹಿಂದೂ ರಾಷ್ಟ್ರ ಸಮನ್ವಯ ಸಮಿತಿಯಿಂದ ಮನವಿ – ತಕ್ಷಣವೇ ಕ್ರಮಕ್ಕೆ ಡಿಜಿಪಿ ಸೂಚನೆ
ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟುಮಾಡಿದ ಪ್ರಕರಣಗಳಲ್ಲಿ ಕಾನೂನಿನ ಸಮಾನ ಅನ್ವಯಕ್ಕೆ ಆಗ್ರಹಿಸಿ ಡಿಜಿಪಿಗೆ ಹಿಂದೂ ರಾಷ್ಟ್ರ ಸಮನ್ವಯ ಸಮಿತಿಯಿಂದ ಮನವಿ – ತಕ್ಷಣವೇ ಕ್ರಮಕ್ಕೆ ಡಿಜಿಪಿ ಸೂಚನ ಬೆಂಗಳೂರು: ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟುಮಾಡಿದ ಎಲ್ಲ ಪ್ರಕರಣಗಳಲ್ಲಿ ಯಾವುದೇ ತಾರತಮ್ಯವಿಲ್ಲದೆ ಕಾನೂನನ್ನು ಸಮಾನವಾಗಿ ಅನ್ವಯಿಸಬೇಕು ಹಾಗೂ ದಾಖಲಾಗಿರುವ ಪ್ರಕರಣಗಳಲ್ಲಿ ತ್ವರಿತ ಮತ್ತು ನಿಷ್ಪಕ್ಷಪಾತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಹಿಂದೂ ರಾಷ್ಟ್ರ ಸಮನ್ವಯ ಸಮಿತಿ ವತಿಯಿಂದ ಕರ್ನಾಟಕ ರಾಜ್ಯ ಪೊಲೀಸ್ ಮಹಾನಿರ್ದೇಶಕರು ಹಾಗೂ ಮಹಾನಿರೀಕ್ಷಕರಿಗೆ (DGP & IGP) ಮಾನ್ಯ ಸಲೀಂ ಅವರಿಗೆ ಮನವಿ ಸಲ್ಲಿಸಲಾಯಿತು. ಸಮಿತಿಯ ಮನವಿಯಲ್ಲಿ, ದಿನಾಂಕ 09-06-2026ರಂದು ದಾವಣಗೆರೆ ಜಿಲ್ಲೆಯ ಹರಿಹರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರೊ. ಕೆ. ಎಸ್. ಭಗವಾನ್ ಅವರು ಭಗವಾನ್ ಶ್ರೀರಾಮ ಹಾಗೂ ಹಿಂದೂ ಧರ್ಮದ ಆರಾಧ್ಯ ದೇವತೆಗಳ ಕುರಿತು ನೀಡಿರುವ ಹೇಳಿಕೆಗಳಿಂದ ಕೋಟ್ಯಂತರ ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟಾಗಿದೆ ಎಂದು ಉಲ್ಲೇಖಿಸಲಾಗಿದೆ. ಈ ಸಂಬಂಧ ರಾಜ್ಯದ ವಿವಿಧ ಭಾಗಗಳಲ್ಲಿ ಪ್ರತಿಭಟನೆಗಳು ನಡೆದಿದ್ದು,…
ಪುತ್ತೂರಿನ ವಿದ್ಯುತ್ ಸಮಸ್ಯೆ; ಮೆಸ್ಕಾಂ ಅಧಿಕಾರಿಗಳ ಭೇಟಿ ಮಾಡಿ, ಅಧಿಕಾರಿಗಳ ನಿರ್ಲಕ್ಷ್ಯದ ವಿರುದ್ಧ ಪ್ರತಿಭಟನೆ ಎಚ್ಚರಿಕೆ ನೀಡಿದ ಪುತ್ತಿಲ ಪರಿವಾರ
ಪುತ್ತೂರು ನಗರ ಹಾಗೂ ಗ್ರಾಮಾಂತರ ಭಾಗದಲ್ಲಿ ಕಳೆದ ಕೆಲದಿನಗಳಿಂದ ವಿದ್ಯುತ್ ಸರಿಯಾಗಿ ಪೂರೈಕೆ ಆಗದೆ ಜನ ಸಾಮಾನ್ಯರು ಪರದಾಟ ನಡೆಸುತ್ತಿದ್ದಾರೆ. ಈ ಹಿನ್ನಲೆಯಲ್ಲಿ ಇಂದು ಪುತ್ತಿಲ ಪರಿವಾರ ಸೇವಾ ಟ್ರಸ್ಟ್ ನೇತೃತ್ವದಲ್ಲಿ ಅರುಣ್ ಕುಮಾರ್ ಪುತ್ತಿಲರು ಮೆಸ್ಕಾಂ ಇಲಾಖೆಯ ಶಾಖಾಧಿಕಾರಿ ಓ&ಎಮ್1 ಹಾಗೂ ಮಾನ್ಯ ಕಾರ್ಯನಿರ್ವಾಹಕ ಇಂಜಿನಿಯರ್ನ ಭೇಟಿ ಮಾಡಿ, ಸಮಸ್ಯೆಗಳ ಕುರಿತು ಚರ್ಚಿಸಿ, ಮನವಿ ಪತ್ರ ನೀಡಿದರು. ಕಳೆದೆರಡು ದಿನಗಳಲ್ಲಿ ಕೆಲವು ಕಡೆಗಳಲ್ಲಿ ಲೋ-ವೋಲ್ವೇಜ್ ಸಮಸ್ಯೆ ಹಾಗೂ ಕೆಲವು ಕಡೆಗಳಲ್ಲಿ ಸರಿಯಾಗಿ ವಿದ್ಯುತ್ ಸಂಪರ್ಕವಿಲ್ಲದೆ ಜನ ಸಾಮಾನ್ಯರು, ವಿದ್ಯಾರ್ಥಿಗಳು ಸಂಕಷ್ಟ ಎದುರಿಸುವ ಪರಿಸ್ಥಿತಿ ಎದುರಾಗಿದೆ. ಕುಡಿಯುವ ನೀರಿಗೂ ಇದರಿಂದ ಸಮಸ್ಯೆಯಾಗುತ್ತಿದ್ದು, ಜನ ಸಾಮಾನ್ಯರ ದಿನನಿತ್ಯದ ಬದುಕಿಗೆ ತೊಂದರೆಯಾಗುತ್ತಿದೆ. ಅಲ್ಲದೇ ಮೆಸ್ಕಾಂ ಸಹಾಯವಾಣಿ ಸಂಖ್ಯೆಗೆ ಕರೆ ಮಾಡಿದರೆ ಸರಿಯಾದ ಪ್ರತಿಕ್ರಿಯೆ ಕೂಡ ಇಲಾಖೆಯ ಕಡೆಯಿಂದ ಬರುತ್ತಿಲ್ಲ ಎಂಬ ಸಾರ್ವಜನಿಕರ ದೂರುಗಳು ವ್ಯಾಪಕವಾಗಿದೆ. ಆದಷ್ಟು ಬೇಗ ಮೆಸ್ಕಾಂ ಅಧಿಕಾರಿಗಳು ಎಚ್ಚೆತ್ತುಕೊಂಡು ಈ ಸಮಸ್ಯೆಯನ್ನು ಪರಿಹರಿಸಬೇಕು. ಮುಂದಿನ ದಿನಗಳಲ್ಲಿ ಮಳೆಯ ಪ್ರಮಾಣ ಇನ್ನಷ್ಟು ಜಾಸ್ತಿ…
ಪುತ್ತಿಲ ಪರಿವಾರ ಸೇವಾ ಟ್ರಸ್ಟ್ (ರಿ.) ಪುತ್ತೂರು ಹಾಗೂ ವರಮಹಾಲಕ್ಷ್ಮೀ ಪೂಜಾ ಸಮಿತಿ, ಪುತ್ತೂರು ಇವರ ವತಿಯಿಂದ ನಡೆಯಲಿರುವ ಮೂರನೇ ವರ್ಷದ ವರಮಹಾಲಕ್ಷ್ಮಿ ಪೂಜೆ ಮತ್ತು ಧಾರ್ಮಿಕ ಕಾರ್ಯಕ್ರಮದ ಆಮಂತ್ರಣ ಪತ್ರ ಬಿಡುಗಡೆ ಕಾರ್ಯಕ್ರಮವು ಮುಕ್ರಂಪಾಡಿಯ ಸುಭದ್ರಾ ಕಲಾ ಮಂದಿರದಲ್ಲಿ ನೆರವೇರಿತು ಪ್ರತಿ ವರ್ಷದಂತೆ ಈ ವರ್ಷವೂ ಪುತ್ತಿಲ ಪರಿವಾರದಿಂದ ಹಿಂದೂ ಸಮಾಜದ ಏಕತೆ ಹಾಗೂ ಮಾತೆಯರ ಒಗ್ಗೂಡುವಿಕೆಯನ್ನು ಉದ್ದೇಶಿಸಿ ವರಮಹಾಲಕ್ಷ್ಮಿ ಪೂಜೆಯನ್ನು ಆಯೋಜಿಸಲಾಗುತ್ತಿದೆ. ಧಾರ್ಮಿಕ ಕಾರ್ಯಕ್ರಮದ ಮೂಲಕ ಹಿಂದೂ ಸಮಾಜದ ಕೇಂದ್ರಬಿಂದುವಾಗಿರುವ ಮಾತೆಯರು ಮತ್ತು ಸಹೋದರಿಯರನ್ನು ಸಂಘಟನಾತ್ಮಕವಾಗಿ ಬಲಿಷ್ಠಗೊಳಿಸುವುದು ಈ ಕಾರ್ಯಕ್ರಮದ ಪ್ರಮುಖ ಉದ್ದೇಶವಾಗಿದೆ. ಈ ಸಂದರ್ಭದಲ್ಲಿ ಮಾತನಾಡಿದ ಪುತ್ತಿಲ ಪರಿವಾರ ಸೇವಾ ಟ್ರಸ್ಟ್ನ ಸಂಚಾಲಕರಾದ ಶ್ರೀ ಅರುಣ್ ಕುಮಾರ್ ಪುತ್ತಿಲ ಅವರು, “ಪ್ರಥಮ ವರ್ಷದ ಪೂಜೆಯಲ್ಲಿ ಸುಮಾರು 2,512 ಸೇವೆಗಳು ನಡೆದಿದ್ದವು. ದ್ವಿತೀಯ ವರ್ಷದಲ್ಲಿ ಅದು ಸುಮಾರು 5,471ಕ್ಕೆ ಏರಿಕೆಯಾಯಿತು. ಈ ಬಾರಿ ಮೂರನೇ ವರ್ಷದ ಪೂಜೆಯಲ್ಲಿ 10,000ಕ್ಕೂ ಅಧಿಕ ಸೇವೆಗಳನ್ನು ಭಕ್ತಾದಿಗಳು ನೀಡುವರೆಂಬ ವಿಶ್ವಾಸ…
ನಾನು ಗೃಹಸಚಿವನಾಗಿ ಇರುವವರೆಗೂ ರಾಜ್ಯದಲ್ಲಿ ಆರ್ಎಸ್ಎಸ್ (RSS) ಪಥಸಂಚಲನಕ್ಕೆ ಅನುಮತಿ ಕಡ್ಡಾಯ ಎಂದು ಪ್ರಿಯಾಂಕ್ ಖರ್ಗೆ (Priyank Kharge) ಹೇಳಿದ್ದಾರೆ. ಆರ್ಎಸ್ಎಸ್ನವರು ಪಥಸಂಚಲನಕ್ಕೆ (Route March) ಅನುಮತಿ ತೆಗೆದುಕೊಳ್ಳಬೇಕು. ಜಸ್ಟ್ ಈಗ ಮೋಹನ್ ಭಾಗವತ್ ಅವರಿಗೆ ಪತ್ರ ಬರೆದಿದ್ದೇನೆ. 100 ವರ್ಷದ ಸಂಘಟನೆ ಕಾಗದಗಳು ಎಲ್ಲೋ ಇರಬಹುದು. ಹುಡುಕುತ್ತಿದ್ದಾರೆ ಹುಡುಕಿಕೊಂಡು ಬರಲಿ. ಇಷ್ಟು ಕೇಳಿದ್ದಕ್ಕೆ ನನ್ನ ವೈಯಕ್ತಿಕ ಮಾಹಿತಿ ಕೆದಕುತ್ತಿದ್ದಾರೆ. ಇದಕ್ಕೆಲ್ಲ ನಾನು ಹೆದರುವ ವ್ಯಕ್ತಿಯಲ್ಲ ಎಂದು ಕಲಬುರಗಿಯಲ್ಲಿ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ. ಆರ್ಎಸ್ಎಸ್ನವರು ಧ್ವಜದ ಹೆಸರಿನಲ್ಲಿ ದೇಣಿಗೆ ತೆಗೆದುಕೊಳ್ತಾರೆ. ದೇಣಿಗೆ ಪಡೆದುಕೊಳ್ಳೋಕೆ ಇವರ ಗುರು ಯಾರು?ಹಾಗಿದ್ರೆ ಇವರಗೆ ಲೆಕ್ಕ ಕೇಳಬಾರದಾ? ಎಂದು ಗೃಹ ಸಚಿವರು ಪ್ರಶ್ನಿಸಿದ್ದಾರೆ. ನಾಳೆ ನೀವೂ ಒಂದು ಧ್ವಜದ ಮೇಲೆ ಸಂಘಟನೆ ಮಾಡಿ, ಚಂದಾ ಕಲೆಕ್ಟ್ ಮಾಡಿ. ಅವಾಗ ಐಟಿ,ಇಡಿಯವರು ಸುಮ್ನೆ ಕೂರುತ್ತಾರಾ? ಎಲ್ಲರೂ ಹೀಗೇ ಮಾಡಲಿ ಅವಾಗ ನೋಡೋಣ ಎಂದವರು ಕಿಡಿ ಕಾರಿದ್ದಾರೆ.
ಬಂಟ್ವಾಳ: ಇಲ್ಲಿನ ಮಂಚಿ ಸಮೀಪದ ಮೋಂತಿಮಾರು ಪಡ್ಡು ಬಸ್ ನಿಲ್ದಾಣದಲ್ಲಿ ಕಾಲೇಜಿಗೆ ತೆರಳಲು ಬಸ್ಗಾಗಿ ಕಾಯುತ್ತಿದ್ದ ವಿದ್ಯಾರ್ಥಿನಿಗೆ ಚೂರಿಯಿಂದ ಹಲ್ಲೆ(Stabbed) ನಡೆಸಿ ಕೊಲೆಗೆ ಯತ್ನಿಸಿದ ಘಟನೆ ಸೋಮವಾರ (ಜು.06) ಬೆಳಗ್ಗೆ ಸಂಭವಿಸಿದೆ. ಸ್ಥಳೀಯ ನಿವಾಸಿ ಜವ್ವಾರ್ ಎಂಬಾತ ಹಲ್ಲೆಗೆ ಯತ್ನಿಸಿದ ಬಗ್ಗೆ ಆರೋಪ ಕೇಳಿಬಂದಿದೆ. ಆತ ಬಸ್ ನಿಲ್ದಾಣದ ಸಮೀಪ ದಿನಸಿ ಅಂಗಡಿ ನಡೆಸುತ್ತಿದ್ದಾನೆ ಎನ್ನಲಾಗಿದೆ. ವಿದ್ಯಾರ್ಥಿನಿ ಬಸ್ಗಾಗಿ ಕಾಯುತ್ತಿದ್ದ ವೇಳೆ ಆರೋಪಿ ಚೂರಿಯಿಂದ ಹಲ್ಲೆ ನಡೆಸಿದ್ದಾನೆ. ಗಾಯಗೊಂಡ ವಿದ್ಯಾರ್ಥಿನಿಯನ್ನು ಕೂಡಲೇ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯ ಸಿಬ್ಬಂದಿಗಳು ಘಟನಾ ಸ್ಥಳಕ್ಕೆ ಭೇಟಿ ನೀಡಿ ಮಹಜರು ನಡೆಸಿದ್ದಾರೆ. ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸ್ ಇಲಾಖೆಯಿಂದ ಹೆಚ್ಚಿನ ಮಾಹಿತಿ ಬರಬೇಕಾಗಿದೆ.
ನಾಡಹಬ್ಬ ಮೈಸೂರು ದಸರಾ (Mysuru Dasara) ಮಹೋತ್ಸವ ಧಾರ್ಮಿಕ ಆಚರಣೆಯ ಹಿನ್ನೆಲೆ ಹೊಂದಿದ್ದು, ಅದರಲ್ಲಿ ಕಂಬಳ (Kambala) ಕ್ರೀಡೆ ಸೇರಿಸುವುದು ಸರಿಯಲ್ಲ’ ಎಂದು ಮೈಸೂರು ರಾಜವಂಶಸ್ಥರೂ ಆದ ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಹೇಳಿದ್ದಾರೆ. ಕರಾವಳಿಯ ಜಾನಪದ ಕ್ರೀಡೆಯನ್ನು ದಸರಾದಲ್ಲಿ ಆಯೋಜಿಸುವುದು ಇದರ ಮೂಲ ಆಶಯಕ್ಕೆ ಧಕ್ಕೆ ತರಬಹುದು ಮತ್ತು ಸಾಂಸ್ಕೃತಿಕ ಗೊಂದಲಕ್ಕೆ ಕಾರಣವಾಗಬಹುದು ಎಂದು ಸಂಸದರು ಅಭಿಪ್ರಾಯಪಟ್ಟಿದ್ದಾರೆ. ಕಂಬಳವು ಕರಾವಳಿ ಕರ್ನಾಟಕದ ಮಣ್ಣಿನ ಆಚರಣೆಯಾಗಿದ್ದು, ಅದನ್ನು ಸ್ಥಳೀಯ ಭೌಗೋಳಿಕ ಮತ್ತು ಸಾಂಸ್ಕೃತಿಕ ಗಡಿಯಿಂದ ಬೇರ್ಪಡಿಸಿ ವಾಣಿಜ್ಯೀಕರಣ ಮಾಡುವುದು ಸೂಕ್ತವಲ್ಲ ಎಂದು ಯದುವೀರ್ ತಿಳಿಸಿದ್ದಾರೆ ಮಳೆಯಿಲ್ಲದೇ ಜನ ಸಂಕಷ್ಟದಲ್ಲಿದ್ದಾರೆ. ಹೀಗಿರುವಾಗ, ಕೋಟ್ಯಂತರ ರೂಪಾಯಿ ಖರ್ಚು ಮಾಡುವ ಅಗತ್ಯವಿಲ್ಲ. ಹೊಸ ಆಕರ್ಷಣೆಗಳನ್ನು ಸೇರಿಸುವ ಬದಲು, ಸರ್ಕಾರ ಮತ್ತು ದಸರಾ ಉನ್ನತ ಸಮಿತಿಯು ದಸರಾ ಹಬ್ಬದ ಮೂಲ ಅಸ್ಮಿತೆಯನ್ನು ಬಲಪಡಿಸುವುದು ಹಾಗೂ ಮೂಲಸೌಕರ್ಯ ಕೊರತೆಗಳಂತಹ ಆಂತರಿಕ ಸಮಸ್ಯೆಗಳನ್ನು ಬಗೆಹರಿಸುವುದಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಅವರು ಆಗ್ರಹಿಸಿದ್ದಾರೆ. ಒಟ್ಟಿನಲ್ಲಿ ಮೈಸೂರು ದಸರಾ ಮಹೋತ್ಸವದ…
