ಮಂಗಳೂರು(reporterkarnataka.com): ರಾಜ್ಯದ 25ನೇ ಮುಖ್ಯಮಂತ್ರಿಯಾಗಿ ಡಿ.ಕೆ.ಶಿವಕುಮಾರ್ ಅವರು ಬುಧವಾರ ಪ್ರಮಾಣವಚನ ಸ್ವೀಕರಿಸಿದ ಹಿನ್ನೆಲೆಯಲ್ಲಿ ನಗರದ ಮಲ್ಲಿಕಟ್ಟೆಯ ಜಿಲ್ಲಾ ಕಾಂಗ್ರೆಸ್ ಭವನದಲ್ಲಿ ಪಕ್ಷದ ಕಾರ್ಯಕರ್ತರು ಸಂಭ್ರಮಾಚರಣೆ ನಡೆಸಿದರು.
ಈ ಸಂದರ್ಭ ಕಾರ್ಯಕರ್ತರು ಪಟಾಕಿ ಸಿಡಿಸಿ, ಸಿಹಿ ಹಂಚುವ ಮೂಲಕ ಸಂತಸ ವ್ಯಕ್ತಪಡಿಸಿದರು. ಮುಖಂಡರಾದ ಟಿ.ಕೆ.ಸುಧೀರ್, ಭರತೇಶ್ ಅಮೀನ್, ಜೀತೇಂದ್ರ ಜೆ.ಸುವರ್ಣ, ಯೋಗಿಶ್ ಕುಮಾರ್, ಉದಯ್ ಆಚಾರ್ಯ, ಹನೀಫ್ ಬಜಾಲ್, ವೆಲ್ವಿನ್, ವಿನೋದ್ ರಾಜ್ ಪಣಂಬೂರು, ಲಕ್ಷ್ಮಣ್ ಶೆಟ್ಟಿ, ಪ್ರಶಾಂತ್ ಅಮೀನ್, ಉದಯ್ ಕುಂದರ್ ಉಪಸ್ಥಿತರಿದ್ದರು.

