Author: admin
ಉಪ್ಪಿನಂಗಡಿ: ಕಳೆದ 4 ದಿನಗಳಿಂದ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ನೇತ್ರಾವತಿ, ಕುಮಾರಧಾರಾ ನದಿಗಳೆರಡೂ ತುಂಬಿ ಹರಿಯಲಾರಂಭಿಸಿವೆ ನಿನ್ನೆ ರಾತ್ರಿ ಏರಿಕೆ ಕಂಡಿದ್ದ ನದಿ ನೀರು ಇಂದು ಬೆಳಗ್ಗೆ ಇಳಿಮುಖದತ್ತ ಸಾಗಿತ್ತು. ಇದೀಗ ಉಭಯ ನದಿಗಳು ಇಂದು ಮತ್ತೆ ಉಕ್ಕಿ ಹರಿಯುತ್ತಿದ್ದು ಭಕ್ತಾದಿಗಳು ಸಂಗಮದ ನಿರೀಕ್ಷೆಯಲ್ಲಿದ್ದಾರೆ. ಇಲ್ಲಿನ ಶ್ರೀ ಸಹಸ್ರಲಿಂಗೇಶ್ವರ – ಮಹಾಕಾಳಿ ಸ್ನಾನಘಟ್ಟದ ಬಳಿ ನೇತ್ರಾವತಿ ನದಿಗಿಳಿಯುವ 38 ಮೆಟ್ಟಿಲುಗಳಲ್ಲಿ ಇದೀಗ 36 ಮೆಟ್ಟಿಲುಗಳು ಸಂಪೂರ್ಣವಾಗಿ ಮುಳುಗಡೆಗೊಂಡಿದೆ. ಹೊಸ್ಮಠದ ನೂತನ ಸೇತುವೆ ದೃಶ್ಯ ಸಂಗಮದ ಇತಿಹಾಸ ಪ್ರಸಿದ್ಧ ಕ್ಷೇತ್ರ ಉಬಾರ್ ದಾಖಲೆಯ ಪ್ರಕಾರ 1974 ರಂದು ಉಪ್ಪಿನಂಗಡಿಯಲ್ಲಿ ಅತಿ ದೊಡ್ಡ ನೆರೆ ಬಂದು ಸಂಗಮವಾಗಿತ್ತು. ಬಳಿಕ 1997, 2008 ಹಾಗೂ 2009 ಹಾಗೂ 2013ರಲ್ಲಿ ಸಂಗಮವಾಗಿತ್ತು. ಆ ಬಳಿಕ ಸಂಗಮವಾಗಿದ್ದು, 2018 ರಲ್ಲಿ ಆ ಬಾರಿ ಆಗಸ್ಟ್ 14 ಮತ್ತು 16 ರಂದು ಎರಡು ಬಾರಿ ಸಂಗಮವಾಗಿತ್ತು. ಲಭ್ಯ ಇತಿಹಾಸದ ಪ್ರಕಾರ ವರ್ಷದಲ್ಲಿ ಎರಡು ಬಾರಿ ಸಂಗಮವಾಗಿದ್ದು, ಇದೇ ಮೊದಲಾಗಿತ್ತು. ಬಳಿಕ…
ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನದ ಜಾಗದಲ್ಲಿ ಸಾರ್ವಜನಿಕ ರಸ್ತೆ ನಿರ್ಮಾಣ ಹಾಗೂ ಸಂಚಾರ ವ್ಯವಸ್ಥೆಗೆ ಸಂಬಂಧಿಸಿದಂತೆ ಸ್ಥಳೀಯವಾಗಿ ವಿವಾದಗಳು ಹಾಗೂ ಭಕ್ತರ ಆಕ್ರೋಶಗಳು ವ್ಯಕ್ತವಾಗಿವೆ. ದೇವಳದ ಜಾಗದಲ್ಲಿ ರಸ್ತೆ ನಿರ್ಮಾಣಕ್ಕೆ ಸಂಬಂಧಿಸಿದಂತೆ ಭಕ್ತರು ಶಾಸಕರ ಹಾಗೂ ದೇವಸ್ಥಾನ ವ್ಯವಸ್ಥಾಪನಾ ಸಮಿತಿಯ ತೀರ್ಮಾನಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಈ ನಿಟ್ಟಿನಲ್ಲಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಸಂರಕ್ಷಣಾ ಸಮಿತಿ ವತಿಯಿಂದ ಭಕ್ತರ ಸಭೆಯನ್ನು ಶ್ರೀ ಮಹಾಲಿಂಗೇಶ್ವರ ಸಭಾಗೃಹದಲ್ಲಿ ನಾಳೆ (ಅಗಸ್ಟ್ 3, 2026) ಆಯೋಜಿಸಲಾಗಿದೆ. ದೇವಾಲಯದ ಪವಿತ್ರತೆಯ ಸಂರಕ್ಷಣೆ ಹಾಗೂ ದೇವಾಲಯದ ಜಾಗ ಉಳಿವಿಗಾಗಿ ಪ್ರಸ್ತಾವಿತ ಯೋಜನೆಗೆ ಸಮಿತಿ ವಿರೋಧ ವ್ಯಕ್ತಪಡಿಸಿದ್ದು, ಭಕ್ತರ ಅಭಿಪ್ರಾಯದ ಮೇರೆಗೆ, ದೇವರ ಒಪ್ಪಿಗೆ ಮೇರೆಗೆ ರಸ್ತೆ ನಿರ್ಮಾಣ ಮಾಡಬೇಕು ಎಂದು ಸಮಿತಿ ತಿಳಿಸಿದೆ. ಸಾರ್ವಜನಿಕ ರಸ್ತೆಗಾಗಿ ದೇವಸ್ಥಾನದ ಬೆಲೆ ಬಾಳುವ ಮೂರು ಎಕರೆ ಜಾಗ ಬಳಸುತ್ತಿರುವ ಕುರಿತು ಭಕ್ತಾದಿಗಳು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದು ಇಂದಿನ ಮಾರುಕಟ್ಟೆಯಲ್ಲಿ ಇದರ ಮೌಲ್ಯ ಮೂವತ್ತು ಕೋಟಿಗೂ ಅಧಿಕವಾಗಿದೆ ಎನ್ನಲಾಗಿದೆ. ದೇವಸ್ಥಾನದ ಪಕ್ಕದಲ್ಲಿ ಸಾರ್ವಜನಿಕ ರಸ್ತೆ…
ಪುತ್ತೂರು, ಆ.1: ಪುತ್ತೂರು-ಉಪ್ಪಿನಂಗಡಿ ರಸ್ತೆಯ 34ನೇ ನೆಕ್ಕಿಲಾಡಿ, ವನಸುಮ ನರ್ಸರಿ ಸಮೀಪ ನಿರ್ಮಾಣವಾಗಿರುವ ದೊಡ್ಡ ಹಾಗೂ ಅಪಾಯಕಾರಿ ಹೊಂಡಗಳನ್ನು ಕೂಡಲೇ ಮುಚ್ಚುವಂತೆ ಹಾಗೂ ಪುತ್ತೂರು-ಸುಬ್ರಹ್ಮಣ್ಯ ರಸ್ತೆಯ ಬೆದ್ರಾಳ ಭಾಗದಲ್ಲಿ ಅವೈಜ್ಞಾನಿಕ ಕಾಮಗಾರಿಯಿಂದ ಉಂಟಾಗಿರುವ ರಸ್ತೆ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸುವಂತೆ ಲೋಕೋಪಯೋಗಿ ಇಲಾಖೆಗೆ ಪುತ್ತಿಲ ಪರಿವಾರ ಸಂಘಟನೆ ಆಗ್ರಹಿಸಿದೆ. ಪುತ್ತೂರು–ಉಪ್ಪಿನಂಗಡಿ ರಸ್ತೆಯ 34ನೇ ನೆಕ್ಕಿಲಾಡಿ, ವನಸುಮ ನರ್ಸರಿ ಬಳಿ ದೊಡ್ಡದಾದ ಹಾಗೂ ಅಪಾಯಕಾರಿ ಹೊಂಡಗಳು ನಿರ್ಮಾಣವಾಗಿದೆ ಹಾಗೂ ಪುತ್ತೂರು–ಸುಬ್ರಹ್ಮಣ್ಯ ರಸ್ತೆಯ ಬೆದ್ರಾಳ ರಸ್ತೆಯಲ್ಲಿ ಅವೈಜ್ಞಾನಿಕ ಕಾಮಗಾರಿಯಿಂದಾಗಿ ವರ್ಷದಲ್ಲಿ 3 ಬಾರಿ ಇಂಟರ್ಲಾಕ್ ದುರಸ್ತಿ ಕೆಲಸ ನಡೆದು ಇದೀಗ 15 ದಿನಗಳಿಂದ ಬ್ಯಾರಿಕೇಡ್ ತೆರವುಗೊಳಿಸದೆ ಸಂಚಾರಕ್ಕೆ ತೊಂದರೆಯಾಗುತ್ತಿದೆ .ಕೂಡಲೇ ಬ್ಯಾರಿಕೇಡ್ ತೆರವುಗೊಳಿಸಬೇಕು ಹಾಗೂ ಮಳೆಗಾಲ ನಿಂತ ಕೂಡಲೇ ಇಂಟರ್ಲಾಕ್ ತೆರವುಗೊಳಿಸಿ ಶಾಶ್ವತ(ಕಾಂಕ್ರೀಟ್ / ಡಾಂಬರು)ರಸ್ತೆ ಮಾಡುವಂತೆ ಸಂಘಟನೆ ಮನವಿ ಸಲ್ಲಿಸಿದೆ ಬೆದ್ರಾಳದಿಂದ-ಸರ್ವೆಯ ವರೆಗೆ ರಸ್ತೆಯಲ್ಲಿ ಬಿದ್ದಿರುವ ಅಪಾಯಕಾರಿ ಹೊಂಡಗಳನ್ನು ಕೂಡಲೇ ಮುಚ್ಚುವಂತೆ ಹಾಗೂ ಮೋರಿಯಲ್ಲಿ ಹರಿಯುವ ನೀರು ನೇರವಾಗಿ ರಸ್ತೆಗೆ ಬರುವ ಕಾರಣ…
ಕುನಾಲ್ ಕಾಮ್ರಾ ಕಾಮಿಡಿ ಶೋ ರದ್ದುಪಡಿಸುವಂತೆ ಆಗ್ರಹಿಸಿ ವೈಟ್‌ಫೀಲ್ಡ್ ಪೊಲೀಸ್ ಠಾಣೆಗೆ ಹಿಂದೂ ರಾಷ್ಟ್ರ ಸಮನ್ವಯ ಸಮಿತಿಯಿಂದ ಮನವಿ
ಬೆಂಗಳೂರು: ದಿನಾಂಕ 03-08-2026 ರಂದು ಬೆಂಗಳೂರಿನ ವೈಟ್‌ಫೀಲ್ಡ್‌ನ URU Whitefield, ಪಟ್ಟಂದೂರು ಅಗ್ರಹಾರದಲ್ಲಿ ಆಯೋಜಿಸಲಾಗಿರುವ ಹಾಸ್ಯ ಕಲಾವಿದ ಕುನಾಲ್ ಕಾಮ್ರಾ ಅವರ ಕಾರ್ಯಕ್ರಮವನ್ನು ಕಾನೂನು ಮತ್ತು ಸುವ್ಯವಸ್ಥೆ, ಸಾರ್ವಜನಿಕ ಶಾಂತಿ ಹಾಗೂ ಧಾರ್ಮಿಕ ಸಾಮರಸ್ಯದ ಹಿತದೃಷ್ಟಿಯಿಂದ ರದ್ದುಗೊಳಿಸುವಂತೆ ಆಗ್ರಹಿಸಿ ಹಿಂದೂ ರಾಷ್ಟ್ರ ಸಮನ್ವಯ ಸಮಿತಿ, ಬೆಂಗಳೂರು ವತಿಯಿಂದ ವೈಟ್‌ಫೀಲ್ಡ್ ಪೊಲೀಸ್ ಠಾಣೆಗೆ ಮನವಿ ಸಲ್ಲಿಸಲಾಯಿತು. ಮನವಿಯನ್ನು ಸಮಸ್ತ ಹಿಂದೂ ಸಂಘಟನೆಗಳ ಪರವಾಗಿ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಹಿಂದೂ ಜನಜಾಗೃತಿ ಸಮಿತಿಯ ಕರ್ನಾಟಕ ರಾಜ್ಯ ವಕ್ತಾರ ಶ್ರೀ ಮೋಹನ ಗೌಡ, ಶ್ರೀರಾಮ ಸೇನೆಯ ಶ್ರೀ ಸುಂದರೇಶ್ ನರ್ಗಲ್, ಶ್ರೀ ಸುಬ್ರಹ್ಮಣ್ಯ, ಶ್ರೀ ನಾರಾಯಣ ಗೌಡ, ಶ್ರೀ ಭರತ್ ಕುಮಾರ್ ಸೇರಿದಂತೆ ವಿವಿಧ ಹಿಂದೂ ಸಂಘಟನೆಗಳ ಪ್ರಮುಖರು ಉಪಸ್ಥಿತರಿದ್ದರು. ಮನವಿಯಲ್ಲಿ, ಸಾರ್ವಜನಿಕವಾಗಿ ಲಭ್ಯವಿರುವ ಮಾಹಿತಿಯ ಪ್ರಕಾರ ಕುನಾಲ್ ಕಾಮ್ರಾ ಅವರ ಕೆಲವು ಕಾಮಿಡಿ ಕಾರ್ಯಕ್ರಮಗಳು ಹಾಗೂ ಸಾಮಾಜಿಕ ಮಾಧ್ಯಮದಲ್ಲಿನ ಕೆಲವು ಹೇಳಿಕೆಗಳು ಈ ಹಿಂದೆ ದೇಶದ ವಿವಿಧ ಭಾಗಗಳಲ್ಲಿ ವಿವಾದಗಳಿಗೆ ಕಾರಣವಾಗಿವೆ ಎಂದು ಉಲ್ಲೇಖಿಸಲಾಗಿದೆ.…
ಪುತ್ತಿಲ ಫಾಲೋಅಪ್; ಪುತ್ತೂರು ನಗರದಲ್ಲಿ ಕುಡಿಯುವ ನೀರಿನ ಸಮಸ್ಯೆ ಹಾಗೂ ಅಸಮರ್ಪಕ ಬೀದಿ ದೀಪದ ನಿರ್ವಹಣೆ ಸಮಸ್ಯೆ ಕುರಿತು ಧ್ವನಿ
ಪುತ್ತೂರು ನಗರ ವ್ಯಾಪ್ತಿಯಲ್ಲಿ ಸಮರ್ಪಕವಾಗಿ ಕುಡಿಯುವ ನೀರು ಸರಬರಾಜು ಆಗದೆ ಸಾರ್ವಜನಿಕರು ಎದುರಿಸುತ್ತಿರುವ ಸಮಸ್ಯೆಗಳ ಕುರಿತು ಹಾಗೂ ನಗರ ಭಾಗದಲ್ಲಿ ದಾರಿದೀಪಗಳು ಸಮರ್ಪಕ ನಿರ್ವಹಣೆಯಲ್ಲಿ ಇಲ್ಲದ ಬಗ್ಗೆ ಸಾರ್ವಜನಿಕರಿಂದ ದೂರುಗಳು ಬಂದ ಹಿನ್ನೆಲೆಯಲ್ಲಿ, ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಚರ್ಚಿಸಿ ಸಮಸ್ಯೆಯನ್ನು ಶೀಘ್ರವಾಗಿ ಪರಿಹರಿಸುವಂತೆ ಸೂಚಿಸಲಾಯಿತು. ಈ ಕುರಿತು ಪುತ್ತೂರು ನಗರಸಭೆಯ ಪೌರಾಯುಕ್ತರಾದ ಶ್ರೀಮತಿ ವಿದ್ಯಾ ಕಾಳೆ, ಜಲಸಿರಿ ಯೋಜನೆಯ ಎ.ಡಬ್ಲ್ಯೂ. ಮಹಾಂತೇಶ್, ಕುಡಿಯುವ ನೀರಿನ ಮೇಲ್ವಿಚಾರಕರಾದ ವಸಂತ ನಾಯ್ಕ್ ಹಾಗೂ ಸಂಬಂಧಪಟ್ಟ ಇಂಜಿನಿಯರ್‌ಗಳೊಂದಿಗೆ ಚರ್ಚಿಸಿ, ನಗರದಲ್ಲಿ ಕುಡಿಯುವ ನೀರಿನ ಸರಬರಾಜಿನಲ್ಲಿ ಉಂಟಾಗಿರುವ ಸಮಸ್ಯೆಗಳನ್ನು ಹಾಗೂ ಬೀದಿದೀಪಗಳ ಸಮಸ್ಯೆಗಳನ್ನು ಕೂಡಲೇ ಪರಿಶೀಲಿಸಿ, ಸಾರ್ವಜನಿಕರಿಗೆ ಯಾವುದೇ ತೊಂದರೆಯಾಗದಂತೆ ತುರ್ತಾಗಿ ಸೂಕ್ತ ಕ್ರಮ ಕೈಗೊಂಡು ಸಮಸ್ಯೆಯನ್ನು ಶೀಘ್ರ ಪರಿಹರಿಸುವಂತೆ ಸೂಚಿಸಲಾಯಿತು. ನಗರದ ಸಾರ್ವಜನಿಕರಿಗೆ ಸಮರ್ಪಕ ಹಾಗೂ ನಿರಂತರ ಕುಡಿಯುವ ನೀರು ದೊರೆಯುವಂತೆ ಸಂಬಂಧಪಟ್ಟ ಅಧಿಕಾರಿಗಳು ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು. ಸಾರ್ವಜನಿಕರಿಂದ ಬರುವ ಕುಡಿಯುವ ನೀರಿನ ಸಮಸ್ಯೆಗಳ ದೂರುಗಳಿಗೆ ತ್ವರಿತವಾಗಿ ಸ್ಪಂದಿಸಿ ಪರಿಹಾರ ಒದಗಿಸುವಂತೆ ಮನವಿ ಮಾಡಲಾಗಿದೆ. ಈ…
ಉಚಿತ ವೈ-ಫೈ (Free Wi-Fi) ಎಂದರೆ ನಮಗೆಲ್ಲರಿಗೂ ಅಚ್ಚುಮೆಚ್ಚು. ಕೆಫೆಗಳು, ವಿಮಾನ ನಿಲ್ದಾಣಗಳು, ಅಥವಾ ರೈಲು ನಿಲ್ದಾಣಗಳಲ್ಲಿ ಸಿಗುವ ಈ ಸೌಲಭ್ಯ ನಿಜಕ್ಕೂ ಆಕರ್ಷಕ. ಆದರೆ, ಈ ಉಚಿತ ಸೇವೆಯ ಹಿಂದೆ ನಿಮ್ಮ ಡೇಟಾವನ್ನು ಕದಿಯಲು ಹ್ಯಾಕರ್‌ಗಳು ಕಾಯುತ್ತಿರಬಹುದು ಎಂಬುದು ನಿಮಗೆ ಗೊತ್ತೇ? 🕵️♂️💻 ರಮೇಶನ ಅವಸರದ ನಿರ್ಧಾರ📖 ಒಮ್ಮೆ ನಮ್ಮ ಶಾಲೆಯ ಹಿರಿಯ ಶಿಕ್ಷಕ ರಮೇಶ ಅವರು ರೈಲು ನಿಲ್ದಾಣದಲ್ಲಿ ಕುಳಿತಿದ್ದರು. ಅವರ ಮೊಬೈಲ್ ಡೇಟಾ ಖಾಲಿಯಾಗಿತ್ತು, ಆದರೆ ಅದೇ ಸಮಯಕ್ಕೆ ಮುಖ್ಯವಾದ ಇಮೇಲ್ ಒಂದನ್ನು ಕಳುಹಿಸಬೇಕಿತ್ತು. ಅಲ್ಲಿ ಉಚಿತವಾಗಿ ಸಿಗುತ್ತಿದ್ದ “Free Railway Wi-Fi” ಅನ್ನು ನೋಡಿದ ಅವರು, ತಕ್ಷಣವೇ ಅದಕ್ಕೆ ಕನೆಕ್ಟ್ ಆದರು. 🚄📲 ಅವಸರದಲ್ಲಿ, ಅವರು ತಮ್ಮ ಬ್ಯಾಂಕ್ ಖಾತೆಗೆ ಲಾಗ್-ಇನ್ ಮಾಡಿ ಬಾಕಿ ಇರುವ ಹಣದ ವಹಿವಾಟನ್ನು ಪೂರ್ಣಗೊಳಿಸಿದರು. ಆಶ್ಚರ್ಯವೆಂದರೆ, ಅವರು ರೈಲಿನಿಂದ ಇಳಿಯುವಷ್ಟರಲ್ಲಿ ಅವರ ಖಾತೆಯಲ್ಲಿ ನಡೆದಿದ್ದ ಅಪರಿಚಿತ ಹಣದ ವರ್ಗಾವಣೆಯ ಕುರಿತು ಬ್ಯಾಂಕ್‌ನಿಂದ ಮೆಸೇಜ್ ಬಂತು! 📉😱 ರಮೇಶ ಅವರು ಬಳಸಿದ…
ಪುತ್ತೂರು: ನರಿಮೊಗರು – ಶಾಂತಿಗೋಡು ಮುಖ್ಯ ರಸ್ತೆ ದುರಸ್ತಿಗೆ ಸಂಬಂಧಿಸಿದಂತೆ ಅರುಣ್ ಕುಮಾರ್ ಪುತ್ತಿಲರ ನೇತೃತ್ವದಲ್ಲಿ ಪುತ್ತಿಲ ಪರಿವಾರ ಸೇವಾ ಟ್ರಸ್ಟ್ (ರಿ.) ಕಳೆದ 2 ವಾರದಿಂದ ನಿರಂತರ ಫಾಲೋಅಪ್ ಮಾಡಿದ್ದು, ಬಗ್ಗದ ಆಡಳಿತ ವ್ಯವಸ್ಥೆಯನ್ನು ಬಗ್ಗಿಸುವ ನಿಟ್ಟಿನಲ್ಲಿ ಇಂದು ನರಿಮೊಗರು ಗ್ರಾಮ ಪಂಚಾಯಿತಿ ಕಚೇರಿ ಮುಂಭಾಗ ಅನಿರ್ದಿಷ್ಟಾವಧಿ ಧರಣಿ ಕೈಗೊಳ್ಳಲಾಗಿತ್ತು. ಬಳಿಕದ ಬೆಳವಣಿಗೆಯಲ್ಲಿ ಅಧಿಕಾರಿಗಳು ರಸ್ತೆ ದುರಸ್ತಿಯ ಭರವಸೆ ನೀಡಿದ್ದರು. ಈ ಹೋರಾಟ ಪುತ್ತಿಲರಿಗೆ ರಾಜಕೀಯವಾಗಿ ದೊಡ್ಡ ಮೈಲೇಜ್ ನೀಡಿತ್ತು. ಪುತ್ತಿಲರ ಸರಣಿ ಹೋರಾಟದ ಬೆನ್ನಲ್ಲೇ ಎಚ್ಚೆತ್ತುಕೊಂಡ ಪುತ್ತೂರಿನ ಶಾಸಕರು ಕ್ಷೇತ್ರಾದ್ಯಂತ ಇರುವ ಗುಂಡಿ ಬಿದ್ದಿರುವ ರಸ್ತೆಯ ಮಾಹಿತಿ ಪಡೆದುಕೊಂಡು, ದುರಸ್ತಿ ಕಾಮಗಾರಿ ನಡೆಸಲು ಅಧಿಕಾರಿಗಳಿಗೆ ಸೂಚಿಸಿದ್ದಾರೆ. ತಮ್ಮ ಕ್ಷೇತ್ರದ ಗ್ರಾ.ಪಂ ವ್ಯಾಪ್ತಿಯ ರಸ್ತೆಗಳ ಹೊಂಡ ಮುಚ್ಚುವ ಕಾಮಗಾರಿ ನಡೆಸುವಂತೆ ಪುತ್ತೂರು ಶಾಸಕ ಅಶೋಕ್ ರೈ ಅವರು ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿಗೆ ನಿರ್ದೇಶನ ನೀಡಿದ್ದಾರೆ ಕ್ಷೇತ್ರದ ಹೆಚ್ಚಿನ ರಸ್ತೆಗಳು ಹೊಂಡ ಬಿದ್ದಿದೆ. ಮಳೆ ನೀರು ಸರಿಯಾಗಿ ಹರಿದು ಹೋಗಲು ಚರಂಡಿ…
ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದ ಧಾರ್ಮಿಕ ಹಾಗೂ ಐತಿಹಾಸಿಕ ಕ್ಷೇತ್ರಗಳ ಸಮಗ್ರ ಅಭಿವೃದ್ಧಿಗೆ ಸರ್ಕಾರಕ್ಕೆ ಮನವಿ ಸಲ್ಲಿಸಿದ ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ
ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದ ಧಾರ್ಮಿಕ ಹಾಗೂ ಐತಿಹಾಸಿಕ ಕ್ಷೇತ್ರಗಳ ಸಮಗ್ರ ಅಭಿವೃದ್ಧಿಗೆ ಸರ್ಕಾರಕ್ಕೆ ಮನವಿ ಸಲ್ಲಿಸಿದ ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ಬೆಳ್ತಂಗಡಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ನಾರಾವಿ ಶ್ರೀ ಬ್ರಹ್ಮಬೈದರ್ಕಳ ಗರಡಿ ರೂ. 1 ಕೋಟಿ, ಗರ್ಡಾಡಿ ನಂದಿಬೆಟ್ಟ ಶ್ರೀ ನಂದಿಕೇಶ್ವರ ದೇವಸ್ಥಾನ ರೂ. 1 ಕೋಟಿ, ಮಚ್ಚಿನ ಮಾಣೂರು ಸಹಪರಿವಾರ ಶ್ರೀ ಶಾಸ್ತರ ದೇವಸ್ಥಾನ ರೂ. 50 ಲಕ್ಷ, ಕೊಯ್ಯೂರು ದೆಂತ್ಯಾರು ಶ್ರೀ ಮಹಾವಿಷ್ಣು ಮೂರ್ತಿ ದೇವಸ್ಥಾನ ರೂ. 50 ಲಕ್ಷ ಒಟ್ಟು 3 ಕೋಟಿ ವೆಚ್ಚದಲ್ಲಿ ದೇವಸ್ಥಾನಗಳ ಸಮಗ್ರ ಅಭಿವೃದ್ಧಿಗೆ ರಾಜ್ಯ ಮಾನ್ಯ ಉಪಮುಖ್ಯಮಂತ್ರಿಗಳಾದ ಸನ್ಮಾನ್ಯ ಡಾ. ಜಿ. ಪರಮೇಶ್ವರವರನ್ನು ಜು.30 ರಂದು ಭೇಟಿಯಾಗಿ ಮನವಿ ಸಲ್ಲಿಸಿದರು.
ಪುತ್ತಿಲರ ಅಧಿಕಾರಯುತ ಧ್ವನಿಗೆ ಬಗ್ಗಿದ ಸ್ಥಳೀಯಾಡಳಿತ; ಅರುಣ ಘರ್ಜನೆಯಿಂದ ಶುರುವಾಯಿತೇ ಹೊಸ ರಾಜಕೀಯ ಲೆಕ್ಕಚಾರ?
ಪುತ್ತೂರು: ನರಿಮೊಗರು – ಶಾಂತಿಗೋಡು ಮುಖ್ಯ ರಸ್ತೆ ದುರಸ್ತಿಗೆ ಸಾಲು ಸಾಲು ಮನವಿಗಳನ್ನು ಸಲ್ಲಿಸಿದರೂ ಸ್ಪಂದಿಸದ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ಧೋರಣೆಯನ್ನು ಖಂಡಿಸಿ, ಅರುಣ್ ಕುಮಾರ್ ಪುತ್ತಿಲರ ನೇತೃತ್ವದಲ್ಲಿ ಪುತ್ತಿಲ ಪರಿವಾರ ಸೇವಾ ಟ್ರಸ್ಟ್ (ರಿ.) ವತಿಯಿಂದ ಇಂದು ನರಿಮೊಗರು ಗ್ರಾಮ ಪಂಚಾಯಿತಿ ಕಚೇರಿ ಮುಂಭಾಗ ಆರಂಭಿಸಿದ್ದ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹಕ್ಕೆ ಮೊದಲ ದಿನವೇ ಆಡಳಿತ ಯಂತ್ರ ಶರಣಾಗಿದ್ದು, ರಸ್ತೆ ದುರಸ್ತಿಯ ಭರವಸೆಯನ್ನು ನೀಡಿದ್ದಾರೆ. ಹೋರಾಟದ ಹಾದಿ ಹಿಡಿದ ಪುತ್ತಿಲ ಪರಿವಾರ ರಸ್ತೆ ದುರಸ್ತಿಗೆ ಸಂಬಂಧಿಸಿದಂತೆ ಜುಲೈ 23 ರಂದು ಪುತ್ತಿಲರ ನೇತೃತ್ವದಲ್ಲಿ ಲೋಕೋಪಯೋಗಿ ಇಲಾಖೆಯ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಭೇಟಿ ಮಾಡಿ ರಸ್ತೆ ದುರಸ್ತಿಗೆ ಮನವಿ ಸಲ್ಲಿಸಲಾಗಿತ್ತು. ಆದರೆ ಆಡಳಿತಾತ್ಮಕ ಒತ್ತಡದ ಕಾರಣದಿಂದ ದುರಸ್ತಿಯಿಂದ ಅಧಿಕಾರಿಗಳು ಹಿಂದೆ ಸರಿದಿದ್ದರು. ಬಳಿಕ, ಜುಲೈ 27ರಂದು ಎರಡು ಗಂಟೆಗಳ ಕಾಲ ರಸ್ತೆ ತಡೆ ನಡೆಸಿ ಯೋಗ್ಯ ರಸ್ತೆ ನಿರ್ಮಾಣಕ್ಕೆ ಆಗ್ರಹಿಸಿ ನರಿಮೊಗರು ಪಂಚಾಯತ್‌ಗೆ ಮನವಿ ಸಲ್ಲಿಸಲಾಗಿತ್ತು. ಈ ಸಂದರ್ಭದಲ್ಲೂ ಅಧಿಕಾರಿಗಳು ಸ್ಥಳೀಯ ಜನಪ್ರತಿನಿಧಿಗಳ…
LGBTQ+ ಸಮುದಾಯದ ವ್ಯಕ್ತಿಗಳು ಸಮಾಜದಲ್ಲಿ ಗೌರವ ಮತ್ತು ಸ್ವೀಕಾರಾರ್ಹತೆಗೆ ಅರ್ಹರಾಗಿದ್ದಾರೆ. ಪ್ರತಿಯೊಬ್ಬ ವ್ಯಕ್ತಿಗೂ ತಮ್ಮದೇ ಆದ ಖಾಸಗಿ ಜೀವನವಿರುತ್ತದೆ. ಸಮಾಜವು ಅವರ ಆಯ್ಕೆಗಳನ್ನು ಗೌರವಿಸಬೇಕು ಮತ್ತು ಅವರನ್ನು ಮುಖ್ಯವಾಹಿನಿಗೆ ತರಲು ಬೆಂಬಲಿಸಬೇಕು ಎಂದು ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಅಭಿಪ್ರಾಯಪಟ್ಟಿದ್ದಾರೆ. ಹೈದರಾಬಾದ್‌ನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಭಾಗವತ್, ಭಾರತೀಯ ಸಂಪ್ರದಾಯಗಳು ಇಂತಹ ಸಮುದಾಯಗಳನ್ನು ಬಹಳ ಹಿಂದೆಯೇ ಗುರುತಿಸಿವೆ ಮತ್ತು ಸಮಾಜದಲ್ಲಿ ಅವಕ್ಕೆ ಸ್ಥಾನ ಕಲ್ಪಿಸಿವೆ ಎಂದು ಹೇಳಿದರು. ಸಲಿಂಗರತಿ (Homosexuality) ಮತ್ತು LGBTQ+ ಸ್ವಭಾವವು ಮಾನವ ಜೀವನದಲ್ಲಿ ಸದಾ ಇತ್ತು ಮತ್ತು ಇದು ಸ್ವಾಭಾವಿಕವಾಗಿದೆ. ಮಹಾಭಾರತದಂತಹ ಪೌರಾಣಿಕ ಗ್ರಂಥಗಳಲ್ಲೂ ಇಂತಹ ಉಲ್ಲೇಖಗಳಿವೆ. ಇಂತಹ ವ್ಯಕ್ತಿಗಳನ್ನು ಸಮಾಜದಿಂದ ಪ್ರತ್ಯೇಕಿಸಿ ನೋಡಬಾರದು, ಬದಲಿಗೆ ಅವರಿಗೆ ಸಮಾಜದಲ್ಲಿ ಸೂಕ್ತ ಗೌರವ ಮತ್ತು ಸ್ಥಾನಮಾನ ನೀಡಬೇಕು ಎಂದು ಭಾಗವತ್ ತಿಳಿಸಿದ್ದಾರೆ. ಜನವರಿ 2023 ರಲ್ಲಿ ಆರ್‌ಎಸ್‌ಎಸ್‌ಗೆ ಸಂಬಂಧಿಸಿದ ನಿಯತಕಾಲಿಕೆಗೆ ನೀಡಿದ ಸಂದರ್ಶನದಲ್ಲಿ ಅವರು, LGBTQ+ ಜನರು ಮಾನವರಾಗಿರುವುದರಿಂದ ಮತ್ತು ಇತರರಂತೆ ಬದುಕುವ ಹಕ್ಕನ್ನು ಹೊಂದಿರುವುದರಿಂದ ಅವರಿಗೆ ತಮ್ಮದೇ…
