ಕೊಲೆ ಕೇಸ್ ನಲ್ಲಿ ಜೈಲಿಗೆ ಹೋದವರಿಗೆ ಸಂಘ ಪರಿವಾರದವರು ಸಹಾಯ ಮಾಡ್ತಿಲ್ಲ ಎಂಬ ಹಿಂದೂ ಸಂಘಟನೆಗಳ ಆರೋಪ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಗೃಹ ಸಚಿವ ಪ್ರಿಯಾಂಕ್ ಖರ್ಗೆ, ನಾನು ಮುಂಚೆ ಇಂದ ಇದೇ ಹೇಳ್ತಾ ಇದ್ದೀನಿ ಧರ್ಮ ರಕ್ಷಣೆ, ಗೋ ರಕ್ಷಣೆಗೆ ಬಿಡೋದು ಬಡವರ ಮಕ್ಕಳಿಗೆ. ಇವರ ಮಕ್ಕಳ ಏನ್ ಮಾಡ್ತಾ ಇದ್ದಾರೆ. ಒಬ್ಬ ಬಿಜೆಪಿ ಲೀಡರ್ ಮಗ RSS ನ ಪೂರ್ಣ ಪ್ರಚಾರಕರು ಇದ್ದರೆ ತೋರಿಸಿ ನೋಡೋಣ ಅಂತ ಕಿಡಿಕಾರಿದರು.
ಫುಲ್ ಟೈಂ ಪ್ರಚಾರಕರನ್ನ ಒಬ್ಬ ಬಿಜೆಪಿ ನಾಯಕರ ಮಗನನ್ನ ತೋರಿಸಿ. ವಿಜಯ ದಶಮಿಗೆ ಒಂದು ದಿನ ಚಡ್ಡಿ ಪ್ಯಾಂಟ್ ಹಾಕೋದು. ಕೋಮು ಗಲಭೆಯಲ್ಲಿ ಯಾರು ಸಾಯ್ತಾ ಇದ್ದಾರೆ. ಇವರು ಮಕ್ಕಳ ಹೋಗ್ತಾರಾ? ಪರೇಶ್ ಮೆಸ್ತಾ ಹೆಸರಲ್ಲಿ ಚುನಾವಣೆ ಗೆದ್ರು. ಅವರ ಮನೆಗೆ ಇವರು ಹೋಗಿದ್ದಾರಾ? ಎಷ್ಟೋ ಜನ ತೀರಿ ಹೋದ್ರು. 22,26,28 ವರ್ಷದವರು ತೀರಿ ಹೋದ್ರು. ಈಗಲಾದ್ರು ಯುವಕರು ಜಾಗೃತಿರಾಗಿ ಉದ್ಯೋಗ ಹುಡುಕಿ ಕುಟುಂಬಕ್ಕೆ ನೆರವಾಗಿ ಅಂತ ಕರೆ ಕೊಟ್ಟರು.
ಬಿಜೆಪಿ, ಸಂಘ ಪರಿವಾರದ ನಾಯಕರ ಮಕ್ಕಳು ಸಂಘಟನೆಯಲ್ಲಿ ಇಲ್ಲ. ನಿಮ್ಮನ್ನ ಈ ನರಕಕ್ಕೆ ತಳ್ಳುತ್ತಾರೆ. ನರಕಕ್ಕೆ ತಳ್ಳಿದ ಮೇಲೆ ನಿಮ್ಮ ಸಹಾಯಕ್ಕೆ ಯಾರು ಬರಲ್ಲ. ನನಗೆ ಬೆದರಿಗೆ ಹಾಕಿದ ಯುವಕನಿಗೆ ಲಾಯರ್ ಕೂಡಾ ಇವರು ಕೊಟ್ಟಿಲ್ಲ. ಅವರ ತಾಯಿ ಫೋನ್ ಮಾಡಿದ್ದಕ್ಕೆ ಬಿಟ್ಟೆ. ನೊಂದವರ ಮನೆಗೆ ಇವರು ಹೋಗಲ್ಲ. ರಾಜಕೀಯ ಬೇಳೆ ಬೇಯಿಸಿಕೊಳ್ಳೋಕೆ ಯುವಕರು ಬೇಕು. ಮಹೇಂದ್ರ ಕುಮಾರ್ ಹೇಳ್ತಾ ಇದ್ದರು ರಕ್ತಪಿಪಾಸುಗಳು ಅಂತಿದ್ದರು. ಇದನ್ನ ಎಷ್ಟು ಬೇಗ ತಿಳಿದಿಕೊಳ್ತೀವಿ ಅಷ್ಟು ಒಳ್ಳೆಯದು ಅಂತ ಯುವಕರಿಗೆ ಸಲಹೆ ಕೊಟ್ಟರು.

