ಉಪ್ಪಿನಂಗಡಿ: ಕಳೆದ 4 ದಿನಗಳಿಂದ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ನೇತ್ರಾವತಿ, ಕುಮಾರಧಾರಾ ನದಿಗಳೆರಡೂ ತುಂಬಿ ಹರಿಯಲಾರಂಭಿಸಿವೆ

ನಿನ್ನೆ ರಾತ್ರಿ ಏರಿಕೆ ಕಂಡಿದ್ದ ನದಿ ನೀರು ಇಂದು ಬೆಳಗ್ಗೆ ಇಳಿಮುಖದತ್ತ ಸಾಗಿತ್ತು. ಇದೀಗ ಉಭಯ ನದಿಗಳು ಇಂದು ಮತ್ತೆ ಉಕ್ಕಿ ಹರಿಯುತ್ತಿದ್ದು ಭಕ್ತಾದಿಗಳು ಸಂಗಮದ ನಿರೀಕ್ಷೆಯಲ್ಲಿದ್ದಾರೆ. ಇಲ್ಲಿನ ಶ್ರೀ ಸಹಸ್ರಲಿಂಗೇಶ್ವರ – ಮಹಾಕಾಳಿ ಸ್ನಾನಘಟ್ಟದ ಬಳಿ ನೇತ್ರಾವತಿ ನದಿಗಿಳಿಯುವ 38 ಮೆಟ್ಟಿಲುಗಳಲ್ಲಿ ಇದೀಗ 36 ಮೆಟ್ಟಿಲುಗಳು ಸಂಪೂರ್ಣವಾಗಿ ಮುಳುಗಡೆಗೊಂಡಿದೆ.
- ಹೊಸ್ಮಠದ ನೂತನ ಸೇತುವೆ ದೃಶ್ಯ
ಸಂಗಮದ ಇತಿಹಾಸ ಪ್ರಸಿದ್ಧ ಕ್ಷೇತ್ರ ಉಬಾರ್
ದಾಖಲೆಯ ಪ್ರಕಾರ 1974 ರಂದು ಉಪ್ಪಿನಂಗಡಿಯಲ್ಲಿ ಅತಿ ದೊಡ್ಡ ನೆರೆ ಬಂದು ಸಂಗಮವಾಗಿತ್ತು. ಬಳಿಕ 1997, 2008 ಹಾಗೂ 2009 ಹಾಗೂ 2013ರಲ್ಲಿ ಸಂಗಮವಾಗಿತ್ತು. ಆ ಬಳಿಕ ಸಂಗಮವಾಗಿದ್ದು, 2018 ರಲ್ಲಿ ಆ ಬಾರಿ ಆಗಸ್ಟ್ 14 ಮತ್ತು 16 ರಂದು ಎರಡು ಬಾರಿ ಸಂಗಮವಾಗಿತ್ತು.

ಲಭ್ಯ ಇತಿಹಾಸದ ಪ್ರಕಾರ ವರ್ಷದಲ್ಲಿ ಎರಡು ಬಾರಿ ಸಂಗಮವಾಗಿದ್ದು, ಇದೇ ಮೊದಲಾಗಿತ್ತು. ಬಳಿಕ 2019ರಲ್ಲಿಯೂ ಸಂಗಮವಾಗಿದ್ದು, ಆ ದಿನ ಆಗಸ್ಟ್ 9 ರಂದು ಆದ ಸಂಗಮ 10 ರಂದೂ ಮುಂದುವರಿದಿತ್ತು.

