ಹಿಂದೂ ಧರ್ಮದ ಅಪಮಾನ ಮಾಡುವ ವಿವಾದಿತ ಕಾಮಿಡಿಯನ್ ಕುನಾಲ್ ಕಮ್ರಾ ಅವರ ಆಗಸ್ಟ್ 3ರಂದು ನಡೆಯಬೇಕಿದ್ದ ಕಾಮಿಡಿ ಶೋ, ಹಿಂದೂ ರಾಷ್ಟ್ರ ಸಮನ್ವಯ ಸಮಿತಿ ವೈಟ್ಫೀಲ್ಡ್ ಪೊಲೀಸ್ ಠಾಣೆಗೆ ಮನವಿ ಸಲ್ಲಿಸಿದ ಬಳಿಕ ರದ್ದು ಮಾಡಲಾಗಿದೆ.

ಇದು ಹಿಂದೂ ಸಮಾಜದ ಜಾಗೃತಿ, ಸಂಘಟಿತ ಶಕ್ತಿ ಮತ್ತು ಏಕತೆಯ ವಿಜಯವಾಗಿದೆ. ಹಿಂದೂ ಧರ್ಮದ ಅವಮಾನವನ್ನು ಸಹಿಸುವುದಿಲ್ಲ ಎಂಬ ಸ್ಪಷ್ಟ ಸಂದೇಶ ಇಂದು ಮತ್ತೊಮ್ಮೆ ಮೂಡಿಬಂದಿದೆ. ಈ ಹೋರಾಟದಲ್ಲಿ ಸಹಕರಿಸಿದ ಎಲ್ಲಾ ಹಿಂದೂ ಸಂಘಟನೆಗಳಿಗೆ, ಕಾರ್ಯಕರ್ತರಿಗೆ, ಭಕ್ತರಿಗೆ ಹಾಗೂ ಪೊಲೀಸ್ ಇಲಾಖೆಗೆ ಧನ್ಯವಾದಗಳು ಎಂದು ಹಿಂದೂ ರಾಷ್ಟ್ರ ಸಮನ್ವಯ ಸಮಿತಿ ಪ್ರಕಟಣೆಯಲ್ಲಿ ತಿಳಿಸಿದೆ.

ಪಟ್ಟಂದೂರು ಅಗ್ರಹಾರದ ಉರು ವೈಟ್ಫೀಲ್ಡ್ ರೆಸ್ಟೋರೆಂಟ್ನಲ್ಲಿ ಆಯೋಜಿಸಲಾಗಿರುವ ಕಾರ್ಯಕ್ರಮವನ್ನ ಕಾನೂನು ಮತ್ತು ಸುವ್ಯವಸ್ಥೆ, ಸಾರ್ವಜನಿಕ ಶಾಂತಿ ಹಾಗೂ ಧಾರ್ಮಿಕ ಸಾಮರಸ್ಯದ ಹಿತದೃಷ್ಟಿಯಿಂದ ರದ್ದುಗೊಳಿಸುವಂತೆ ಹಿಂದೂ ರಾಷ್ಟ್ರ ಸಮನ್ವಯ ಸಮಿತಿ ಆಗ್ರಹಿಸಿತ್ತು. 2021ರಲ್ಲೂ ಸಹ ಬೆಂಗಳೂರಿನಲ್ಲಿ ನಡೆಯಬೇಕಿದ್ದ ಅವರ ಕಾಮಿಡಿ ಕಾರ್ಯಕ್ರಮವನ್ನು ವ್ಯಾಪಕ ವಿರೋಧದ ಕಾರಣದಿಂದ ರದ್ದುಗೊಳಿಸಲಾಗಿತ್ತು.

